ದರ್ಶನ್ ಫ್ಯಾನ್ಸ್​ ವಿರುದ್ಧ FIR; ದಾಖಲಾಗಿರೋ ಸೆಕ್ಷನ್ ನೋಡಿದ್ರೆ ತಪ್ಪಿಸಿಕೊಳ್ಳೋದು ಸುಲಭ ಇಲ್ಲ

author-image
Ganesh
Updated On
ಕೆರಳಿದ ರಮ್ಯಾ.. ದರ್ಶನ್ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್..!
Advertisment
  • ‘ಡೆವಿಲ್’ ಫ್ಯಾನ್ಸ್​ ವಿರುದ್ಧ ಸ್ಯಾಂಡಲ್​ವುಡ್​ ಸಿಂಹಿಣಿ ಸಮರ!
  • ನಟಿ ರಮ್ಯಾ ದೂರು ಆಧರಿಸಿ ಸೈಬರ್ ಕ್ರೈಂ ಠಾಣೆಯಲ್ಲಿ FIR
  • ದರ್ಶನ್ ಫ್ಯಾನ್ಸ್​ ವಿರುದ್ಧ ಯಾವೆಲ್ಲ ಸೆಕ್ಷನ್ ಅಡಿ FIR ಆಗಿದೆ..?

ಒಲಿದರೆ ನಾರಿ ಮುನಿದರೆ ಮಾರಿ.. ಹೆಣ್ಣಿನ ಅಸ್ಮಿತೆಗೆ ಚ್ಯುತಿ ಬಂದ್ರೆ ಆಕೆ ಅದೆಂಥ ರೂಪ ತಾಳ್ತಾಳೆ ಅನ್ನೋಕೆ ಸ್ಯಾಂಡಲ್​ವುಡ್​ ಕ್ವೀನ್​ ಸಾಕ್ಷಿಯಾಗಿ ನಿಂತಿದ್ದಾರೆ.. ಲಜ್ಜೆಗೆಟ್ಟ ಕೆಲ ದರ್ಶನ್​ ಫ್ಯಾನ್ಸ್​ಗಳ ವಿರುದ್ಧ ರಣಚಂಡಿ ರೂಪತಾಳಿದ್ದ ರಮ್ಯಾ ಕಾನೂನು ಸಮರಕ್ಕೆ ಶಂಖ ನಾದ ಮೊಳಗಿಸಿದ್ದಾರೆ. ಡಿ ಅಭಿಮಾನಿಗಳ ವಿರುದ್ಧ ಕಮಿಷನರ್‌ಗೆ ದೂರು ಕೊಟ್ಟಿದ್ದಾರೆ. ನಟಿಯ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ಸಿಂಪಲ್​ ಆಗಿ ಕಾಣೋ ಧನುಷ್​ ಎಷ್ಟು ಕೋಟಿ ಒಡೆಯ.. ನೀವು ಅಂದುಕೊಂಡಾಗೆ ಇಲ್ಲ ಈ ನಟ!

ಸೋಷಿಯಲ್​ ಮೀಡಿಯಾದಲ್ಲಿ ಡಿ ಬಾಸ್​ ಫ್ಯಾನ್ಸ್​ ಅಂತ ಹೇಳಿಕೊಳ್ಳೋ ಕೆಲವು ಮಾನಗೇಡಿಗಳ ಮೊಂಡಾಟ, ಹುಚ್ಚಾಟ ಇದೇ ಮೊದಲೇನಲ್ಲ.. ನಾಯಿ ಬಾಲಕ್ಕೆ ದೆಬ್ಬೆ ಕಟ್ಟಿದ್ರೆ ಅದು ನೆಟ್ಟಗಾಗಲ್ಲ ಅಂತ ಕೆಲವರು ಈ ಮೂರು ಬಿಟ್ಟ ಫ್ಯಾನ್ಸ್​ ಬಗ್ಗೆ ತಲೆಕೆಡಿಸಿಕೊಳ್ಳೋದೆ ಬಿಟ್ಟಿದ್ದಾರೆ. ದರ್ಶನ್ ಬೇಲ್ ವಿಚಾರವಾಗಿ ಪೋಸ್ಟ್​ ಮಾಡಿದ ನಟಿ ರಮ್ಯಾಗೆ ಆಶ್ಲೀಲ ಕಮೆಂಟ್​ ಮಾಡಿದ ಕೆಲ ಲಜ್ಜೆಗೆಟ್ಟವರ ಕೃತ್ಯ ಸದ್ಯ ರಮ್ಯಾರನ್ನ ರಣಚಂಡಿಯಾಗಿಸಿದೆ. ಕಾನೂನಾತ್ಮಕ ಹೋರಾಟ ನಡೆಸಲು ಪ್ರೇರೇಪಿಸಿದೆ.

‘ಡೆವಿಲ್’ ಫ್ಯಾನ್ಸ್​ ವಿರುದ್ಧ ಸ್ಯಾಂಡಲ್​ವುಡ್​ ಸಿಂಹಿಣಿ ಸಮರ!

ನ್ಯೂಸ್ ಫಸ್ಟ್​ ಮೂಲಕ ದರ್ಶನ್​ ಫ್ಯಾನ್ಸ್​ಗೆ ಚಳಿಬಿಡಿಸಿದ್ದ ಸ್ಯಾಂಡಲ್​ವುಡ್​ ಸಿಂಹಿಣಿ ಹೊಸ ಸಮರಕ್ಕೆ ಶಂಖ ಮೊಳಗಿಸಿದ್ದಾರೆ. ಹೆಣ್ಣಿನ ಬಗ್ಗೆ ತುಚ್ಚವಾಗಿ ಕಾಮೆಂಟ್​ ಮಾಡಿದ ಕಿಡಿಗೇಡಿಗಳ ವರ್ತನೆ ರಮ್ಯಾರನ್ನ ರಣಚಂಡಿ ರೂಪತಾಳಿಸಿದೆ. ನಾನ್​ ಯಾವನನ್ನ ಮಗನಿಗೂ ಹೆದರಲ್ಲ ಎಂದಿದ್ದ ಲೇಡಿ ಸಿಂಗಂ ಈ ಮೂಲಕ ಗಾಡ ನಿದ್ರೆಗೆ ಜಾರಿದ್ದ ಸ್ಯಾಂಡಲ್​ವುಡ್​ನ ಬಡಿದೆಬ್ಬಿಸೋ ಕೆಲಸ ಮಾಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಅಶ್ಲೀಲ ಸಂದೇಶ, ಕಾಮೆಂಟ್​ಗಳ ದಾಖಲೆ ಸಮೇತ ಕಮಿಷನರ್​ಗೆ ದೂರು ನೀಡಿರೋ ರಮ್ಯಾ ಈ ನೀಚರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಅಂತ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಹೆಸರು DOG​​ ಬಾಬು, ತಂದೆ ಕುತ್ತಾ ಬಾಬು.. ನಾಯಿ ಫೋಟೋಗೆ ಸರ್ಟಿಫಿಕೇಟ್​ ಕೊಟ್ಟ ಸರ್ಕಾರಿ ಅಧಿಕಾರಿಗಳು

ರಮ್ಯಾ ದೂರು ಬೆನ್ನಲ್ಲೇ ಸಂಕಷ್ಟ ದರ್ಶನ್ ಫ್ಯಾನ್ಸ್‌ಗೆ ಸಂಕಷ್ಟ ಶುರುವಾಗಿದೆ. ದರ್ಶನ್ ಫ್ಯಾನ್ಸ್​​ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 43 ಇನ್​ಸ್ಟಾ ಐಡಿ ಅಡ್ಮಿನ್​ಗಳ ವಿರುದ್ಧ FIR ದಾಖಲಾಗಿದೆ. ಯಾವೆಲ್ಲಾ ಸೆಕ್ಷನ್‌ ಅಡಿ ಎಫ್ಐಆರ್ ದಾಖಲಾಗಿದೆ ಅನ್ನೋ ವಿವರ ಹೀಗಿದೆ.

ಯಾವೆಲ್ಲಾ ಸೆಕ್ಷನ್ ಅಡಿ FIR?

  • BNS 351(2): ಮಹಿಳೆ ಗೌರವಕ್ಕೆ ಧಕ್ಕೆಯಾಗುವ ಶಬ್ದ ಬಳಕೆ
  • 351(3): ಲೈಂಗಿಕ ಉದ್ದೇಶದಿಂದ ಕಿರುಕುಳ ನೀಡುವುದು
  • BNS 352: ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಮುಟ್ಟುವುದು
  • BNS ಸೆ. 75(1)(4): ಕ್ರಿಮಿನಲ್ ನಡತೆಗಳಲ್ಲಿ ಸಂಚು
  • BNS ಸೆ. 79: ಗಂಭೀರ ನಡತೆ ಆಧಾರದ ಗಂಭೀರ ಅಪರಾಧ
  • IT ಆ್ಯಕ್ಟ್ ಸೆ. 66 – Hacking/Illegal access ಕೂಡ ದಾಖಲು
  • ಕಂಪ್ಯೂಟರ್ ಸಿಸ್ಟಮ್‌ಗೆ ಕಾನೂನುಬಾಹಿರವಾಗಿ ಪ್ರವೇಶ
  • ಡೇಟಾ ಅಳಿಸುವುದು ಅಥವಾ ಬದಲಾಯಿಸುವುದು ಅಪರಾಧ
  • ಶಿಕ್ಷೆ: 3 ವರ್ಷವರೆಗೆ ಜೈಲು ಜೊತೆಗೆ ದಂಡ ವಿಧಿಸಲು ಅವಕಾಶ
  • ಸೆ. 67: ಅಶ್ಲೀಲ ಪೋಸ್ಟ್, ಫೋಟೋ, ವಿಡಿಯೋ ಅಪ್‌ಲೋಡ್
  • ಶಿಕ್ಷೆ: 3 ರಿಂದ 5 ವರ್ಷ ಜೈಲು ಶಿಕ್ಷೆ, ಭಾರೀ ದಂಡ ವಿಧಿಸಲು ಅವಕಾಶ

ಸ್ಯಾಂಡಲ್​ವುಡ್​ ಕ್ವೀನ್​ ಮೂಲಕ ಎಡಬಿಂಡಗಿ ಫ್ಯಾನ್ಸ್​ಗಳ ಹುಚ್ಚುಬಿಡಿಸೋ ಕಾಮಗಾರಿ ಚುರುಕು ಪಡೆದಿದೆ.. ದರ್ಶನ್​ ಫ್ಯಾನ್ಸ್​ಗಳ ಮಾರಕ ಕಾಮೆಂಟ್​ನಿಂದ ಮೌನಿಯಾಗಿರೋ ಇನ್ನೂ ಯಾರಾದ್ರೂ ರಮ್ಯಾ ಜೊತೆ ಸಮರಕ್ಕಿಳಿದ್ರೆ ಕಿಡಿಗೇಡಿಗಳಿಗೆ ಶಾಸ್ತ್ರಿ ಕಟ್ಟಿಟ್ಟ ಬುತ್ತಿ.

ಇದನ್ನೂ ಓದಿ: TCS ಕಂಪನಿಯಿಂದ 12 ಸಾವಿರ ಉದ್ಯೋಗಿಗಳಿಗೆ ಗೇಟ್​ ಪಾಸ್​​.. ಕೆಲಸದಿಂದ ತೆಗೆಯಲು ಕಾರಣ ಏನು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment