newsfirstkannada.com

ಜೈಲಲ್ಲಿ ತಾವೇ ತೋಡಿದ ಹಳ್ಳಕ್ಕೆ ಬಿದ್ದ ದರ್ಶನ್.. ಇನ್ಮೇಲೆ ಏನೇನು ಆಗುತ್ತೆ ಗೊತ್ತಾ..?

Share :

Published August 27, 2024 at 8:39am

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲು

    ಜೈಲಿನಲ್ಲಿ ನಟ ದರ್ಶನ್ ರಾಜಾತಿಥ್ಯ ಫೋಟೋ ವೈರಲ್

    ಫೋಟೋ ವೈರಲ್ ಬೆನ್ನಲ್ಲೇ ಪೊಲೀಸರಿಂದ ಮಹತ್ವದ ನಿರ್ಧಾರ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್​​ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಅನ್ನೋ ಆರೋಪಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ರೌಡಿ ಪಟಾಲಂ ಜೊತೆ ಕೂತು ಕೈಯಲ್ಲಿ ಸಿಗರೇಟ್, ಟೀ ಕಪ್ ಹಿಡಿದು ಹರಟೆ ಜೊತೆಗೆ ವಿಡಿಯೋ ಕಾಲ್ ಮಾಡಿರುವ ವಿಡಿಯೋ ಕ್ಲಿಪ್​ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.

ಫೋಟೋ, ವಿಡಿಯೋ ವೈರಲ್ ಬೆನ್ನಲ್ಲೇ ನಟ ದರ್ಶನ್​​ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಈ ಮೂಲಕ ದರ್ಶನ್ ತಾವೇ ತೋಡಿಕೊಂಡ ಹಳ್ಳಕ್ಕೆ ಬಿದ್ದರಾ ಎಂಬ ಅನುಮಾನ ಶುರುವಾಗಿದೆ. ವೈರಲ್ ಆದ ಫೋಟೋ ವಿಡಿಯೋದಿಂದ ದರ್ಶನ್ ಕೋರ್ಟ್​ಗೆ ಸಲ್ಲಿಸಿರುವ ಪ್ರಮುಖ ಅರ್ಜಿ ವಜಾ ಆಗುವ ಸಾಧ್ಯತೆ ಇದೆ.

ದರ್ಶನ್ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಪರಪ್ಪನ ಅಗ್ರಹಾರ ಜೈಲಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ದರ್ಶನ್ ಅವರಿಗೆ ಕೋರ್ಟ್​ ಮನೆಯೂಟ ನೀಡಲು ನಿರಾಕರಿಸಬಹುದು. ಮತ್ತೊಂದೆಡೆ ಇತರೆ ಆರೋಪಿಗಳ ಜಾಮೀನು ಅರ್ಜಿಗೂ ಆಕ್ಷೇಪಣೆ ಸಲ್ಲಿಸಿಲು ದರ್ಶನ್ ದರ್ಬಾರೇ ಪ್ರಮುಖ ಅಸ್ತ್ರ ಆಗಬಹುದು. ಈ ಎಲ್ಲಾ ಟೆಕ್ನಿಕಲ್ ರೀಸನ್ ಮೇಲೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪೊಲೀಸರು ತೀರ್ಮಾನ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ದರ್ಶನ್ ಸೇರಿ ನಾಲ್ವರ ಮೇಲೆ ಮೂರು FIR; ಜೈಲ್ ಗ್ಯಾಂಗ್​ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಲ್ಲಿ ತಾವೇ ತೋಡಿದ ಹಳ್ಳಕ್ಕೆ ಬಿದ್ದ ದರ್ಶನ್.. ಇನ್ಮೇಲೆ ಏನೇನು ಆಗುತ್ತೆ ಗೊತ್ತಾ..?

https://newsfirstlive.com/wp-content/uploads/2024/08/darshan-2.jpg

Load More