/newsfirstlive-kannada/media/post_attachments/wp-content/uploads/2024/08/DARSHAN-3-1.jpg)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ನಟ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿದೆ. ಬೆಳಗ್ಗೆ 9.45ರ ಸುಮಾರಿಗೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2024/08/DARSHAN-4-1.jpg)
ನಿಯಮದ ಪ್ರಕಾರ ರಾತ್ರಿ ವೇಳೆ ವಿಚಾರಣಾದೀನ ಕೈದಿಗಳನ್ನು ಸ್ಥಳಾಂತರ ಮಾಡುವಂತಿಲ್ಲ. ಆದ್ರೆ ಭದ್ರತಾ ದೃಷ್ಟಿಯಿಂದ ದರ್ಶನ್​ರನ್ನು ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಕರೆದುಕೊಂಡು ಹೊರಟಿದ್ದರು. ಇದೀಗ ದರ್ಶನ್​​ ಅವರನ್ನು ಕರೆದುಕೊಂಡು ಹೊರಟಿದ್ದ ಪೊಲೀಸ್ ವಾಹನ ಬಳ್ಳಾರಿ ಜೈಲು ತಲುಪಿವೆ. ದರ್ಶನ್ ಬಳ್ಳಾರಿ ಜೈಲು ಸೇರಿದ್ದಾರೆ./newsfirstlive-kannada/media/post_attachments/wp-content/uploads/2024/08/DARSHAN-5-1.jpg)
ದರ್ಶನ್ ನೋಡಲು ಬಳ್ಳಾರಿ ಜೈಲಿನ ಬಳಿ ಅಭಿಮಾನಿಗಳು ಜಮಾಯಿಸಿದ್ದರು. ದರ್ಶನ್​ ಇದ್ದ ವಾಹನ ಬರುತ್ತಿದ್ದಂತೆಯೇ ದರ್ಶನ್, ದರ್ಶನ್ ಎಂದು ಅಭಿಮಾನಿಗಳು ಕೂಗಿದ್ದಾರೆ. ಈ ವೇಳೆ ಕೆಲವು ಅಭಿಮಾನಿಗಳಿಗೆ ಪೊಲೀಸರು ಏಟು ಕೊಟ್ಟಿದ್ದಾರೆ.
ಇದನ್ನೂ ಓದಿ:ಪರಪ್ಪನ ಅಗ್ರಹಾರ to ಬಳ್ಳಾರಿ ಜೈಲು; ದಿಢೀರ್ ಮಾರ್ಗ ಬದಲಾಯಿಸಿದ ಪೊಲೀಸರು.. ಏನಾಯ್ತು?
/newsfirstlive-kannada/media/post_attachments/wp-content/uploads/2024/08/DARSHAN-6-1.jpg)
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಚೇರ್ ಮೇಲೆ ಕುಳಿತು ಸಿಗರೇಟ್ ಸೇದುತ್ತಾ, ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಥರದ ನಟೋರಿಯಸ್ ಪಾತಕಿಗಳ ಜೊತೆಗೆ ಬಿಂದಾಸ್ ಆಗಿ ಮಾತುಕತೆ ಮಾಡುತ್ತಿದ್ದರು. ಇದು ಅವರು ಜೈಲಿನಲ್ಲಿ ಎಷ್ಟು ಆರಾಮಾಗಿ ಇದ್ದಾರೆ, ಎಷ್ಟೆಲ್ಲಾ ಸೌಲಭ್ಯ ಪಡೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಆಗಿದ್ದವು. ಇದಕ್ಕೆ ಬ್ರೇಕ್ ಹಾಕೋದಕ್ಕೆ ಅಂತಾನೆ ಬಂಧಿಖಾನೆ ಅಧಿಕಾರಿಗಳು ದರ್ಶನ್​ರನ್ನ ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2024/08/DARSHAN-8.jpg)
ಇದನ್ನೂ ಓದಿ:Breaking: ಪರಪ್ಪನ ಅಗ್ರಹಾರ ಟು ಬಳ್ಳಾರಿ ಜೈಲು; ದರ್ಶನ್ ಕರೆದೊಯ್ದ ಪೊಲೀಸರು..!
/newsfirstlive-kannada/media/post_attachments/wp-content/uploads/2024/08/DARSHAN-9.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us