/newsfirstlive-kannada/media/post_attachments/wp-content/uploads/2024/09/Darshan-Bellary-Jail-TV.jpg)
ಬಳ್ಳಾರಿ: ಹೈಸೆಕ್ಯೂರಿಟಿಯ ಬಂಧಿಖಾನೆ ಸೇರಿದ್ರು A2 ದರ್ಶನ್ ಕಿರಿಕ್ ಕಮ್ಮಿಯಾಗಿಲ್ಲ. ಬಳ್ಳಾರಿ ಸೆಲ್ನಲ್ಲಿ ಜೈಲು ಸಿಬ್ಬಂದಿ ವಿರುದ್ಧವೇ ದಾಸ ರಾಂಗ್ ಆಗಿದ್ದಾರಂತೆ. ಫುಲ್ ಬಿಂದಾಸ್ ಆಗಿದ್ದ ದರ್ಶನ್ ಬಂಧಿಖಾನೆಯಲ್ಲಿ ಒಂದು ಟಿ.ವಿಗಾಗಿ ಪರದಾಡುವಂತಹ ಸ್ಥಿತಿ ಬಂದಿದೆ. ದುಸ್ಥಿತಿ ಹೇಗಿದೆ ಅಂದ್ರೆ ಕೊಟ್ಟಿದ್ದ ಟಿ.ವಿ ಕೂಡ ನೆಟ್ಟಗೆ ವರ್ಕ್ ಆಗ್ತಿಲ್ಲ. ಹೀಗಾಗಿ ಫುಲ್ ಟೆನ್ಷನ್ ಆಗಿರೋ ದರ್ಶನ್, ಟಿ.ವಿ ವಿಚಾರಕ್ಕೆ ಜೈಲು ಸಿಬ್ಬಂದಿ ಜೊತೆ ಕಿರಿಕ್ ಮಾಡ್ಕೊಂಡಿದ್ದಾರೆ.
ಇದನ್ನೂ ಓದಿ: ಪವಿತ್ರ ಗೌಡ ಗೇಮ್ ಪ್ಲಾನ್ ಚೇಂಜ್; ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ವಾಪಸ್.. ಕಾರಣ?
ಟಿ.ವಿ ವಿಚಾರ.. ಜೈಲು ಸಿಬ್ಬಂದಿ ವಿರುದ್ಧ ಕೆರಳಿದ ಕಾಟೇರ!
ಇಕ್ಕಟಾಯ್ತಾ ಜೈಲುವಾಸ.. ಸ್ಟ್ರಿಕ್ಟ್ ಮಾಡ್ಬೇಡಿ ಎಂದ ದಾಸ!
ನಾನು ಆರೋಪಿ, ಅಪರಾಧಿಯಲ್ಲ ಎಂದಿರುವ ದರ್ಶನ್ ಅವರು ವಿಚಾರಣಾಧೀನ ಕೈದಿಗಳಿಗೆ ಟಿ.ವಿ ಕೊಡುವಂತೆ ಜೈಲು ನಿಯಮವೇ ಇದೆ. ಆದ್ರೂ ಕೊಡ್ತಿಲ್ಲ ಯಾಕೆ. ಅದಕ್ಕೂ ಕೋರ್ಟ್‌ಗೆ ಅಪ್ಲಿಕೇಷನ್ ಹಾಕ್ಬೇಕಾ ಅಂತ ದರ್ಶನ್ ಫುಲ್ ಗರಂ ಆಗಿದ್ದಾರಂತೆ. ಕೊಡೋದಿದ್ದರೆ ಒಳ್ಳೆ ಟಿ.ವಿ ಕೊಡಿ. ನಾನಿನ್ನೂ ಆರೋಪಿ ಅಪರಾಧಿ ಅಲ್ಲ. ಇಷ್ಟೊಂದು ಸ್ಟ್ರಿಕ್ಡ್ ರೂಲ್ಸ್ ಮಾಡ್ಬೇಡಿ ಎಂದು ದರ್ಶನ್ ಸಿಟ್ಟಾಗಿದ್ದಾರಂತೆ. ಜೈಲು ಅಧೀಕ್ಷಕಿ ಜೊತೆ ಮಾತನಾಡಬೇಕು ಎಂದು ಆರೋಪಿ ದರ್ಶನ್ ಕೇಳಿದ್ದಾರಂತೆ.
‘ಡಿ’ ಗ್ಯಾಂಗ್ನ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ..!
ಇವತ್ತು ಡಿ ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ಅಂತ್ಯವಾದ ಹಿನ್ನಲೆ ಎಲ್ಲಾ ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ 24ನೇ ಎಸಿಎಂಎಂ ಕೋರ್ಟ್ ಸೆಪ್ಟೆಂಬರ್ 17ರವರೆಗೆ ಮತ್ತೆ ವಿಸ್ತರಣೆ ಮಾಡಿ ಆದೇಶ ನೀಡಿದೆ. ಕೇಸ್ಗೆ ಸಂಬಂಧಪಟ್ಟ ಟೆಕ್ನಿಕಲ್ ಎವಿಡೆನ್ಸ್ಗಳನ್ನ ಮುಂದಿನ ವಾರ ಸಲ್ಲಿಕೆ ಮಾಡ್ತೀವಿ ಅಂತಾ ಎಸ್ಪಿಪಿ ಪರ ವಕೀಲರು ತಿಳಿಸಿದ್ದಾರೆ. ಹೀಗಾಗಿ, ಮುಂದಿನ ವಾರದ ಒಳಗಡೆ ಸಲ್ಲಿಕೆ ಮಾಡಲು ನ್ಯಾಯಾಧೀಶರು ಸೂಚಿಸಿದ್ದಾರೆ.
ಇದನ್ನೂ ಓದಿ: 24 ನಿಮಿಷಗಳ ಮಾತುಕತೆ..! ಪ್ರಸಾದ ಅಷ್ಟೇ ಅಲ್ಲ, ದರ್ಶನ್ಗಾಗಿ ವಿಜಯಲಕ್ಷ್ಮಿ ಏನೇನು ತಂದಿದ್ದರು..?
ಜಾಮೀನು ಅರ್ಜಿ ಹಿಂಪಡೆದುಕೊಂಡ ಪವಿತ್ರಾ ವಕೀಲರು!
ಇದು ದರ್ಶನ್ ಅವರ ಕತೆಯಾದ್ರೆ, ಅತ್ತ, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಳದ್ದು ಮತ್ತೊಂದು ಕಥೆ. ಕಾರಾಗೃಹದ ಪಂಜರದಿಂದ ಹಾರಿ ಹೋಗೋಣ ಅಂತಾ ಸ್ಕೆಚ್ ಹಾಕಿದ್ದ ಪವಿತ್ರಾ ಎಲ್ಲರಿಗಿಂತ ಮೊದಲೇ ಜಾಮೀನಿಗೆ ಅರ್ಜಿ ಹಾಕಿದ್ದರು. ಆದ್ರೆ, ನ್ಯಾಯಾಲಯ ಜಾಮೀನು ನೀಡೋಕೆ ನಿರಾಕರಿಸಿತ್ತು. ಇದೀಗ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನ ವಕೀಲರಾದ ಟಾಮಿ ಸೆಬಾಸ್ಟಿನ್ ಹಿಂಪಡೆದಿದ್ದಾರೆ. ಅತ್ತ, ಅಧೀನ ನ್ಯಾಯಾಲಯದಲ್ಲಿ ಹೊಸ ಅರ್ಜಿ ಸಲ್ಲಿಸಲು ಅವಕಾಶ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ