Advertisment

ದರ್ಶನ್​​ಗೆ ಕಾಡಿತ್ತು ಪಶ್ಚತಾಪ.. ‘ಡೆವಿಲ್ ಶೂಟಿಂಗ್​​​ನಲ್ಲಿ ನಟ ಹೇಗಿದ್ದರು ಅಂದರೆ..’

author-image
Ganesh
Updated On
ಅನ್ನ ತಿನ್ನಿಸಿ ಹತ್ಯೆ.. ವಿಡಿಯೋ ಮಾಡಿ ವಿಕೃತಿ; ಬೆಚ್ಚಿ ಬೀಳಿಸಿದ ರೇಣುಕಾಸ್ವಾಮಿ ಕೊಲೆಯ ಸ್ಫೋಟಕ ಸತ್ಯಗಳು
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್
  • ಹತ್ಯೆ ಪ್ರಕರಣದ ಚಕ್ರವ್ಯೂಹದಲ್ಲಿ ಸಿಲುಕಿ ದರ್ಶನ್ ಒದ್ದಾಟ
  • ನಟ ದರ್ಶನ್ ಅಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿಯಲ್ಲಿ ವಿಲವಿಲ

ಅದೊಂದು ಆಶ್ಲೀಲ ಮೆಸೇಜ್.. ಕೋಪದ ಕೈಗೆ ಬುದ್ಧಿ ಕೊಟ್ಟಿದ್ದ ದರ್ಶನ್ ಅಂಡ್ ಗ್ಯಾಂಗ್​​​ ಜೈಲು ಪಾಲಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಚಕ್ರವ್ಯೂಹದಲ್ಲಿ ಸಿಲುಕಿ ದರ್ಶನ್ ಒದ್ದಾಡುವಂತಾಗಿದೆ. ದರ್ಶನ್ ಬಂಧನ ಅಪಾರ ಅಭಿಮಾನಿಗಳನ್ನು ಘಾಸಿಗೊಳಿಸಿದೆ. ಇನ್ನೆರಡು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದು ದರ್ಶನ್​ಗೆ ಜೈಲುಪಾಲಾಗುವ ಭೀತಿ ಎದುರಾಗಿದೆ. ಮತ್ತೊಂದೆಡೆ ದರ್ಶನ್ ನಂಬಿ ಕೋಟಿ ಕೋಟಿ ಸುರಿದಿದ್ದ ನಿರ್ಮಾಪಕರಿಗೂ ಟೆನ್ಷನ್ ಶುರುವಾಗಿದೆ.

Advertisment

ಹತ್ಯೆ ಪ್ರಕರಣದ ಚಕ್ರವ್ಯೂಹದಲ್ಲಿ ಸಿಲುಕಿ ‘ದರ್ಶನ್​’ ಒದ್ದಾಟ!
ನಟ ದರ್ಶನ್ ಸ್ನೇಹಿತೆ ಪವಿತ್ರಾಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದೇ ಹತ್ಯೆಗೆ ಕಾರಣ ಎನ್ನಲಾಗಿದ್ದರೂ ಇದರ ಹಿಂದೆ ಇನ್ನೇನಾದ್ರೂ ಇದ್ಯಾ ಅನ್ನೋದು ಬಯಲಾಗಿಲ್ಲ. ಸದ್ಯ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿರುವ ದರ್ಶನ್ ಅಂಡ್ ಗ್ಯಾಂಗ್​ಗೆ ವಿಚಾರಣೆ ನಡೆಯುತ್ತಿದೆ. ಕೊಲೆಯಾದ ಪಟ್ಟಣಗೆರೆ ಶೆಡ್, ಸುಮನಹಳ್ಳಿ ಬ್ರಿಡ್ಜ್ ಹಾಗೂ ಚಿತ್ರದುರ್ಗದಲ್ಲಿ ಸ್ಥಳ ಮಹಜರು ನಡೆದಿದ್ದು ಪೊಲೀಸರು ಹಲವು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದಾರೆ. ಜೈಲುಕಂಬಿಯೊಳಗೆ ಬಂಧಿಯಾಗಿರುವ ನಟ ದರ್ಶನ್ ಅಂಡ್ ಗ್ಯಾಂಗ್ ವಿಲವಿಲ ಒದ್ದಾಡುವಂತಾಗಿದೆ.

ಇದನ್ನೂ ಓದಿ:ದರ್ಶನ್​​ ಕೇಸ್​​​ನಲ್ಲಿ ರಾಜಕಾರಣಿಗಳ ಪ್ರಭಾವ? ರಕ್ಷಣೆಗೆ ಬಂದ್ರಾ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು?

publive-image

ನಟ ದರ್ಶನ್ ಮತ್ತು ಸಹಚರರನ್ನು ಬಂಧಿಸಿ ಇಂದಿಗೆ 4 ದಿನಗಳು ಕಳೆದಿವೆ. ಕೋರ್ಟ್​ ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿದೆ. ಈಗಾಗಲೇ 4 ದಿನಗಳ ವಿಚಾರಣೆ ಕೂಡ ಕಂಪ್ಲೀಟ್ ಆಗಿದೆ. ನಟ ದರ್ಶನ್ ಮಾತ್ರ ವಿಚಾರಣೆ ವೇಳೆ ನನಗೇನೂ ಗೊತ್ತಿಲ್ಲ, ನಾನೇನೂ ಮಾಡ್ಲಿಲ್ಲ ಅನ್ನೋದನ್ನ ಬಿಟ್ರೆ ಬೇರೆ ಏನನ್ನೂ ಹೇಳ್ತಿಲ್ಲ ಎನ್ನಲಾಗಿದೆ. ಅಶ್ಲೀಲ ಮೆಸೇಜ್ ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಶೆಡ್​ನಲ್ಲಿ ಭೇಟಿಯಾದೆ. ಇನ್ನೊಂದು ಸಲ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದರೆ ಸರಿ ಇರಲ್ಲ ಎಂದು ಎಚ್ಚರಿಕೆ ಕೊಟ್ಟೆ. ಬಳಿಕ ದುಡ್ಡು ಕೊಟ್ಟು ಊಟ ಮಾಡಿಕೊಂಡು ಊರು ಸೇರುವಂತೆ ಹೇಳಿ ಹೊರಟು ಹೋದೆ. ನಾನು ಈ ಕೊಲೆ ಮಾಡಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ ಅಂತಿದ್ದಾರಂತೆ..

Advertisment

publive-image

ನಟ ದರ್ಶನ್ ಬಂಧನದ ಬಳಿಕ ಅವರ ಒಂದೊಂದೇ ವಿಚಾರಗಳು ಹೊರಬರ್ತಿವೆ. ದರ್ಶನ್​ ಕ್ರೌರ್ಯಕ್ಕೆ ಬಲಿಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬ ಕಣ್ಣೀರಿಡ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬಯಲಾದ ಬಳಿಕ ದರ್ಶನ್ ಸಹಚರರ ಗೂಂಡಾಗಿರಿಯ ಒಂದೊಂದೇ ಪ್ರಕರಣಗಳು ಹೊರಬರ್ತಿವೆ.

ಹತ್ಯೆ ಮಾಡಿದ್ದಕ್ಕೆ ಪಶ್ಚಾತ್ತಾಪ!
ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಬಳಿಕ ಮೈಸೂರಿನಲ್ಲಿ ಡೆವಿಲ್ ಶೂಟಿಂಗ್​​​ನಲ್ಲಿ ಭಾಗಿಯಾಗಿದ್ದರು. ಆದ್ರೆ ಶೂಟಿಂಗ್​​ನಲ್ಲಿದ್ದರೂ ದರ್ಶನ್ ಮನಸ್ಸು ತಾನು ಎಸಗಿದ್ದ ಕ್ರೌರ್ಯದ ಬಗ್ಗೆಯೇ ಯೋಚಿಸ್ತಿತ್ತು ಎನ್ನಲಾಗಿದೆ. ಸದಾ ಮೊಬೈಲ್ ನೋಡುತ್ತಾ ಚಿಂತೆಯಲ್ಲಿ ಮುಳುಗಿದ್ದರು. ಬಳಿಕ ಶೂಟಿಂಗ್ ಪ್ಯಾಕಪ್ ಆಗಿತ್ತು. ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮುಂದಿನ ಸಿನಿಮಾ ಭವಿಷ್ಯ ಮಂಕಾಗಿದೆ. ಸತತ ಸೋಲುಗಳ ಬಳಿಕ ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ದರ್ಶನ್​ ಕೈಯಲ್ಲಿ 4 ಸಿನಿಮಾಗಳಿದ್ದು ಹಣ ಹಾಕಿದ ನಿರ್ಮಾಪಕರನ್ನು ಆತಂಕಕ್ಕೆ ತಳ್ಳಿದೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಒಂದು ಸೈಲೆಂಟ್ ವೆಪನ್.. ಇವರೇ ವಿಶ್ವಕಪ್ ಗೆಲ್ಲಿಸಿಕೊಡೋಡು..!

Advertisment

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​ಗೆ ಯಾವುದೇ ಕಾರಣಕ್ಕೂ ಬೇಲ್ ಸಿಗಲ್ಲ, ಎಲ್ಲಾ ಸಾಕ್ಷಿಗಳೂ ದರ್ಶನ್ ವಿರುದ್ಧವಾಗಿವೆ. ಹೀಗಾಗಿ ದರ್ಶನ್​ ಜೀವಾವಧಿ ಶಿಕ್ಷೆ ಕೂಡ ಆಗಬಹುದು ಅಂತ ನಿವೃತ್ತ ಎಸಿಪಿ ಜಿ.ಎನ್.ಮೋಹನ್ ಹೇಳಿದ್ದಾರೆ. ಒಟ್ಟಾರೆ, ಸಾರ್ವಜನಿಕ ಜೀವನದಲ್ಲಿ ಮಾದರಿಯಾಗಬೇಕಿದ್ದ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ತಮ್ಮ ಭವಿಷ್ಯಕ್ಕೆ ಕಂಟಕ ತಂದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment