ಆರೋಪಿ ದರ್ಶನ್ ಸೆಲ್ಗೆ ಕಾವಲು ಕಾಯುತ್ತಿರುವ ಸಿಸಿಟಿವಿ
ಎಲ್ಲಾ ಫುಟೇಜ್ಗಳನ್ನೂ ಸ್ಟೋರ್ ಮಾಡಲು ಹೊಸ ಹಾರ್ಡ್ ಡಿಸ್ಕ್
ಬೆಂಗಳೂರಲ್ಲಾದ ಯಡವಟ್ಟುಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಆರೋಪಿ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ ಇವತ್ತಿಗೆ 5ನೇ ದಿನ. ಜೈಲಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್, ವೆಸ್ಟರ್ನ್ ಟಾಯ್ಲೆಟ್, ಸರ್ಜಿಕಲ್ ಚೇರ್ಗಾಗಿ ಮನವಿ ಮಾಡಿದ್ದಾರೆ.
ಮತ್ತೊಂದು ಕಡೆ ಜೈಲು ಅಧಿಕಾರಿಗಳು ದರ್ಶನ್ ಪತ್ನಿ ನೀಡಿದ್ದ ಮೆಡಿಕಲ್ ರಿಪೋರ್ಟ್ ಪರಿಶೀಲನೆ ಮಾಡಿದ್ದಾರೆ. ಆದ್ರೆ ಬೆಂಗಳೂರು ಜೈಲು ವೈದ್ಯರ ವರದಿ ಇನ್ನೂ ತಲುಪಿಲ್ಲ. ಆ ವರದಿಯನ್ನೂ ಪರಿಶೀಲಿಸಿದ ಬಳಿಕ ಬಳ್ಳಾರಿ ಜೈಲು ಅಧಿಕಾರಿಗಳು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಿನ ರಿಪೋರ್ಟ್ಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಇನ್ನು ಬಳ್ಳಾರಿ ಜೈಲಲ್ಲಿ ಕೈದಿ 511, ದರ್ಶನ್ ಮೇಲೆ 24 ಗಂಟೆ ನಿಗಾ ಇಡಲಾಗಿದೆ. 3 ಸಿಸಿಟಿವಿ ಕ್ಯಾಮೆರಾ, 3 ಬಾಡಿ ವೋರ್ನ್ ಕ್ಯಾಮೆರಾಗಳನ್ನ ಹಾಕಿ ನಿಗಾ ಇಡಲಾಗಿದೆ. ದರ್ಶನ್ ಓಡಾಟ, ಸಂಬಂಧಿಕರ ಭೇಟಿ ಎಲ್ಲಾ ದೃಶ್ಯಗಳೂ ಸೇವ್ ಆಗಲಿದೆ. ಎಲ್ಲ ದೃಶ್ಯಗಳನ್ನು ಜೈಲು ಅಧಿಕಾರಿಗಳು ಹಾರ್ಡ್ ಡಿಸ್ಕ್ನಲ್ಲಿ ಸೇವ್ ಮಾಡುತ್ತಿದ್ದಾರೆ. ಇನ್ನು ಸಿಸಿಟಿವಿ ಮಾನಿಟರ್ ಮಾಡೋದಕ್ಕೆಂದೇ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ:ಪಾಕ್ ವಿರುದ್ಧ ಚರಿತ್ರೆ ಸೃಷ್ಟಿಸಿದ ಕೃಷ್ಣ ಭಕ್ತ; 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ದಾಖಲೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ