ಇಡೀ ರಾಜ್ಯಾದ್ಯಂತ ಸಲಗ ವಿಜಯ್ ಕುಮಾರ್ ಹೊಸ ಸಿನಿಮಾ ಭೀಮನ ಆರ್ಭಟ ಮುಂದುವರಿದಿದೆ. ಸಿನಿಮಾ ಯಶಸ್ವಿಯಾಗಿ 2ನೇ ವಾರಕ್ಕೆ ಕಾಲಿಟ್ಟಿದ್ದು, ದುನಿಯಾ ವಿಜಯ್ ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ ಜನರ ಮನಸ್ಸು ಗೆದ್ದಿದ್ದಾರೆ. ಇದರ ಮಧ್ಯೆ ದುನಿಯಾ ವಿಜಯ್ ಮೇಲೆ ನಟ ದರ್ಶನ್ ಫ್ಯಾನ್ಸ್ ಗರಂ ಆಗಿದ್ದಾರೆ.
ಇತ್ತೀಚೆಗಷ್ಟೇ ಕೆಲವು ಅಭಿಮಾನಿಗಳು ನಟ ದರ್ಶನ್ ಜೈಲಿನಿಂದ ಹೊರಗೆ ಬರೋವರ್ಗೂ ಕನ್ನಡ ಸಿನಿಮಾಗಳನ್ನ ನೋಡುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದರು. ಈ ಎಲ್ಲವನ್ನೂ ಮೀರಿ ಭೀಮ ಗೆಲುವಿನ ಹಾದಿ ಹಿಡಿದಿದ್ದಾನೆ. ಸಿನಿಮಾ ಭರ್ಜರಿ ಕಲೆಕ್ಷನ್ ಸಹ ಮಾಡುತ್ತಿದೆ.
ದರ್ಶನ್ಗೆ ಒಳ್ಳೆಯದಾಗಲಿ ಎಂದ ವಿಜಯ್
ಇನ್ನು, ಖಾಸಗಿ ಸುದ್ದಿವಾಹಿನಿ ಒಂದರಲ್ಲಿ ದುನಿಯಾ ವಿಜಯ್ ಸಂದರ್ಶನಕ್ಕಾಗಿ ಭಾಗಿಯಾಗಿದ್ದರು. ಭೀಮ ಸಿನಿಮಾದ ಸಕ್ಸಸ್ ನಂತರ ದುನಿಯಾ ವಿಜಯ್ ಅವರಿಗೆ ರ್ಯಾಪಿಡ್ ಫೈಯರ್ ಪ್ರಶ್ನೆಗಳನ್ನು ಕೇಳಲಾಯ್ತು. ಒಬ್ಬಬ್ಬ ನಟನ ಹೆಸರು ಹೇಳುತ್ತಿದ್ದಂತೆ ಅವರ ಬಗ್ಗೆ ವಿಜಯ್ ಮಾತನಾಡಿದ್ರು. ಅಪ್ಪು ಸೇರಿ ಹಲವರೊಂದಿಗೆ ಇದ್ದ ಒಡನಾಟದ ಬಗ್ಗೆ ಹಂಚಿಕೊಂಡರು. ನಟ ದರ್ಶನ್ ಹೆಸರು ಕೇಳುತ್ತಿದ್ದಂತೆ 'ಒಳ್ಳೆಯದಾಗಲಿ' ಎಂದಷ್ಟೇ ಹೇಳಿ ಸುಮ್ಮನಾದ್ರು.
ದುನಿಯಾ ವಿಜಯ್ ಹೀಗೆ ಒಂದೇ ಪದದಲ್ಲಿ ಒಳ್ಳೆಯದಾಗಲಿ ಎಂದು ಹೇಳಿದ್ದು ದರ್ಶನ್ ಫ್ಯಾನ್ಸ್ಗೆ ಬೇಸರ ತರಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದು, ದರ್ಶನ್ ಅಭಿಮಾನಿಗಳು ವಿಜಯ್ ಮೇಲೆ ಕೆಂಡಕಾರಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ ಫ್ಯಾನ್ಸ್ ಮೇಲೆ ದುನಿಯಾ ವಿಜಯ್ ಗರಂ ಆಗಿದ್ದೇಕೆ? ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದುನಿಯಾ ವಿಜಯ್ ವಿರುದ್ಧ ಆಕ್ರೋಶ ಹೊರಹಾಕಿದ ದರ್ಶನ್ ಅಭಿಮಾನಿಗಳು; ಕಾರಣವೇನು?

LATEST UPDATES