/newsfirstlive-kannada/media/post_attachments/wp-content/uploads/2024/06/darshan18.jpg)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿ ಒಟ್ಟು 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಾಗಿರುವ ಎಲ್ಲಾ ಆರೋಪಿಗಳ ವಿಚಾರಣೆಯು ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ದರ್ಶನ್ ಮತ್ತು ಬೇರೆ ಆರೋಪಿಗಳಿಗೆ ಸ್ಪೆಷಲ್ ಟ್ರೀಟ್ಮೆಂಟ್ ಅನುಮಾನ -ಉಮಾಪತಿ ಸ್ಫೋಟಕ ಹೇಳಿಕೆ
ತನಿಖೆ ವೇಳೆ ಇತರೆ ಆರೋಪಿಗಳು ಬಾಯಿ ಬಿಟ್ಟರೂ ದರ್ಶನ್ ಮಾತ್ರ ಸೈಲೆಂಟ್ ಆಗಿದ್ದಾರೆ. ಏನೇ ಕೇಳಿದರೂ ನಾನವನಲ್ಲ, ನನಗೇನೂ ಗೊತ್ತಿಲ್ಲ ಎಂದು ಉತ್ತರ ನೀಡ್ತಿದ್ದಾರಂತೆ. ಆದರೆ ಪ್ರಕರಣದಲ್ಲಿ ದರ್ಶನ್ ವಿರುದ್ಧದ ಸಾಕ್ಷಿಗಳು ಬಲವಾಗಿವೆ. ಕಾಲ್ ಡಿಟೇಲ್ಸ್ನಿಂದ ಹಿಡಿದು ಎಲ್ಲವೂ ಬಲವಾದ ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ ಎನ್ನಲಾಗಿದೆ.
ಸಿಕ್ಕವೆ ಎನ್ನಲಾಗಿರುವ ಎವಿಡೆನ್ಸ್ಗಳೇನು?
- ಸಾಕ್ಷಿ 01 : ರೇಣುಕಾಸ್ವಾಮಿ ಕೊಲೆಯಾದ ಸ್ಥಳದಲ್ಲಿ ಆರೋಪಿಗಳಿರುವ ಟವರ್ ಡಂಪ್
- ಸಾಕ್ಷಿ 02 : ದರ್ಶನ್, ಪವಿತ್ರಾಗೌಡ, ನಾಗ, ವಿನಯ್, ಸೇರಿ 6 ಮಂದಿಯ ಟವರ್ ಡಂಪ್
- ಸಾಕ್ಷಿ 03 : ಪೊಲೀಸ್ ಅಧಿಕಾರಿಗಳ ಜೊತೆ ಕೃತ್ಯದ ಬಗ್ಗೆ ಚರ್ಚಿಸಿರೋ ಕಾಲ್ ಡಿಟೇಲ್ಸ್
- ಸಾಕ್ಷಿ 04 : ಕೃತ್ಯದ ನಂತರ ಕಾರ್ತಿಕ್, ಕೇಶವ್, ನಿಖಿಲ್ ಕೊಲೆ ಮಾಡಿದ್ದಾಗಿ ಸರಂಡರ್
- ಸಾಕ್ಷಿ 05 : ಮೃತದೇಹ ಬಿಸಾಡೋಕೆ ತಲಾ 5 ಲಕ್ಷ ನೀಡಿದ್ದಾಗಿ ಆರೋಪಿ ದೀಪಕ್ ಹೇಳಿಕೆ
- ಸಾಕ್ಷಿ 06 : ದೀಪಕ್ ವಿಚಾರಣೆ ವೇಳೆ ಪ್ರದೋಶ್, ಪವನ್, ವಿನಯ್ ಹೆಸರು ಬಹಿರಂಗ
- ಸಾಕ್ಷಿ 07 : ವಿನಯ್, ಪವನ್, ಪ್ರದೋಶ್ ವಿಚಾರಣೆ ವೇಳೆ ದರ್ಶನ್, ಪವಿತ್ರಾಗೌಡ ಹೆಸರು
- ಸಾಕ್ಷಿ 08 : ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳಿಸಿದ್ದನ್ನು ದರ್ಶನ್ಗೆ ಹೇಳಿದ್ದ ಪವಿತ್ರಾ ಗೌಡ
- ಸಾಕ್ಷಿ 09 : ವಿಚಾರಣೆ ವೇಳೆ ಪೊಲೀಸರೆದುರು ಈ ಬಗ್ಗೆ ಹೇಳಿಕೊಂಡಿರುವ ಪವಿತ್ರಾ ಗೌಡ
- ಸಾಕ್ಷಿ 10 : ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನಿಂದ ಕಿಡ್ನಾಪ್
- ಸಾಕ್ಷಿ 11 : ಪವನ್, ಪವಿತ್ರಾ, ದರ್ಶನ್ ಹೇಳಿದಂತೆ ರೇಣುಕಾ ಕರೆತಂದ್ವಿ ಎಂದು ರಘು ಹೇಳಿಕೆ
- ಸಾಕ್ಷಿ 12 : ಶೆಡ್ನಲ್ಲಿ ಮೃತ ರೇಣುಕಾಸ್ವಾಮಿಯ ರಕ್ತದ ಕಲೆ, ಕೂದಲು, ಬೆವರಿನ ಸ್ಯಾಂಪಲ್ಸ್
- ಸಾಕ್ಷಿ 13 : ಆರೋಪಿಗಳ ಫಿಂಗರ್ಪ್ರಿಂಟ್, ಫುಟ್ಪ್ರಿಂಟ್, ಬ್ಲಡ್ ಸ್ಯಾಂಪಲ್ ಪಡೆದ ಪೊಲೀಸರು
- ಸಾಕ್ಷಿ 14 : ರೇಣುಕಾಸ್ವಾಮಿ ಫಿಂಗರ್ಪ್ರಿಂಟ್ಗೂ, ಆರೋಪಿಗಳ ಫಿಂಗರ್ಪ್ರಿಂಟ್ ಮ್ಯಾಚ್ ಸಾಧ್ಯತೆ
- ಸಾಕ್ಷಿ 15 : ಕೊಲೆ ನಂತರ ದರ್ಶನ್ಗೆ ನಾರ್ಮಲ್, ವಾಟ್ಸ್ಆ್ಯಪ್ ಕಾಲ್ ಮಾಡಿದ್ದ ಆರೋಪಿಗಳು
- ಸಾಕ್ಷಿ 16 : ಒಂದೇ ಲೊಕೇಷನ್ನಲ್ಲಿ ಆರೋಪಿಗಳ ಮೊಬೈಲ್ CDR, ಟವರ್ ಡಂಪ್ ಪತ್ತೆ
ಇದನ್ನೂ ಓದಿ:ದರ್ಶನ್ ವಿಚಾರದಲ್ಲಿ ಪೊಲೀಸರಿಗೇ ಸಂಕಷ್ಟ ಎದುರಾಗುತ್ತಾ? ಠಾಣೆಯಲ್ಲಿ ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ