newsfirstkannada.com

‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್​ಗೆ ಕೊಟ್ಟ ವಾರ್ನಿಂಗ್ ಏನು..?

Share :

Published June 16, 2024 at 1:12pm

Update June 16, 2024 at 1:13pm

    ಮೈಸೂರು ನಟನ ಮೈಸೂರಲ್ಲೇ ಹೆಡೆಮುರಿ ಕಟ್ಟಿದ್ದು ಮೈಸೂರಿನ ಸೂಪರ್ ಕಾಪ್

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಗೌಡ ಗ್ಯಾಂಗ್ ಅರೆಸ್ಟ್

    ನಾನ್ ಬರ್ತೀನಿ ಮುಂದೆ ನಡೀರಿ.. ಎಂದು ಗತ್ತಿನಲ್ಲಿ ಹೇಳಿದ್ದ ನಟ ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ನಟಿ ಪವಿತ್ರ ಗೌಡರ ಬಂಧನ ಆಗಿದೆ. ಇದೇ ಕೇಸ್​ನಲ್ಲಿ ಇಲ್ಲಿಯವರೆಗೆ 18 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬೆಂಗಳೂರಲ್ಲಿ ತೀವ್ರ ವಿಚಾರಣೆ ನಡೆಯುತ್ತಿದೆ.

ಮೈಸೂರಿನ ಸೂಪರ್ ಕಾಪ್

ಜನಪ್ರಿಯ ನಟನ ಬಂಧನಕ್ಕೆ ಸಂಬಂಧಿಸಿದಂತೆ ಇದೀಗ ಒಂದೊಂದೇ ವಿಚಾರಗಳು ಬೆಳಕಿಗೆ ಬರುತ್ತಿವೆ. ಅಂದ್ಹಾಗೆ ಮೈಸೂರು ನಟನನ್ನು ಮೈಸೂರಲ್ಲೇ ಹೆಡೆಮುರಿ ಕಟ್ಟಿದ್ದು ಮೈಸೂರಿನ ಸೂಪರ್ ಕಾಪ್ ಅನ್ನೋದು ವಿಶೇಷ. ಮೈಸೂರಿನ ಇಟ್ಟಿಗೆಗೂಡಿನ ನಿವಾಸಿ ಆಗಿರುವ ಎಸಿಪಿ ಚಂದನ್ ಕುಮಾರ್ ದರ್ಶನ್​​ರನ್ನು ಬಂಧಿಸಿದವರಾಗಿದ್ದಾರೆ.

ಇದನ್ನೂ ಓದಿ:ದರ್ಶನ್ ಜೊತೆಯಲ್ಲೇ ಇರ್ತಾರೆ ಮೂವರು ದುಶ್ಮನ್​​ಗಳು.. ಪ್ರತಿ ಅನಾಹುತಗಳಿಗೂ ಕಾರಣ ಅವೇ..!

ಮಾತುಕತೆ ಹೇಗಿತ್ತು..?

ಪೊಲೀಸ್ ಆಫೀಸರ್ ಚಂದನ್ ಕುಮಾರ್ ಅಂಡ್ ಆರೋಪಿ ದರ್ಶನ್ ಒಂದೇ ಏರಿಯಾದವರಾಗಿದ್ದಾರೆ. ಮೈಸೂರು ಚಿರಪರಿಚಿತವಾಗಿರುವ ಕಾರಣದಿಂದಲೇ ಚಂದನ್ ಕುಮಾರ್ ಎಂಟ್ರಿಯಾಗಿದ್ದಾರೆ. ಖುದ್ದು ಮೈಸೂರಿಗೆ ಬಂದು‌ ದರ್ಶನ್ ಅವರನ್ನು ಚಂದನ್ ಕುಮಾರ್ ಬಂದಿಸಿದ್ದಾರೆ. ಬಂಧನದ ವೇಳೆ ಇಬ್ಬರ ನಡುವೆ ಮಾತುಕತೆ ನಡೆದಿದೆ.

ನಾನ್ ಬರ್ತೀನಿ ಮುಂದೆ ನಡೀರಿ.. ಎಂದು ದರ್ಶನ್ ಗತ್ತಿನಲ್ಲಿ ಹೇಳಿದ್ದಾರೆ. ನಿಮ್ಮ ವೆಹಿಕಲ್​ನಲ್ಲಿ ಬಂದ್ರೆ ತಪ್ಪು ತಿಳ್ಕೋತಾರೆ, ನನ್ ಕಾರಲ್ಲಿ‌ ಬರ್ತೀನಿ ಎಂದು ದರ್ಶನ್ ಹೇಳಿದ್ದಾರಂತೆ. ಆಗ ನೀನ್ಯಾರು? ನಿನ್ ಕಥೆ ಎಲ್ಲ ಗೊತ್ತು.. ಮೊದಲು ಜೀಪ್ ಹತ್ತು ಎಂದು ಅಧಿಕಾರಿ ಚಂದನ್ ಕುಮಾರ್​ ಪೊಲೀಸ್ ಸ್ಟೈಲ್​ನಲ್ಲಿ ಹೇಳಿದ್ದಾರಂತೆ.

ಇದನ್ನೂ ಓದಿ:ಸೂತ್ರಧಾರಿಗಳ ತಾಳಕ್ಕೆ ಕುಣಿದ ಪಾತ್ರಧಾರಿಗಳು.. ಯಾರು ಯಾವ ರೋಲ್ ನಿಭಾಯಿಸಿದರು..?

ನಾನೂ ಇದೇ ಊರೇ, ನನಗೂ ಎಲ್ಲಾ ಗೊತ್ತು.. ಸುಮ್ನೆ ಜೀಪ್ ಹತ್ತು ಎಂದು ಸೂಪರ್ ಕಾಪ್ ಹೇಳಿದ್ದಾರೆ. ಆಗ ದರ್ಶನ್ ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ. ಆಗ ಮೈಸೂರಿನ ಕುವೆಂಪುನಗರದ ಗೋಲ್ಡ್ ಜಿಮ್​ನಿಂದ ದರ್ಶನ್​​ರನ್ನು ಬೆಂಗಳೂರಿಗೆ ಕರೆದುಕೊಂಡು ಹೊರಟಿದ್ದಾರೆ ಎಂದು ತಿಳಿದುಬಂದಿದೆ.

ಯಾರು ಈ ಸೂಪರ್ ಕಾಪ್​..?
ಸೂಪರ್ ಕಾಪ್ ಚಂದನ್ ಕುಮಾರ್ ಮೈಸೂರಿನ ಇಟ್ಟಿಗೆಗೂಡು ಮೂಲದವರು. ತಂದೆ ನೀಲಕಂಠ ಹಾಗು ತಾಯಿ ಮಂಜುಳಾ ದಂಪತಿ ಪುತ್ರರಾಗಿರುವ ಚಂದನ್ ಕುಮಾರ್, ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲಿ ಪಡೆದರು. ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಹೈಸ್ಕೂಲ್, ಪಿಯುಸಿ ಮುಗಿಸಿ ವಿದ್ಯಾವರ್ಧಕ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿದರು. ಮೈಸೂರಿನ ಇನ್ಫೋಸಿಸ್​​ನಲ್ಲಿ ಕೆಲವು ವರ್ಷ ವೃತ್ತಿ ಆರಂಭಿಸಿದ್ದರು. ನಂತರ ಆಸ್ಟ್ರೇಲಿಯದಲ್ಲಿ ಕೆಲಕಾಲ ಟೆಕ್ಕಿಯಾಗಿ ಕೆಲಸ ಮಾಡಿ ನಂತರ ಕೆಪಿಎಸ್ಸಿ ಪರೀಕ್ಷೆ ಬರೆದು ನಾಲ್ಕನೇ ಱಂಕ್ ಪಡೆದುಕೊಂಡರು. ಡಿವೈಎಸ್ಪಿ ಟ್ರೈನಿಂಗ್ ವೇಳೆ 5 ಚಿನ್ನದ ಪದಕ ಪಡೆದು ಸಾಧನೆ ಮಾಡಿದ ಹೆಗ್ಗಳಿಕೆ ಅವರದ್ದು.

ಇದನ್ನೂ ಓದಿ:ಅಪ್ಪನ ಜೀವ ತೆಗೆದ ದರ್ಶನ್ ಮೇಲಿನ ಅಭಿಮಾನ.. ಪ್ರಕರಣದಲ್ಲಿ ಅನು ಪಾತ್ರ ಏನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನೀನ್ಯಾರು? ನಿನ್ ಕಥೆ ಎಲ್ಲಾ ಗೊತ್ತು..’ ಬಂಧನದ ವೇಳೆ ಖಡಕ್ ಅಧಿಕಾರಿ ದರ್ಶನ್​ಗೆ ಕೊಟ್ಟ ವಾರ್ನಿಂಗ್ ಏನು..?

https://newsfirstlive.com/wp-content/uploads/2024/06/DARSHAN-31.jpg

Load More