newsfirstkannada.com

ಮಾರ್ಕೆಟ್​ನಲ್ಲಿ ಭೀಕರ ಕಾರ್ ಬಾಂಬ್ ಸ್ಫೋಟ.. 7 ಜನ ಸ್ಥಳದಲ್ಲೇ ಸಾವು, 30ಕ್ಕೂ ಅಧಿಕ ಮಂದಿ ಗಂಭೀರ

Share :

Published March 31, 2024 at 1:22pm

    ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ ಪೊಲೀಸರು

    ಶಾಪಿಂಗ್ ಮಾಡಲು ಮಾರ್ಕೆಟ್​ಗೆ ಬಂದಿದ್ದ ಜನರಿಗೆ ಗಾಯ

    ಕಾರು ಬಾಂಬ್​ ದಾಳಿ ಹೊಣೆ ಇನ್ನು ಯಾರು ಹೊತ್ತುಕೊಂಡಿಲ್ಲ

ಸಿರಿಯಾದ ಅಜಾಜ್ ನಗರದ ಮಾರ್ಕೆಟ್​ನಲ್ಲಿ ಭೀಕರವಾಗಿ ಕಾರು ಬಾಂಬ್ ಸ್ಫೋಟಗೊಂಡ ಪರಿಣಾಮ 7 ಜನರು ಸ್ಥಳದಲ್ಲೇ ಮೃತಪಟ್ಟು 30ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೃತ್ಯ ಎಸಗಿದವರು ಯಾರೆಂಬುದು ಇನ್ನು ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ.

ಅಜಾಜ್ ನಗರದ ಮಾರ್ಕೆಟ್​ ಎಂದಿನಂತೆ ಜನರಿಂದ ತುಂಬಿತ್ತು. ರಂಜಾನ್‌ನಲ್ಲಿ ಉಪವಾಸದಲ್ಲಿದ್ದ ಜನರು ಸಂಜೆ ವೇಳೆಗೆ ಭಾರೀ ಸಂಖ್ಯೆಯಲ್ಲಿ ಮಾರ್ಕೆಟ್​ಗೆ ಶಾಪಿಂಗ್‌ ಮಾಡಲೆಂದು ಬಂದಿದ್ದ ವೇಳೆ ಈ ಬಾಂಬ್ ಅನ್ನು ಸ್ಫೋಟಿಸಲಾಗಿದೆ. ಕಾರಿನಲ್ಲಿದ್ದ ಬಾಂಬ್ ಭಯಾನಕವಾಗಿ ಸ್ಫೋಟಗೊಂಡಿದ್ದರಿಂದ ಸ್ಥಳದಲ್ಲೇ 7 ಜನರು ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ತೀರ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸಿಟಿಯೆಲ್ಲ ತೋರಿಸ್ತೀನೆಂದು ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ.. ಉಬರ್​ ಕ್ಯಾಬ್ ಡ್ರೈವರ್​ನಿಂದ ಕೃತ್ಯ

ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯಕ್ಕೆ ಈ ಕೃತ್ಯ ಯಾವ ಗುಂಪು ಮಾಡಿದೆ ಎಂದು ತಿಳಿದು ಬಂದಿಲ್ಲ. ಜೊತೆಗೆ ಯಾವ ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ. ಟರ್ಕಿಯ ಗಡಿಯ ಸಮೀಪದ ಹಾಗೂ ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದ ಅಜಾಜ್‌ನಲ್ಲಿ ಭಯ ಹುಟ್ಟಿಸಲು ಇಂಥಹ ಹಿಂಸಾತ್ಮಕ ಕೃಥ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾರ್ಕೆಟ್​ನಲ್ಲಿ ಭೀಕರ ಕಾರ್ ಬಾಂಬ್ ಸ್ಫೋಟ.. 7 ಜನ ಸ್ಥಳದಲ್ಲೇ ಸಾವು, 30ಕ್ಕೂ ಅಧಿಕ ಮಂದಿ ಗಂಭೀರ

https://newsfirstlive.com/wp-content/uploads/2024/03/Syrian_town.jpg

Load More