newsfirstkannada.com

ರೇಣುಕಾಸ್ವಾಮಿ ಮಾಡ್ತಿದ್ದ ಮೆಸೇಜ್ ಏನಾಗಿತ್ತು..? ಪವಿತ್ರಗೌಡ ತನಿಖೆಗೆ ಟ್ವಿಸ್ಟ್ ಕೊಡಲು ಮುಂದಾದ ಪೊಲೀಸ್..!

Share :

Published June 12, 2024 at 7:03am

    ನಟರು ಸಾರ್ವಜನಿಕ ಜೀವನದಲ್ಲಿ ಎಲ್ಲರಿಗೂ ಮಾದರಿ ಆಗಬೇಕು

    ಕೊಲೆ ಕೇಸ್​ನಲ್ಲಿ ರಿಯಲ್​ ಲೈಫ್​ನಲ್ಲೇ ದರ್ಶನ್​ ಖಳನಾಯಕನಾದ

    ಪವಿತ್ರಾಗೌಡ ಮೊಬೈಲ್ ಪರಿಶೀಲನೆಗೆ ಪೊಲೀಸರ ಸಿದ್ಧತೆ ಹೇಗಿದೆ?

ಕೋಟ್ಯಂತರ ಅಭಿಮಾನಿಗಳ ಯಜಮಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಅನ್ನೋ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಕರೆಸಿ ಹಲ್ಲೆ ಮಾಡಿ ಹತ್ಯೆಗೈದಿರೋ ಆರೋಪ ಕೇಳಿಬಂದಿದೆ. ಈ ಕೇಸ್‌ನಲ್ಲಿ ನಟ ದರ್ಶನ್ ಸೇರಿ 13 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಇದೀಗ ಪೊಲೀಸರು ಟೆಕ್ನಿಕಲ್ ಎವೆಡೆನ್ಸ್ ಕಲೆ ಹಾಕ್ತಿದ್ದು ಅದರ ಆಧಾರದಲ್ಲಿ ಪ್ರಕರಣದ ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್ ಪತ್ನಿ ವಾರ್ನಿಂಗ್ ಕೊಟ್ರೂ ಬಿಡಲಿಲ್ಲ.. ದಾಸನ ಬಾಳಲ್ಲಿ ಬಂದು ತಪ್ಪು ಮಾಡಿಬಿಟ್ರಾ ಪವಿತ್ರಾ ಗೌಡ?

ನಟ ದರ್ಶನ್‌ ವಿರುದ್ಧ ಕೊಲೆ ಆರೋಪದ ತನಿಖೆ ಚುರುಕು

ಕೊಲೆ ಕೇಸ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಂದರ್​ ಆಗಿದ್ದಾರೆ. ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ ಮಾಡಿದ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.. ದರ್ಶನ್‌ ಮತ್ತು ಪವಿತ್ರಾಗೌಡ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ ಸೇರಿದ್ದಾರೆ. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರೋ ಪೊಲೀಸರು ಪವಿತ್ರಾಗೌಡ ಮೊಬೈಲ್ ಪರಿಶೀಲನೆ ಮಾಡಲು ಸಿದ್ಧತೆ ನಡೆಸಿದ್ದಾರೆ. ರೇಣುಕಾಸ್ವಾಮಿ ಮಾಡಿದ್ದ ಕಮೆಂಟ್‌, ಅದಕ್ಕೆ ಪವಿತ್ರಾ ಗೌಡ ನೀಡಿದ್ದ ರಿಪ್ಲೇ ಬಗ್ಗೆ ಟೆಕ್ನಿಕಲ್ ಎಬಿಡೆನ್ಸ್‌ ಮುಂದಿಟ್ಟು ವಿಚಾರಣೆ ನಡೆಸಲು ಸಜ್ಜಾಗಿದ್ದಾರೆ. ಒಂದ್ವೇಳೆ ಮೆಸೇಜ್​ ಡಿಲೀಟ್​ ಆಗಿದ್ರೆ ಮೊಬೈಲ್ ರಿಟ್ರೀವ್​ ಮಾಡಿ ಎವಿಡೆನ್ಸ್ ಕಲೆಹಾಕುವ ಸಾಧ್ಯತೆ ಇದೆ.

ಪವಿತ್ರಾ ಗೌಡ ಮೊಬೈಲ್ ಪರಿಶೀಲನೆ

  • ಪವಿತ್ರಾ ಗೌಡ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ಸಿದ್ಧತೆ
  • ಮೆಸೇಜ್ ಡಿಲೀಟ್ ಆಗಿದ್ರೆ FSLಗೆ ಕಳುಹಿಸಿ ಮೊಬೈಲ್ ರಿಟ್ರೀವ್
  • ಇಬ್ಬರ ನಡುವಿನ ಸಂಭಾಷಣೆಯ ಮಾಹಿತಿ ಪಡೆಯಲು ಸಿದ್ಧತೆ
  • ಯಾವ ವಿಚಾರ ಸಂಬಂಧ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ?
  • ಯಾವ ವಿಚಾರಕ್ಕೆ ಅವಾಚ್ಯವಾಗಿ ಸಂದೇಶ ಕಳುಹಿಸಲಾಗಿತ್ತು?
  • ಈ ಬಗ್ಗೆ ಪವಿತ್ರಾ ಗೌಡರಿಂದ ಮಾಹಿತಿ ಕಲೆ ಹಾಕುವ ಪೊಲೀಸರು

ಇದನ್ನೂ ಓದಿ: ತವರಿನಲ್ಲೇ ರೇಣುಕಾಸ್ವಾಮಿ ಅಂತ್ಯಕ್ರಿಯೆ.. ಬಿಕ್ಕಿ ಬಿಕ್ಕಿ ಅತ್ತ ಕುಟುಂಬಸ್ಥರು!

ದರ್ಶನ್ ಸೇರಿ ಎಲ್ಲರ ಮೊಬೈಲ್‌ ಸಿಡಿಆರ್ ಪರಿಶೀಲನೆಗೆ ಸಿದ್ಧತೆ

ಪವಿತ್ರಾ ಗೌಡ ಮೊಬೈಲ್ ಅಷ್ಟೇ ಅಲ್ಲ, ಎಲ್ಲಾ ಆರೋಪಿಗಳ ಮೊಬೈಲ್ ನಂಬರ್ CDR ತೆಗೆದು ಪರಿಶೀಲನೆ ಮಾಡಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೂ ಹತ್ಯೆಯ ವೇಳೆ ನಟ ದರ್ಶನ್ ನಂಬರ್ ಯಾವ ಲೋಕೆಷನ್​ನಲ್ಲಿತ್ತು? ಆರೋಪಿಗಳ ಜೊತೆ ದರ್ಶನ್ ಯಾವಾಗೆಲ್ಲ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಅದೇನೇ ಇರಲಿ ಸಿನಿಮಾ ನಟರು ಸಾರ್ವಜನಿಕ ಜೀವನದಲ್ಲಿ ಎಲ್ಲರಿಗೂ ಮಾದರಿಯಾಗಿರಬೇಕು, ಆದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂತಹ ಪ್ರಕರಣಗಳಿಂದಲೇ ವಿವಾದಕ್ಕೊಳಗಾಗ್ತಿರೋದು ಅಭಿಮಾನಿಗಳನ್ನೇ ಘಾಸಿಗೊಳಿಸಿರೋದಂತೂ ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಮಾಡ್ತಿದ್ದ ಮೆಸೇಜ್ ಏನಾಗಿತ್ತು..? ಪವಿತ್ರಗೌಡ ತನಿಖೆಗೆ ಟ್ವಿಸ್ಟ್ ಕೊಡಲು ಮುಂದಾದ ಪೊಲೀಸ್..!

https://newsfirstlive.com/wp-content/uploads/2024/06/DARSHAN_PAVITRA.jpg

Load More