/newsfirstlive-kannada/media/post_attachments/wp-content/uploads/2024/10/Darshan-Vijayalakshmi.jpg)
ಬೆಂಗಳೂರು: ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲು ಸೇರಿದ್ದ ದರ್ಶನ್​​ಗೆ ಹೈಕೋರ್ಟ್​ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಬೆನ್ನು ನೋವಿನ ಸಮಸ್ಯೆಗೆ ತುರ್ತು ಚಿಕಿತ್ಸೆಯ ಅಗತ್ಯ ಹಿನ್ನೆಲೆಯಲ್ಲಿ ಕೋರ್ಟ್​ ಜಾಮೀನು ಮಂಜೂರು ಮಾಡಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ.
ಆ ಮೂಲಕ ದರ್ಶನ್ ಆರು ವಾರಗಳ ಕಾಲ ಚಿಕಿತ್ಸೆ ಪಡೆದು ಮತ್ತೆ ಜೈಲಿಗೆ ಹೋಗಬೇಕು. ಜಾಮೀನು ಮಂಜೂರು ಹಿನ್ನೆಲೆಯಲ್ಲಿ ದರ್ಶನ್ ಕುಟುಂಬಸ್ಥರು ಬಳ್ಳಾರಿಗೆ ಆಗಮಿಸಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್, ನಟ ದನ್ವೀರ್ ಹಾಗೂ ಆಪ್ತರು ಬಳ್ಳಾರಿಗೆ ಬಂದಿದ್ದಾರೆ. ಕಪಗಲ್ ರಸ್ತೆಯಲ್ಲಿರುವ ಸಂಬಂಧಿಕರ ಮನೆಯಲ್ಲಿ ದರ್ಶನ್ ಕುಟುಂಬ ಇದೆ. ಈಗಾಗಲೇ ಜೈಲಾಧಿಕಾರಿಗಳೊಂದಿಗೆ ಕುಟುಂಬಸ್ಥರು ಮಾತನಾಡಿದ್ದಾರೆ. ಜಾಮೀನಿಗೆ ಸಂಬಂಧಿಸಿದ ಕೆಲವು ಪ್ರಕ್ರಿಯೆಗಳನ್ನು ನಡೆಸಲು ಸಿದ್ಧರಿದ್ದಾರೆ. ಅಂದ್ಹಾಗೆ ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗಿ ಇಂದಿಗೆ 63 ದಿನ. ಅಗಷ್ಟ 29 ರಂದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ವಿಜಯಲಕ್ಷ್ಮಿ 10 ಬಾರಿ ಬಳ್ಳಾರಿ ಜೈಲಿಗೆ ಆಗಮಿಸಿ ದರ್ಶನ್​​ರನ್ನು ಭೇಟಿ ಮಾಡಿದ್ದರು.
ಮುಂದೆ ಏನು..?
- ನಟ ದರ್ಶನ್​ಗೆ 6 ವಾರಗಳ ಬೇಲ್​​ ಮಂಜೂರು
- ಬೇಲ್ ಮಂಜೂರು ಪ್ರತಿ CCH 57ಕ್ಕೆ ಸಲ್ಲಿಸಬೇಕು
- ಅಲ್ಲಿ ದರ್ಶನ್​ ರಿಲೀಸ್ ಆರ್ಡರ್ ಪಡೆಯಬೇಕು
- ಆ ಆರ್ಡರ್ ಕಾಪಿಯನ್ನು ಜೈಲಿಗೆ ಸಲ್ಲಿಸಬೇಕು
- ಬಳಿಕವೇ ರಿಲೀಸ್ ಮಾಡಿಸಿಕೊಂಡು ಬರಬೇಕು
- ಇಂದು ಸಂಜೆಯೊಳಗೆ ದರ್ಶನ್​ ಹೊರಬರುವ ಸಾಧ್ಯತೆ
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us