newsfirstkannada.com

‘ದರ್ಶನ್ ಜೊತೆ ಸೇರಿ ಹಾಳಾದ..’ ಅಯ್ಯೋ ಪಾಪ ಅನಿಸುವ ಹಾಗಿದೆ ದರ್ಶನ್ ಅತ್ಯಾಪ್ತನ ಕತೆ..

Share :

Published June 22, 2024 at 11:13am

  ‘ದಾಸ’ನ ಅಪ್ಪಟ ಅಭಿಮಾನಿ ಕೊಲೆ ಆರೋಪಿ ‘ನಾಗ’

  ಅಭಿಮಾನಿಗಳನ್ನೇ ದುರ್ಬಳಕೆ ಮಾಡ್ಕೊಂಡ್ರಾ ‘ಯಜಮಾನ’..!

  ದರ್ಶನ್ ತೋಟದ ಮನೆ ನಿರ್ವಹಣೆಯ ಹೊಣೆ ಹೊತ್ತಿದ್ದ ನಾಗರಾಜ್

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ A1 ಆರೋಪಿ ಪವಿತ್ರಾಗೌಡ ಸೇರಿ 10 ಮಂದಿಗೆ ನ್ಯಾಯಾಂಗ ಬಂಧನ ಆಗಿದೆ. ಆದ್ರೆ ಕೊಲೆ ಕೇಸ್​ನಲ್ಲಿ ಕಂಬಿ ಹಿಂದೆ ಬಂಧಿಯಾಗಿರೋ ಕೆಲ ಆರೋಪಿಗಳ ಕಥೆಯನ್ನ ಕೇಳಿದ್ರೆ ನಿಜಕ್ಕೂ ಶಾಕ್​ ಆಗುತ್ತೆ. ದರ್ಶನ್​ ಅಭಿಮಾನಿಗಳನ್ನೇ ದುರ್ಬಳಕೆ ಮಾಡ್ಕೊಂಡ್ರಾ ಅನ್ನೋ ಪ್ರಶ್ನೆ ಉದ್ಭವಿಸುತ್ತೆ. ಅದರಲ್ಲೂ ಜೈಲು ಪಾಲಾಗಿರೋ ದರ್ಶನ್‌ನ ಅತ್ಯಾಪ್ತ ಆರೋಪಿಯ ಹಿಸ್ಟರಿಯೇ ಅಯ್ಯೋ ಪಾಪ ಅನಿಸೋ ಹಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​​ನ A2 ಆರೋಪಿ ದರ್ಶನ್​​ ಸೇರಿ ನಾಲ್ವರಿಗೆ ಪೊಲೀಸ್​​ ಕಸ್ಟಡಿ ದಾರಿ ತೋರಿಸಿದ್ರೆ, A1 ಆರೋಪಿ ಪವಿತ್ರಾಗೌಡ ಸೇರಿ ಉಳಿದ 10 ಆರೋಪಿಗಳಿಗೆ ಪರಪ್ಪನ ಅಗ್ರಹಾರದ ಸೆರೆವಾಸ ಸಿಕ್ಕಿದೆ. ಈ ಪೈಕಿ A11 ಆರೋಪಿ ನಾಗ ಆಲಿಯಾಸ್​ ನಾಗರಾಜ್​ ಕೂಡ ಕಂಬಿ ಹಿಂದೆ ಲಾಕ್​ ಆಗಿ ಜೈಲು ಸೇರಿದ್ದಾನೆ.

ಇದನ್ನೂ ಓದಿ:ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್​ಗೆ ಟ್ವಿಸ್ಟ್​.. 5 ಕೋಟಿಗಾಗಿ ಬ್ಲ್ಯಾಕ್​ಮೇಲ್ ಆರೋಪ..!

‘ದಾಸ’ನ ಅಪ್ಪಟ ಅಭಿಮಾನಿ ಕೊಲೆ ಆರೋಪಿ ‘ನಾಗ’
ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​…ಅಭಿಮಾನಿಗಳ ಪಾಲಿಗೆ ಈತನೇ ‘ಒಡೆಯ’. ಮೆಜೆಸ್ಟಿಕ್​ನ ಕರಿಯ ಯಾವುದೇ ಕಾಂಟ್ರವರ್ಸಿಯಲ್ಲಿ ಸಿಲುಕಿದ್ರೂ.. ಅಭಿಮಾನಿಗಳು ಮಾತ್ರ ನೀನೇ ನಮ್ಮ ಪ್ರಿನ್ಸ್ ಅಂತ ​ತಲೆ ಮೇಲೆ ಹೊತ್ತು ಚಕ್ರವರ್ತಿಯಂತೆ ಮೆರೆಸುತ್ತಿದ್ದರು.. ದರ್ಶನ್​ ಕೂಡ ಅಭಿಮಾನಿಗಳೇ ನನ್ನ ಸೆಲೆಬ್ರೆಟಿಗಳು ಅಂತ ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ರು. ಪವಿತ್ರಾಗೌಡ ಅವರ ಮಾತು ಕೇಳಿ ಅಭಿಮಾನಿಗಳನ್ನೇ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ತಮ್ಮ ಬಾಸ್​ ಮಾತನ್ನು ಪಾಲನೆ ಮಾಡೋದೇ ನಮ್ಮ ಧರ್ಮ ಅಂತ ಅರಿತ ಡಿ ಗ್ಯಾಂಗ್​ ಮಾಡಬಾರದ ಕೆಲ್ಸ ಮಾಡಿ ಇದೀಗ ಜೈಲು ಪಾಲಾಗಿದ್ದಾನೆ.

‘ನಾಗ​​ ಒಳ್ಳೆ ಹುಡುಗ, ದರ್ಶನ್​ ಜೊತೆ ಸೇರಿ ಹಾಳಾದ’
ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ A11ನೇ ಆರೋಪಿ ನಾಗ ಆಲಿಯಾಸ್​ ನಾಗರಾಜ್​ ಮೈಸೂರು ನಗರದ ಟಿ.ಕೆ.ಲೇಔಟ್​ನ ನಿವಾಸಿ.. ನಟ ದರ್ಶನ್​ನ ಅಪ್ಪಟ ಅಭಿಮಾನಿ.. ಹಾಗೇನೇ ದರ್ಶನ್‌ನ ಮ್ಯಾನೇಜರ್‌ ರೀತಿಯಲ್ಲೂ ಜೊತೆಯಲ್ಲೇ ಅರ್ತಿದ್ದ. ಆದ್ರೆ ಇಲ್ಲಿ ಕಾಣ್ತಿರೋದೇ ನಾಗನ ಅರಮನೆ… ಶೀಟ್​ ಮನೆಯಲ್ಲಿ ವಾಸವಿದ್ದ ನಾಗ, ಈ ಮೊದಲು ಪೆಟ್ರೋಲ್​ ಬಂಕ್​ನಲ್ಲಿ ಕೆಲ್ಸ ಮಾಡ್ತಿದ್ದ… ಅಕ್ಕ ಭಾವನ ಜೊತೆ ಖುಷಿ ಖುಷಿಯಾಗೇ ಯಾರ ವಿಷ್ಯಕ್ಕೂ ಹೋಗದೇ ಚನ್ನಾಗೇ ಇದ್ದ.. ದರ್ಶನ್​ ಆಪ್ತವಲಯಕ್ಕೆ ಎಂಟ್ರಿ ಕೊಡೋದಕ್ಕೂ ಮುನ್ನ ಇದೇ ಶೀಟ್​​ ಅರಮನೆಯಲ್ಲಿದ್ದ.

ಇದನ್ನೂ ಓದಿ:ಜಸ್ಟ್​ ಒಂದೇ ಒಂದು ಮ್ಯಾಚ್​.. ಟೀಮ್ ಇಂಡಿಯಾದ ದಿಕ್ಕು ದೆಸೆ ಬದಲಾಗಲಿದೆ, ಏನದು..

ತುಂಬಾ ಒಳ್ಳೆಯ ಹುಡುಗಾ ಕಣ್ರಿ. ನಾನು ಮದುವೆ ಸಂದರ್ಭದಲ್ಲಿ ಚಿಕ್ಕ ಮಗುವಾಗಿತ್ತು. ಯಾರ ಜೊತೆಗೂ ಜಗಳ ಆಡಿದ ಹುಡುಗ ಅಲ್ಲ. ಕೆಟ್ಟದಾಗಿ, ಜೋರಾಗಿ ಮಾತಾಡಿದ ಹುಡುಗನೂ ಅಲ್ಲ. ಅವನೀಗ ಜೈಲಿಗೆ ಹೋಗಿರೋದು ನಮಗೆ ಅಶ್ಚರ್ಯ ಆಗ್ತಿದೆ ಎಂದು ನಾಗನ ಪಕ್ಕದ ಮನೆಯ ಮಹಿಳೆ ಶಾರದಮ್ಮ ನೋವಿನಿಂದ ಹೇಳಿದ್ದಾರೆ.

ಕಳೆದ 15 ವರ್ಷದಿಂದ ದರ್ಶನ್ ಜೊತೆಯಲ್ಲೇ ಇದ್ರೂ, ನಾಗನನ್ನ ಬಹಳ ಹತ್ತಿರದಿಂದ ಗಮನಿಸಿದ್ದ ಅಕ್ಕಪಕ್ಕದ ಜನ ನಾಗನ ಬಂಧನದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾಗ ಬಹಳ ಒಳ್ಳೆಯ ಹುಡುಗ, ಯಾರಿಗೂ ಹಿಂತಿರುಗಿ ಮಾತಾಡಲ್ಲ.. ಕಾರ್ಪೊರೇಟರ್ ಆಗಬೇಕೆಂದು‌ ಕನಸು ಕಂಡಿದ್ದ.. ಬಡವರಿಗೆ ಸಹಾಯ ಮಾಡುತ್ತಿದ್ದ.. ಆದ್ರೆ ದರ್ಶನ್​ ಸಹವಾಸ ಹೀಗ್​ ಮಾಡ್ಬಿಟ್ಟಿದೆ ಅಂತ ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ:ಸಾಮೂಹಿಕ ಅ*ಚಾರ.. ಅರೆನಗ್ನ ಸ್ಥಿತಿಯಲ್ಲಿ 1.5 ಕಿಮೀ ಓಡಿಬಂದು ಜೀವ ಉಳಿಸಿಕೊಂಡ ಮಹಿಳೆ

ಇದಿಷ್ಟು ಮಾತ್ರವಲ್ಲದೆ ಯಾವಾಗ ನಾಗ, ದರ್ಶನ್ ಅಭಿಮಾನಿ ಸಂಘಗಳಿಗೆ ಸಂಪರ್ಕ ಸೇತುವೆಯಾದ್ನೋ? ನಾಗರಾಜ್‌ಗಾಗಿ ಮೈಸೂರಿನಲ್ಲಿ ಬಾರ್ ಇಟ್ಟುಕೊಟ್ಟಿದ್ರಂತೆ ನಟ ದರ್ಶನ್. ಆದ್ರೆ ವ್ಯವಹಾರ ಕೈ ಹಿಡಿಯದ ಹಿನ್ನೆಲೆ ಮತ್ತೆ ದರ್ಶನ್ ಜೊತೆಯಲ್ಲೇ ನಾಗರಾಜ್​ ಸುತ್ತಾಡಿಕೊಂಡಿದ್ದ. ಇತ್ತೀಚೆಗೆ ಕಾಂಗ್ರೆಸ್​ ಪಕ್ಷದಲ್ಲಿ ಸಖತ್​ ಸಕ್ರೀಯನಾಗಿದ್ದ ನಾಗರಾಜ್​, ರಾಜ್ಯ ಕುರುಬರ ಸಂಘಕ್ಕೆ ಮೈಸೂರಿನಿಂದ ಸ್ಪರ್ಧಿಸಿ ನಿರ್ದೇಶಕನಾಗಿದ್ದ. ಹಾಗೂ ಮಹಾನಗರ ಪಾಲಿಕೆ 21ನೇ ವಾರ್ಡ್‌ನಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡು, ದರ್ಶನ್ ಮೂಲಕವೇ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿ ಇದ್ನಂತೆ.

ಇದನ್ನೂ ಓದಿ:ಮುಂದಿನ ಐದು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ..

ವಿಧಿಯಾಟ ಹೇಗಿತ್ತು ನೋಡಿ ಕಾರ್ಪೊರೇಟರ್ ಆಗಬೇಕೆಂದು‌ ಕನಸು ಕಂಡಿದ್ದವ ಕೊಲೆಗಾರನಾಗಿ ಜೈಲು ಪಾಲಾಗಿದ್ದಾನೆ.. ಅವತ್ತು ಮೃತ ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕರೆಸಿಕೊಳ್ಳು ಹೋಗದೇ ಇದ್ರೆ, ದರ್ಶನ್​ಗೆ ಸಹಾಯ ಮಾಡಲು ಕೈ ಜೋಡಿಸದೇ ಇದ್ರೆ ಇವತ್ತು ಜೈಲೂಟ ತಪ್ತಿತ್ತಲ್ವಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದರ್ಶನ್ ಜೊತೆ ಸೇರಿ ಹಾಳಾದ..’ ಅಯ್ಯೋ ಪಾಪ ಅನಿಸುವ ಹಾಗಿದೆ ದರ್ಶನ್ ಅತ್ಯಾಪ್ತನ ಕತೆ..

https://newsfirstlive.com/wp-content/uploads/2024/06/DARSHAN-46.jpg

Load More