Advertisment

Breaking: ಪರಪ್ಪನ ಅಗ್ರಹಾರ to ಬಳ್ಳಾರಿ ಜೈಲು; ದರ್ಶನ್ ಕರೆದೊಯ್ದ ಪೊಲೀಸರು..!

author-image
Ganesh
Updated On
ದರ್ಶನ್​ ಬಳ್ಳಾರಿ ಜೈಲಿನಲ್ಲಿ ಇರುವುದರಿಂದ ಏನು ನಷ್ಟ.. ಜೈಲು ಅಧಿಕಾರಿಗಳಿಗೆ ಏನು ಲಾಭ..?
Advertisment
  • ಕೊಲೆ ಆರೋಪಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್​
  • ಬೊಲೆರೋದಲ್ಲಿ ಕರೆದೊಯ್ಯುತ್ತಿರುವ ಪೊಲೀಸರು
  • ಬೆಂಗಳೂರು ಜೈಲಿನಿಂದ ಬಳ್ಳಾರಿ ‘ಖಾರಾ’ಗೃಹಕ್ಕೆ ಶಿಫ್ಟ್​

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದ್ದ ವಿಚಾರ ಬಯಲಾಗಿ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಬೆನ್ನಲ್ಲೇ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಕೋರ್ಟ್​ ಅನುಮತಿ ನೀಡಿತ್ತು. ಆದ್ರೆ, ರಾಜಾತಿಥ್ಯ ಸಂಬಂಧದ ಪ್ರಕರಣದಲ್ಲಿ ವಿಚಾರಣೆ ಬಾಕಿದ್ದ ಕಾರಣ ಶಿಫ್ಟ್​ ಮಾಡಲಿರಲಿಲ್ಲ.. ಆದ್ರೀಗ ಪ್ರಾಥಮಿಕ ತನಿಖೆ ಮುಕ್ತಾಯವಾಗಿದ್ದು, ನಟ ದರ್ಶನ್​ರನ್ನು ಭಯಾನಕ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಗ್ತಿದೆ.

Advertisment

ಭದ್ರತಾ ದೃಷ್ಟಿಯಿಂದ ರಾತ್ರೋ ರಾತ್ರಿ ದರ್ಶನ್​ ಶಿಫ್ಟ್
ನಿಯಮದ ಪ್ರಕಾರ ರಾತ್ರಿ ವೇಳೆ ವಿಚಾರಣಾದೀನ ಕೈದಿಗಳನ್ನು ಸ್ಥಳಾಂತರ ಮಾಡುವಂತಿಲ್ಲ. ಆದ್ರೆ ಭದ್ರತಾ ದೃಷ್ಟಿಯಿಂದ ದರ್ಶನ್​ರನ್ನು ರಾತ್ರೋ ರಾತ್ರಿ ಬಳ್ಳಾರಿಗೆ ಜೈಲಿನತ್ತ ಕರೆದೊಯ್ಯಲಾಗ್ತಿದೆ. ಜೈಲು ಸಿಬ್ಬಂದಿ ಬಂದೋಬಸ್ತ್​ನಲ್ಲಿ ರಾತ್ರಿಯೇ ಕರೆದೊಯ್ದಿದ್ದಾರೆ.

ಇದನ್ನೂ ಓದಿ:ಜೈಲಲ್ಲಿ ತಾವೇ ತೋಡಿದ ಹಳ್ಳಕ್ಕೆ ಬಿದ್ದ ದರ್ಶನ್.. ಇನ್ಮೇಲೆ ಏನೇನು ಆಗುತ್ತೆ ಗೊತ್ತಾ..?

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಚೇರ್ ಮೇಲೆ ಕುಳಿತು ಸಿಗರೇಟ್ ಸೇದುತ್ತಾ, ವಿಲ್ಸನ್ ಗಾರ್ಡನ್‌ ನಾಗ, ಕುಳ್ಳ ಸೀನ ಥರದ ನಟೋರಿಯಸ್ ಪಾತಕಿಗಳ ಜೊತೆಗೆ ಬಿಂದಾಸ್ ಆಗಿ ಮಾತುಕತೆ ಮಾಡುತ್ತಿದ್ದರು. ಇದು ಅವರು ಜೈಲಿನಲ್ಲಿ ಎಷ್ಟು ಆರಾಮಾಗಿ ಇದ್ದಾರೆ, ಎಷ್ಟೆಲ್ಲಾ ಸೌಲಭ್ಯ ಪಡೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಆಗಿದ್ದವು. ಇದಕ್ಕೆ ಬ್ರೇಕ್ ಹಾಕೋದಕ್ಕೆ ಅಂತಾನೆ ಬಂಧಿಖಾನೆ ಅಧಿಕಾರಿಗಳು ದರ್ಶನ್​ರನ್ನ ಬಳ್ಳಾರಿಗೆ ಶಿಫ್ಟ್ ಮಾಡಲಾಗ್ತಿದೆ.

Advertisment

ದರ್ಶನ್ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ, ಪರಪ್ಪನ ಅಗ್ರಹಾರದಲ್ಲಿ ಎಷ್ಟೆಲ್ಲಾ ಅಕ್ರಮಗಳು ಎಗ್ಗಿಲ್ಲದೇ ನಡೆಯುತ್ತಿವೆ ಎಂಬುದು ಗೊತ್ತಾಗಿದೆ. ಇವತ್ತು ದರ್ಶನ್​ ಸೇರಿರೋ ಜೈಲು ಅದೇಗಿದೆಯೋ ಕಾದು ನೋಡಬೇಕಿದೆ.

ಇದನ್ನೂ ಓದಿ:ನಾಯಕನಾದರೂ ಏನು ಬಂತು.. ಛೇ..! ಸೂರ್ಯನ ಅದೊಂದು ಆಸೆ ಇನ್ನೂ ಈಡೇರಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment