ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ ₹2 ಕೋಟಿ ವಂಚಿಸಿದ್ದ ಮಾಜಿ ಪಿಎ ಮಲ್ಲಿಕಾರ್ಜುನ್ ಎಲ್ಲಿ ಹೋದ್ರು.. ಸರ್ಜಾ ಕೇಸ್ ಹಾಕಿದ್ದೇಕೆ?

author-image
Bheemappa
Updated On
ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ ₹2 ಕೋಟಿ ವಂಚಿಸಿದ್ದ ಮಾಜಿ ಪಿಎ ಮಲ್ಲಿಕಾರ್ಜುನ್ ಎಲ್ಲಿ ಹೋದ್ರು.. ಸರ್ಜಾ ಕೇಸ್ ಹಾಕಿದ್ದೇಕೆ?
Advertisment
  • ಕನ್ನಡದ ಅನೇಕ ಚಿತ್ರಗಳನ್ನ ವಿತರಣೆ ಮಾಡಿದ್ದ ದರ್ಶನ್ ಮಾಜಿ ಪಿಎ
  • ಮಲ್ಲಿಕಾರ್ಜುನ್ ವಿರುದ್ಧ ಕೇಸ್ ದಾಖಲು ಮಾಡಿದ್ದ ಅರ್ಜುನ್ ಸರ್ಜಾ
  • ಎಲ್ಲಿ ಹೋದರು ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅವರ ಮಾಜಿ ಪಿಎ.?

ಬೆಂಗಳೂರು: ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಅವರ ಮಾಜಿ ಪಿಎ ಹಾಗೂ ಶ್ರೀ ಕಾಲಕಾಲೇಶ್ವರ ಎಂಟರ್​ಪ್ರೈಸಸ್ ಕಂಪನಿ ಮಾಲೀಕ ಮಲ್ಲಿಕಾರ್ಜುನ್ 7 ವರ್ಷದಿಂದ ನಾಪತ್ತೆಯಾಗಿದ್ದಾರೆ. ದರ್ಶನ್ ಅವರಿಗೆ 2 ಕೋಟಿ ರೂಪಾಯಿ ಮೋಸ ಮಾಡಿ ಮಲ್ಲಿಕಾರ್ಜುನ್ ಕಾಣೆಯಾಗಿದ್ದಾರೆ.

ದರ್ಶನ್ ಅವರ ಮಾಜಿ ಪಿಎ ಆಗಿದ್ದ ಮಲ್ಲಿಕಾರ್ಜುನ್ ಚಿತ್ರರಂಗದಲ್ಲಿ ವಿತರಕರಾಗಿ ಗುರುತಿಸಿಕೊಂಡಿದ್ದರು. ಹೀಗಾಗಿಯೇ ಅನೇಕ ಚಿತ್ರಗಳನ್ನು ವಿತರಣೆ ಮಾಡಿದ್ದರು. ಆದರೆ 2018ರಲ್ಲಿ ರಿಲೀಸ್ ಆಗಿದ್ದ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ ಐಶ್ವರ್ಯ ಸರ್ಜಾ ಅಭಿನಯದ ಪ್ರೇಮ ಬರಹ ಚಿತ್ರದ ವಿತರಣೆ ಮಾಡಿದ್ದರು. ಈ ವೇಳೆ ಹಣದ ಸಮಸ್ಯೆ ಉಂಟಾಗಿ ಅರ್ಜುನ್ ಸರ್ಜಾ ಮತ್ತು ಮಲ್ಲಿಕಾರ್ಜುನ್​ ನಡುವೆ ವೈಮನಸ್ಸು ಉಂಟಾಗಿತ್ತು. ಇದೇ ವೇಳೆ ಸಿನಿಮಾದ ವಿತರಣೆ ಮಾಡಿದ ಬಳಿಕ 1 ಕೋಟಿ ರೂಪಾಯಿ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಮಲ್ಲಿಕಾರ್ಜುನ್ ವಿರುದ್ಧ ಅರ್ಜುನ್ ಸರ್ಜಾ ಅವರು ಕೇಸ್ ದಾಖಲು ಮಾಡಿದ್ದರು.

ಇದನ್ನೂ ಓದಿ: ಮಾರ್ಕೆಟ್​ನಲ್ಲಿ ಭೀಕರ ಕಾರ್ ಬಾಂಬ್ ಸ್ಫೋಟ.. 7 ಜನ ಸ್ಥಳದಲ್ಲೇ ಸಾವು, 30ಕ್ಕೂ ಅಧಿಕ ಮಂದಿ ಗಂಭೀರ

ಈ ಸಂಬಂಧ ಮಲ್ಲಿಕಾರ್ಜುನ್ ವಿರುದ್ಧ ಪತ್ರಿಕಾ ಪ್ರಕಟಣೆಗೆ ಉದ್ಘೋಷಣೆ ಪತ್ರವನ್ನ ಪ್ರಕಟಿಸಲು ಎಸಿಎಂಎಂ ನ್ಯಾಯಾಲಯ ಅನುಮತಿ ಕೊಟ್ಟಿದೆ. ಈ ಪತ್ರಿಕೆಯ ಪ್ರಕಟಣೆಯನ್ನು ಈಗಾಗಲೇ ಹೊರಡಿಸಲಾಗಿದೆ. ಇದರ ನಡುವೆಯು ಮಲ್ಲಿಕಾರ್ಜುನ್ ನ್ಯಾಯಲಯಕ್ಕೆ ಹಾಜರಾಗದಿದ್ದರೆ ವಾರೆಂಟ್ ಜಾರಿ ಮಾಡಲಾಗುತ್ತದೆ ಎಂದು ಆದೇಶ ನೀಡಲಾಗಿದೆ.

ಸಿನಿಮಾ ವಿತರಣೆಯಲ್ಲಿ ಒಳ್ಳೆ ಹೆಸರನ್ನ ಮಾಡಿದ್ದ ಮಲ್ಲಿಕಾರ್ಜುನ್ ಅವರು ಕಳೆದ 7 ವರ್ಷದಿಂದ ನಾಪತ್ತೆಯಾಗಿದ್ದಾರೆ. ಶ್ರೀ ಕಾಲಕಾಲೇಶ್ವರ ಎಂಟರ್​ ಪ್ರೈಸಸ್ ಕಂಪನಿಯ ಮಾಲೀಕನಾಗಿದ್ದ ಮಲ್ಲಿಕಾರ್ಜುನ್ ರಾಜ್ಯಾದ್ಯಾಂತ ಸಿನಿಮಾಗಳನ್ನು ವಿತರಣೆ ಮಾಡಿದ್ದರು. ಆದರೆ ಗಾಂಧಿನಗರದಲ್ಲಿ 11 ಕೋಟಿ ರೂಪಾಯಿ ಮೋಸ ಮಾಡಿದ್ದಾರೆ ಎನ್ನುವ ಆರೋಪ ವಿದ್ದು, ನಟ ದರ್ಶನ್​ ಅವರಿಗೂ 2 ಕೋಟಿ ರೂಪಾಯಿ ಮೋಸ ಮಾಡಿರುವ ಆರೋಪವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment