Advertisment

ರೇಣುಕಾಸ್ವಾಮಿ ಅಪಹರಣ ಮಾಡಿದ್ದ ಆರೋಪಿಯೂ ಅರೆಸ್ಟ್.. ಯಾರು ಈತ ಭಯಂಕರ..?

author-image
Ganesh
Updated On
ರೇಣುಕಾಸ್ವಾಮಿ ಅಪಹರಣ ಮಾಡಿದ್ದ ಆರೋಪಿಯೂ ಅರೆಸ್ಟ್.. ಯಾರು ಈತ ಭಯಂಕರ..?
Advertisment
  • ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್
  • ಕೊಲೆಗೂ ಮೊದಲು ರೇಣುಕಾಸ್ವಾಮಿ ಅಪಹರಣ ಮಾಡಲಾಗಿತ್ತು
  • ಅಪಹರಣ ಬಳಿಕ ಸೆಡ್​ನಲ್ಲಿ ಕೂಡಿಟ್ಟು ಹಲ್ಲೆ ಮಾಡಿದ ಆರೋಪ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅರೆಸ್ಟ್ ಆಗಿದ್ದಾರೆ. ಬಂಧನಕ್ಕೆ ಒಳಪಡಿಸಿರುವ ಬೆಂಗಳೂರು ಕಾಮಾಕ್ಷಿಪಾಳ್ಯ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Advertisment

ಕೊಲೆಯಾದ ರೇಣುಕಾಸ್ವಾಮಿ ನಟಿ ಪವಿತ್ರಗೌಡಗೆ ಮೆಸೇಜ್ ಮಾಡುತ್ತಿದ್ದ ಎಂಬ ಆರೋಪ ಈ ಪ್ರಕರಣದಲ್ಲಿ ಕೇಳಿಬಂದಿದೆ. ಹೀಗಾಗಿ ಪವಿತ್ರ ಗೌಡ ಅವರು, ಅನೇಕ ಬಾರಿ ರೇಣುಕಾಸ್ವಾಮಿಗೆ ವಾರ್ನಿಂಗ್ ಕೂಡ ಮಾಡಿದ್ದರಂತೆ. ಕೊನೆಗೆ ವಿಚಾರ ದರ್ಶನ್ ಅವರ ಗಮನಕ್ಕೆ ಬಂದಿದೆಯಂತೆ.

ಇದನ್ನೂ ಓದಿ:ಕೊಲೆ ಆರೋಪ ಪ್ರಕರಣ.. ದರ್ಶನ್​​ಗೆ ಈ ಮೂರು ಕೇಸ್​ಗಳಲ್ಲಿ ಕಂಟಕ ಪಕ್ಕಾ..?

publive-image

ಕೊನೆಗೆ ದರ್ಶನ್​ ಅವರ ಆಪ್ತರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದರು. ಈ ಮೂಲಕ ರೇಣುಕಾಸ್ವಾಮಿಯನ್ನು ದರ್ಶನ್ ಆಪ್ತರು ಸಂಪರ್ಕ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾತುಕತೆ ನಡೆದ ಬಳಿಕ ಆತನನ್ನು ದರ್ಶನ್ ಬಳಿಗೆ ಎತ್ತಾಕೊಂಡು ಬರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Advertisment

ಈ ಅಪಹರಣ ಆರೋಪ ಕೇಸ್​ನಲ್ಲಿ ರಘು ದರ್ಶನ್ ಕಿಂಗ್​ಪಿನ್​​ ಎನ್ನಲಾಗಿದೆ. ರಘು ದರ್ಶನ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಎಂಬ ಆರೋಪ ಇದೆ. ರಘು ದರ್ಶನ್ (ರಾಘವೇಂದ್ರ) ಪ್ರಸ್ತುತ ಅಖಿಲ ಕರ್ನಾಟಕ ದರ್ಶನ್ ತೂಗುದೀಪ್ ಸೇನಾದ ಚಿತ್ರದುರ್ಗ ಜಿಲ್ಲಾಧ್ಯಕ್ಷ. ಹಿಂದೆ ರಘು ದರ್ಶನ್ ಮಗಳ ಬರ್ತಡೇಗೆ ನಟ ದರ್ಶನ್ ಆಗಮಿಸಿದ್ದರು. ರಘು ದರ್ಶನ್ ಜೊತೆ ದರ್ಶನ್ ತೂಗುದೀಪ ಇರುವ ಫೋಟೋಗಳು ನ್ಯೂಸ್ ಫಸ್ಟ್​ಗೆ ಲಭ್ಯವಾಗಿವೆ. ಈಗಾಗಲೇ ಆರೋಪಿ ರಘು ದರ್ಶನ್​​ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ:ದರ್ಶನ್​ ಅಭಿಮಾನಿ ಆಗಿದ್ದ ರೇಣುಕಾಸ್ವಾಮಿ -ವಿಜಯಲಕ್ಷ್ಮೀ ಸಂಸಾರ ಚೆನ್ನಾಗಿರಲಿ ಅಂತಾ ಬಯಸಿದ್ನಂತೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment