/newsfirstlive-kannada/media/post_attachments/wp-content/uploads/2024/10/Darshan-bellary-Jail-today.jpg)
ಬೆಂಗಳೂರು: ನಟ ದರ್ಶನ್ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್ ಕುಟುಂಬಸ್ಥರು ಜಾಮೀನು ಸಿಕ್ಕ ಬಳಿಕ ಬೇಲ್ ಕಂಡೀಷನ್‌ಗಳನ್ನ ಪೂರೈಸಲು ಮುಂದಾಗಿದ್ದಾರೆ. ಕಾನೂನು ಪ್ರಕ್ರಿಯೆಗಳೆಲ್ಲಾ ಮುಗಿದರೆ ದರ್ಶನ್ ಅವರು ಇಂದೇ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಹೈಕೋರ್ಟ್ ನೀಡಿದ ಮಧ್ಯಂತರ ಜಾಮೀನಿನ ಆದೇಶವನ್ನು ದರ್ಶನ್ ಪರ ವಕೀಲರು ಈಗಾಗಲೇ ಅಧೀನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಹೈಕೋರ್ಟ್ ಆದೇಶದ ಪ್ರತಿ ಸಲ್ಲಿಕೆಯಾದ ಬಳಿಕ ದರ್ಶನ್ ಬೇಲ್ ಶ್ಯೂರಿಟಿ ಪ್ರಕ್ರಿಯೆ ನಡೆದಿದೆ.
ಇದನ್ನೂ ಓದಿ: ವಿಜಯಲಕ್ಷ್ಮಿ ದರ್ಶನ್ ಪೂಜಾ ಫಲ.. ಅಕ್ಟೋಬರ್‌ಗೆ ಹೇಳ್ಬಿಡು ಚಿನ್ನಾ ಬಂದೇ ಬರ್ತೀವಿ ಡೈಲಾಗ್ ವೈರಲ್!
ನಟ ದರ್ಶನ್ ಅವರ ಬೇಲ್‌ಗೆ ಇಬ್ಬರು ಶ್ಯೂರಿಟಿ ನೀಡಬೇಕು. ದರ್ಶನ್ ತಮ್ಮ ದಿನಕರ್ ಹಾಗೂ ಸ್ನೇಹಿತ ಧನ್ವಿರ್ ಅವರು ಕೋರ್ಟ್‌ಗೆ ಆಗಮಿಸಿ ಶ್ಯೂರಿಟಿ ನೀಡಿದ್ದಾರೆ. ಧನ್ವಿರ್ ಅವರಿಗೆ ಜಡ್ಜ್ ನಿಮಗೆ ದರ್ಶನ್ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ. ನನ್ನ ಸ್ನೇಹಿತ ಎಂದಿರುವ ಧನ್ವಿರ್ ಅವರು ರಾಜಾಜಿನಗರ ಮನೆಯ ಆಸ್ತಿ ದಾಖಲೆಯನ್ನು ಶ್ಯೂರಿಟಿಯಾಗಿ ನೀಡಿದ್ದಾರೆ.
ಎರಡನೇ ಶ್ಯೂರಿಟಿಯಾಗಿ ತಮ್ಮ ದಿನಕರ್ ಸಲ್ಲಿಕೆ ಮಾಡಿದ್ದಾರೆ. ಜಡ್ಜ್ ಮುಂದೆ ನನ್ನ ಅಣ್ಣ ಎಂದಿರುವ ಹೇಳಿದ ದಿನಕರ್ ಅವರು ಮಾಗಡಿ ರಸ್ತೆಯ ಆಸ್ತಿ ದಾಖಲೆ ಪತ್ರವನ್ನು ಶ್ಯೂರಿಟಿಯಾಗಿ ನೀಡಿದ್ದಾರೆ. ಮಧ್ಯಂತರ ಜಾಮೀನಿನ ಪ್ರಕ್ರಿಯೆ ಮುಗಿಸುವ ತರಾತುರಿಯಲ್ಲಿರುವ ದರ್ಶನ್ ಪರ ವಕೀಲರು ಇಂದೇ ಜೈಲಿನಿಂದ ಬಿಡುಗಡೆ ಮಾಡಿಸಲು ಮುಂದಾಗಿದ್ದಾರೆ.
ದರ್ಶನ್ ಬೇಲ್ ಕಂಡೀಷನ್!
ಷರತ್ತು 01: ಪಾಸ್ ಪೋರ್ಟ್ ಸರಂಡರ್ ಮಾಡಬೇಕು
ಷರತ್ತು 02: ಕೋರ್ಟ್‌ಗೆ 2 ಲಕ್ಷ ರೂಪಾಯಿ ಬಾಂಡ್ ನೀಡ್ಬೇಕು
ಷರತ್ತು 03: ಜಾಮೀನಿಗೆ ಇಬ್ಬರ ಶ್ಯೂರಿಟಿಯನ್ನ ನೀಡಬೇಕು
ಷರತ್ತು 04: ಸಾಕ್ಷಿ ಮೇಲೆ ಪ್ರತ್ಯಕ್ಷ/ಪರೋಕ್ಷ ಬೆದರಿಕೆ ಹಾಕಬಾರದು
ಷರತ್ತು 05: 1 ವಾರದಲ್ಲಿ ವೈದ್ಯಕೀಯ ಶಿಫಾರಸು ವರದಿ ಸಲ್ಲಿಸಬೇಕು
ಷರತ್ತು 06: ಪ್ರಕರಣದ ಸಾಕ್ಷಿಗಳ ನಾಶಕ್ಕೆ ಪ್ರಯತ್ನ ಪಡಬಾರದು
ಷರತ್ತು 07: ಪ್ರಕರಣದ ಸಾಕ್ಷಿಗಳನ್ನ ಸಂಪರ್ಕ ಮಾಡಬಾರದು
ಷರತ್ತು 08: ಜಾಮೀನನ್ನ ದುರುಪಯೋಗ ಮಾಡಿಕೊಳ್ಳಬಾರದು
ಷರತ್ತು 09: ದರ್ಶನ್ ಬೆಂಗಳೂರು ಬಿಟ್ಟು ಹೊರಹೋಗುವಂತಿಲ್ಲ
ಷರತ್ತು 10: ಟ್ರಯಲ್ ನಡೆಸುವ ಕೋರ್ಟ್ ವ್ಯಾಪ್ತಿಯಲ್ಲಿಯೇ ಚಿಕಿತ್ಸೆ
ಷರತ್ತು 11: ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ
ಷರತ್ತು 12: ಸಾಮಾಜಿಕ ಜಾಲತಾಣದಲ್ಲೂ ಪ್ರತಿಕ್ರಿಯೆ ನೀಡುವಂತಿಲ್ಲ
ಷರತ್ತು 13: ತಮ್ಮ ಆರೋಗ್ಯದ ಬಗ್ಗೆ ಎಲ್ಲೂ ಹೇಳಿಕೆ ನೀಡುವಂತಿಲ್ಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ