newsfirstkannada.com

ಪಾಕ್ ವಿರುದ್ಧ ಚರಿತ್ರೆ ಸೃಷ್ಟಿಸಿದ ಕೃಷ್ಣ ಭಕ್ತ; 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ದಾಖಲೆ..!

Share :

Published September 2, 2024 at 9:26am

    ಬಾಂಗ್ಲದೇಶದ ಕ್ರಿಕೆಟಿಗ ಲಿಟ್ಟನ್ ದಾಸ್ ಅಮೋಘ ದಾಖಲೆ

    ರಾವಲ್ಪಿಂಡಿಯಲ್ಲಿ ಬಾಂಗ್ಲಾದೇಶ-ಪಾಕ್ ನಡುವೆ ಎರಡನೇ ಟೆಸ್ಟ್

    26 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾ

ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಬಾಂಗ್ಲಾ ದೇಶದ ಸ್ಟಾರ್ ವಿಕೆಟ್ ಕೀಪರ್, ಬ್ಯಾಟ್ಸ್​ಮನ್ ಲಿಟನ್ ದಾಸ್ ಪಾಕ್ ಬೌಲರ್​​ಗಳ ಬೆವರಿಳಿಸಿ 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸಿರದ ದಾಖಲೆ ಬರೆದಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 274 ರನ್​ಗಳಿಗೆ ಮೊದಲ ಇನ್ನಿಂಗ್ಸ್​ ಮುಗಿಸಿತ್ತು. ಬಳಿಕ ಬ್ಯಾಟ್ ಮಾಡಿದ ಬಾಂಗ್ಲಾದ ಟಾಪ್ ಆರ್ಡರ್​ ಬ್ಯಾಟ್ಸ್​​ಮನ್ಸ್ ಕಳಪೆ ಪ್ರದರ್ಶನ ತೋರಿಸಿದರು. ಪ್ರವಾಸಿ ತಂಡ 26 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಮುಶ್ಪಿಕರ್ ರಹೀಮ್ 3, ಶಕಿಬ್ ಅಲ್ ಹಸನ್ 2, ಜಾಕಿರ್ ಹಸನ್ 1, ನಜ್ಮುಲ್ ಹುಸೇನ್ 4, ಮೊಮಿನುಲ್ ಹಕ್ 1, ಶದ್ಮಾಲ್ ಇಸ್ಲಾಂ 10 ರನ್​ಗಳಿ ಔಟ್ ಆಗಿದ್ದರು.

ಇದನ್ನೂ ಓದಿ:ನಾನು DG ಅಲ್ಲ, ಆದರೆ.. ದರ್ಶನ್ ಬಗ್ಗೆ ಮತ್ತೆ ಮಾತನಾಡಿದ ಸಚಿವ ಜಮೀರ್ ಅಹ್ಮದ್..!

ಆಪತ್ತಿನಲ್ಲಿದ್ದ ಬಾಂಗ್ಲಾಗೆ ನೆರವಾಗಿದ್ದು ಲಿಟ್ಟನ್ ದಾಸ್. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದು ಶತಕ ಬಾರಿಸಿ ಅಚ್ಚರಿ ಮೂಡಿಸಿದರು. ಮಹದಿ ಹಸನ್ ಮಿರಾಜ್ ಜೊತೆಗೋಡಿ 7ನೇ ವಿಕೆಟ್​​ಗೆ 165 ರನ್​ಗಳ ಅದ್ಭುತ ಜೊತೆಯಾಟ ನಡೆಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಶ್ರೀಕೃಷ್ಣನ ಸೇವಕ ಎಂದು ಕರೆದುಕೊಳ್ಳುವ ಲಟನ್, 228 ಎಸೆತಗಳಲ್ಲಿ 138 ರನ್​​ಗಳಿಸಿ ಪಾಕಿಸ್ತಾನಕ್ಕೆ ತಕ್ಕ ಪೈಪೋಟಿ ನೀಡಿದ್ದಾರೆ.

ಅವರ ಇನ್ನಿಂಗ್ಸ್​ನಲ್ಲಿ 4 ಸಿಕ್ಸರ್, 13 ಬೌಂಡರಿಗಳು ಬಂದವು. ಇನ್ನು ಮೆಹದಿ ಹಸನ್ 124 ಎಸೆತಗಳಲ್ಲಿ 78 ರನ್​ಗಳಿಸಿದರು. ಅವರು ಒಂದು ಸಿಕ್ಸರ್, 12 ಬೌಂಡರಿ ಬಾರಿಸಿದರು. ಈ ಜೋಡಿಯ ಅದ್ಭುತ ಆಟದಿಂದ ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ಅನ್ನು 262 ರನ್​ಗಳಿಗೆ ಮುಗಿಸಿತು. ಈ ಮೂಲಕ ಪಾಕಿಸ್ತಾನಕ್ಕಿಂತ ಬಾಂಗ್ಲಾ ಕೇವಲ 10 ರನ್​ಗಳ ಹಿನ್ನಡೆ ಅನುಭವಿಸಿತು

147 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ
ಲಿಟನ್ ದಾಸ್ ಶತಕದ ಮೂಲಕ ದೊಡ್ಡ ದಾಖಲೆ ಬರೆದಿದ್ದಾರೆ. ತಂಡದ ಸ್ಕೂರ್ 50ಕ್ಕಿಂತ ಕಡಿಮೆ ಇರುವಾಗ ಬ್ಯಾಟಿಂಗ್​ನಲ್ಲಿ ಅಗ್ರ 5ರಲ್ಲಿ ಸ್ಥಾನ ಪಡೆಯದೇ ಮೂರು ಬಾರಿ ಶತಕ ಗಳಿಸಿದ ಮೊದಲ ಬ್ಯಾಟ್ಸ್​​ಮನ್ ಆಗಿದ್ದಾರೆ. 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇವರನ್ನು ಬಿಟ್ಟರೆ ಬೇರೆಯಾವ ಬ್ಯಾಟ್ಸ್​​ಮನ್ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.

ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್​ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್​​..!

ರಾವಲ್ಪಿಂಡಿ ಟೆಸ್ಟ್​ಗೂ ಮುನ್ನ ಲಿಟನ್ ದಾಸ್ 2021ರ ಚಿತ್ತಾಂಗ್ ಟೆಸ್ಟ್​ನಲ್ಲಿ ಪಾಕಿಸ್ತಾನ, 2022ರ ಮೀರಪುರ ಟೆಸ್ಟ್​ನಲ್ಲಿ ಶ್ರೀಲಂಕಾ ವಿರುದ್ಧ ಈ ಸಾಧನೆ ಮಾಡಿದ್ದರು. ಚಿತ್ತಾಂಗ್ ಟೆಸ್ಟ್​ನಲ್ಲಿ ಶತಕ ಬಾರಿಸಿದಾಗ ಬಾಂಗ್ಲದೇಶ 49 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಮೀರಪುರದಲ್ಲಿ ಬಾಂಗ್ಲಾದೇಶದ 24 ರನ್​ಗಳಿಗೆ ಕುಸಿದಿತ್ತು, ಆಗ ಲಿಟ್ಟನ್ ದಾಸ್ ಶತಕ ಗಳಿಸಿದ್ದರು. ಇನ್ನು ಲಿಟನ್ ದಾಸ್ ತಮ್ಮ ಇನ್​ಸ್ಟಾಗ್ರಾಮ್​ ಬಯೋದಲ್ಲಿ ತಾವು ಶ್ರೀ ಕೃಷ್ಣನ ಸೇವಕ ಮತ್ತು ಪ್ರಾಣಿಗಳ ಪ್ರೇಮಿ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಾಕ್ ವಿರುದ್ಧ ಚರಿತ್ರೆ ಸೃಷ್ಟಿಸಿದ ಕೃಷ್ಣ ಭಕ್ತ; 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ದಾಖಲೆ..!

https://newsfirstlive.com/wp-content/uploads/2024/09/Litton-das.jpg

Load More