newsfirstkannada.com

ಬಳ್ಳಾರಿ ಹೆಸರು ಕೇಳಿ ಬೆಚ್ಚಿ ಬಿದ್ದಿದ್ದು ಇದಕ್ಕೆನಾ? ದರ್ಶನ್‌ಗೆ ಡಬಲ್ ಶಾಕ್‌; ದಾಸನ ಸೆರೆವಾಸ ಈಗ ಭಯಾನಕ!

Share :

Published August 29, 2024 at 10:34pm

    ಬೆಂಗಳೂರಿನಲ್ಲಿದ್ದಷ್ಟು ಫ್ರೀಯಾಗಿ ಇಲ್ಲಿರೋದಕ್ಕೆ ಆಗೋದೇ ಇಲ್ಲ ಯಾಕೆ?

    ತಿಂಡಿ ಬೇಡ ಅಂದು.. ಮಧ್ಯಾಹ್ನ ಮಿಸ್ಸಾದ್ರೆ.. ದರ್ಶನ್​​ಗೆ ತುಂಬಾನೇ ಕಷ್ಟ

    ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು 15 ನಿಮಿಷ ಅವಕಾಶ ಅಷ್ಟೇ!

ದರ್ಶನ್​​ ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟ ಕಾರಣಕ್ಕೆ ಇಲ್ಲಿನ ಪೊಲೀಸರಿಗೂ ಒಂದು ಶಿಕ್ಷೆ ಎದುರಾಗಿದೆ. ದರ್ಶನ್​​ ಸೆಕ್ಯೂರಿಟಿ ಕಾರಣಕ್ಕೆ ರಾತ್ರಿ ಹಗಲು ಪೊಲೀಸರು ನಿದ್ದೆಗೆಡಬೇಕಿದೆ. ದರ್ಶನ್​​ ಜೈಲುವಾಸ ಅನುಭವಿಸೋ ಡಿ ಸೆಲ್​ ಸುತ್ತಲಿನ ಸರ್ಪಗಾವಲಿನ ಕೊನೇ ಕೋಟೆ ಎಷ್ಟು ಡೇಂಜರ್​​ ಗೊತ್ತಾ?

ಇದನ್ನೂ ಓದಿ: ಸೆಲ್ ನಂ.15: ಭಯೋತ್ಪಾದಕರಿಗೆ ಸಿದ್ಧಪಡಿಸಿದ್ದ ಕೋಣೆಯಲ್ಲಿ ದರ್ಶನ್ ವಾಸ; ಬಳ್ಳಾರಿ ಜೈಲಿನ ಸೀಕ್ರೆಟ್ ಇಲ್ಲಿದೆ! 

ದರ್ಶನ್‌ ಬಳ್ಳಾರಿ ಜೈಲಿಗೆ ಎಂಟ್ರಿಯಾಗುತ್ತಿದ್ದಂತೆ ಕೈಯಲ್ಲಿದ್ದ ಕಡಗ, ಕೆಂಪು ದಾರ, ಕತ್ತಲ್ಲಿದ್ದ ಸರವನ್ನು ತೆಗಿಸಿದ್ದಾರೆ. ಬೆಂಗಳೂರಿನಲ್ಲಿದ್ದಷ್ಟು ಫ್ರೀಯಾಗಿ ಇಲ್ಲಿರೋದಕ್ಕೆ ಆಗಲ್ಲ ಅನ್ನೋದು ಇದ್ರಿಂದ ಗೊತ್ತಾಗಿದೆ. ಹಾಗಾಗಿಯೇ ಬೆಳಗಿನ ಊಟವನ್ನೂ ದರ್ಶನ್​​ ನಿರಾಕರಿಸಿದ್ದಾರೆ.

ತಿಂಡಿ ಬೇಡ ಅಂದು.. ಮಧ್ಯಾಹ್ನ ಮಿಸ್ಸಾದ್ರೆ.. ದರ್ಶನ್​​ಗೆ ತುಂಬಾನೇ ಕಷ್ಟ!
ಬಳ್ಳಾರಿ ಸೆಂಟ್ರಲ್​​ ಜೈಲಿನ ನಿಯಮದ ಪ್ರಕಾರ ಚಪಾತಿ, ಅನ್ನ, ಸಾಂಬಾರ್​ ಊಟ ನೀಡಲಾಗುತ್ತಿದೆ. ಇಲ್ಲಿನ ಹೈ ಸೆಕ್ಯೂರಿಟಿ ಸೆಲ್​​ನಲ್ಲಿ ದರ್ಶನ್​​ಗೆ ಊಟ ಕಳುಹಿಸಲಾಗಿತ್ತು. ಆದರೆ ಊಟ ಬೇಡ ಅಂತ ತಿರಸ್ಕರಿಸಿದ್ದಾರೆ ದರ್ಶನ್. ಡಿ ಸೆಲ್​​ನಲ್ಲಿ ಮತ್ತೂ ಒಂದು ಸಮಸ್ಯೆ ಇದೆ. ಬೆಳಗ್ಗೆ ತಿಂಡಿ ನಿರಾಕರಿಸಿದಂತೆಯೇ ಮಧ್ಯಾಹ್ನದ ಊಟವನ್ನೂ ಮಿಸ್​​ ಮಾಡಿಕೊಂಡರೇ ಸಂಜೆ 6 ತನಕ ಊಟವೇ ಇರಲ್ಲ. ಜೈಲು ನಿಯಮದ ಪ್ರಕಾರ 11-12 ಗಂಟೆಗೆ ಮಧ್ಯಾಹ್ನದ ಊಟವಿದೆ. ಈ ವೇಳೆ ಮಿಸ್​​ ಮಾಡಿಕೊಂಡರೇ ಏನಪ್ಪಾ? ಅನ್ನೋ ಟೆನ್ಶನ್​​ ಕೂಡ ದರ್ಶನ್​​ಗೆ ಶುರುವಾಗಿದೆ.

ಪೊಲೀಸರಿಗೆ ಮೊಬೈಲ್ ಇಲ್ಲ.. ವೈರ್ ಲೆಸ್ ವಾಕಿಟಾಕಿ!
ದರ್ಶನ್​​ ಎಂಟ್ರಿಗೂ ಮುನ್ನವೇ ಡಿ ಸೆಲ್​​​ ತುಂಬಾನೇ ಬದಲಾಗಿದೆ. ದರ್ಶನ್​​ ಪರಪ್ಪನ ಅಗ್ರಹಾರದಲ್ಲಿ ಫೋನ್​​ನಲ್ಲಿ ಮಾತಾಡಿದ್ರು. ವಿಡಿಯೋ ಕಾಲ್‌ನಲ್ಲಿ ಮುಖ ತೋರಿಸಿದ್ದರು. ಜೈಲಿನ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ ಅನ್ನೋ ಕಾರಣಕ್ಕೇ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರೋದು. ದರ್ಶನ್​​ ಕಾರಣಕ್ಕೆ ಇದೀಗ ಪೊಲೀಸರೂ ಫೋನ್ ಬಳಸುವಂತಿಲ್ಲ. ಬಳ್ಳಾರಿ ಕೇಂದ್ರ ಕಾರಗೃಹದಲ್ಲಿ ದರ್ಶನ್ ಅವರನ್ನು ಬಂಧಿಸಿಡುವ ಹಿನ್ನೆಲೆ ಜೈಲ್ ನಲ್ಲಿ ಯಾರೊಬ್ಬರು ಪ್ರವೇಶಿಸದಂತೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇನ್ನು ಜೈಲ್ ಸಿಬ್ಬಂದಿಗಳಿಗೂ ಸೆಲ್ ನಲ್ಲಿ ಮೊಬೈಲ್ ಬಳಕೆ ನಿಷೇಧಿಸಿದ್ದು, ವೈರ್ ಲೆಸ್ ಬಳಕೆಗೆ ಮಾತ್ರ ಅವಕಾಶ ಒದಗಿಸಲಾಗಿದೆ. ಇದರೊಂದಿಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಮೊಬೈಲ್ ಬಳಕೆ ಮೇಲೆ ಹೆಚ್ಚಿನ‌ ನಿಗಾವಹಿಸಿದ್ದು, ಈ ಬಗ್ಗೆ ಅಧಿಕಾರಿಗಳಿಂದ ಕಟ್ಟು ನಿಟ್ಟಿನ‌ ಸೂಚನೆ ನೀಡಲಾಗಿದೆ.

ಬಾಡಿವೋರ್ನ್​ ಕ್ಯಾಮೆರಾ ಕಣ್ಗಾವಲು!
ದರ್ಶನ್​​ ಪರಪ್ಪನ ಅಗ್ರಹಾರದಲ್ಲಿ ಡೀಲ್ ಮಾಡ್ಕೊಂಡ್ರೋ? ಬಿಟ್ರೋ.. ಒಟ್ನಲ್ಲಿ ರೌಡಿಗಳ ಮಧ್ಯೆ ರಾಜಾಧಿರಾಜನಂತೆ ದರ್ಬಾರ್​ ಮಾಡಿದ್ದಾರೆ. ಸಾಮಾನ್ಯ ಕೈದಿಗಳಿಗಿಂತ ಸಖತ್ತಾಗೇ ಇದ್ರು ದರ್ಶನ್. ಆದರೆ, ಬಳ್ಳಾರಿ ಜೈಲಿನಲ್ಲಿ ಮೊದಲಿನಂತೆ ಇರೋಕಾಗಲ್ಲ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿರುತ್ತಾರೆ. ದರ್ಶನ್​ಗೆ 24 ಗಂಟೆಯೂ ಸಿಸಿಟಿವಿ ಹಾಗೂ ಬಾಡಿವೋರ್ನ್​ ಕ್ಯಾಮರಾ ಕಣ್ಗಾವಲು ಇರಲಿದೆ. ದರ್ಶನ್​ ಭದ್ರತೆಗೆ ನಿಯೋಜನೆಯಾಗಿರುವ ಸಿಬ್ಬಂದಿ ಬಾಡಿ ಕ್ಯಾಮೆರಾ ಅಳವಡಿಸಿಕೊಳ್ಳುವುದು ಕಡ್ಡಾಯ ಅಂತ ಆದೇಶ ಮಾಡಲಾಗಿದೆ. ಈ ಸಲ ದರ್ಶನ್​​ ಸಣ್ಣದಾಗಿ ಸಿಕ್ಕಿ ಹಾಕಿಕೊಂಡ್ರೂ ದೊಡ್ಡದಾದ ಅಪಾಯವೇ ಎದುರಾಗಲಿದೆ. ಅದ್ರಲ್ಲೂ ಡಿ ಸೆಲ್​​ ಸುತ್ತಾ ಓಡಾಡೋ ಜೈಲು ಸಿಬ್ಬಂದಿ ಹಾಗೂ ವಿಶೇಷ ಪೊಲೀಸ್ ಅಧಿಕಾರಿಗಳು ಬಾಡಿ ಕ್ಯಾಮೆರಾದಲ್ಲೇ ಇರಬೇಕಾಗುತ್ತದೆ. ಈ ಮೂಲಕ ದರ್ಶನ್​​ರ ಸಣ್ಣ ಪುಟ್ಟ ಚಲನವಲನಗಳನ್ನೂ ಸಹ ಚಿತ್ರೀಕರಿಸಲಾಗುತ್ತದೆ. ಭದ್ರತೆಯ ಕಾರಣಕ್ಕೆ ದರ್ಶನ್​​​ ಬೆಂಕಿಯಿಂದ ಬಾಣಲೆಗೆ ಬಿದ್ದಷ್ಟೇ ಟೈಟ್​​​ ವಾತಾವರಣದಲ್ಲಿ ಇರಬೇಕಾಗುತ್ತದೆ.

ಗೋಡೆ ಮುಳ್ಳು ತಂತಿ.. ಕರೆಂಟ್ ಬೇಲಿ
ಬಳ್ಳಾರಿ ಸೆಂಟ್ರಲ್​​ ಜೈಲಿನ ಸುತ್ತಲಿನ ಆಳೆತ್ತರದ ಗೋಡೆಗಳು ಅದೂ ಸಹ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ದೈತ್ಯಾಕಾರದ ಗೋಡೆಗಳು. ಆ ಗೋಡೆಗಳ ಮೇಲೆ ಸದಾ ವಿದ್ಯುತ್​ ಹರಿಯೋ ಆರು ವಲಯದ ಮುಳ್ಳು ತಂತಿಗಳು.

ಇದನ್ನೂ ಓದಿ: ಕೊನೆಗೂ ದರ್ಶನ್ ಕೈಯಲ್ಲಿದ್ದ ಕಡಗ ತೆಗೆಸಿದ ಪೊಲೀಸರು.. ಬಳ್ಳಾರಿ ಜೈಲಲ್ಲೂ ಅದೇ ಗತ್ತು, ದೌಲತ್ತು! 

ಇಷ್ಟೆಲ್ಲಾ ರಕ್ಷಣಾ ಕೋಟೆಗಳನ್ನು ನೋಡಿಯೇ ದರ್ಶನ್ ಬೆಚ್ಚಿ ಬಿದ್ದಿದ್ದಾರೆ. ಬಳ್ಳಾರಿ ಜೈಲಿಗೆ ಬಂದ ನಟ ದರ್ಶನ್‌ರಿಗೆ ಮೊದಲು ಮೆಡಿಕಲ್ ಚೆಕಪ್‌ಗೆ ಕರೆದೊಯ್ದಲಾಗಿತ್ತು. ಬಳಿಕ ದರ್ಶನ್‌ಗೆ ನಿಗದಿ ಮಾಡಿದ್ದ ಸೆಲ್‌ಗೆ ಬಿಡಲಾಗಿದೆ. ದರ್ಶನ್ ಬಳ್ಳಾರಿ ಜೈಲಿನ ಮೊದಲ ಗೇಟ್ ಬಳಿ ಬರ್ತಿದ್ದಂತೆ ತಲೆ ಚೆಚ್ಚಿಕೊಂಡ್ರು ಎನ್ನಲಾಗ್ತಿದೆ. ​ ಬಳಿಕ ಜೈಲಿನ ಹೈಸೆಕ್ಯೂರಿಟಿಯ 15ನೇ ಸೆಲ್‌ನನ್ನು ಕರೆದುಕೊಂಡು ಹೋದ್ರು. ಅಲ್ಲಿನ ವ್ಯವಸ್ಥೆ, ಭದ್ರತೆ ಕಂಡು ದರ್ಶನ್​ ಶಾಕ್ ಆಗಿದ್ದಾರೆ ಎನ್ನಲಾಗ್ತಿದೆ.

ಒಂದು ಸೆಲ್‌ನಲ್ಲಿ ಇಬ್ಬರು ಕೈದಿಗಳು ಇರುವ ವ್ಯವಸ್ಥೆ ಇದೆ. ಆದರೆ ದರ್ಶನ್​​ ಜೊತೆ ಮತ್ತೊಬ್ಬರು ಇರೋದಕ್ಕೆ ಅವಕಾಶವನ್ನೇ ಕಲ್ಪಿಸಿಲ್ಲ. ಪ್ರತಿಯೊಂದು ಸೆಲ್ 10/10 ಅಡಿ ಅಗಲದ ಪುಟ ಜಾಗವನ್ನು ಹೊಂದಿದೆ. ಅಷ್ಟೇ ಅಲ್ಲದೇ ಹೆಚ್ಚಿನ ಪೊಲೀಸ್​ ಸಿಬ್ಬಂದಿಯನ್ನು ಸಹ ನೇಮಿಸಲಾಗಿದೆ. ಸೆಲ್ ಮುಂಭಾಗ 20 ಅಡಿ ಅಗಲ 60 ಅಡಿ ಉದ್ದದ ಜಾಗದಲ್ಲಿ ವಾಕಿಂಗ್ ಮಾಡಬಹುದು.

ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು 15 ನಿಮಿಷ ಅವಕಾಶ ನೀಡಿಲ್ಲ. ಕೈದಿಗಳ ವಾಕಿಂಗ್ ವೇಳೆಯೂ ಈ ವೇಳೆ ಭದ್ರತೆ ಸಿಬ್ಬಂದಿ ಕೂಡ ಹಾಜರಿರುತ್ತಾರೆ. ಅಕ್ಷರಶಃ ದರ್ಶನ್​​ ಜೈಲುವಾಸ ಅನುಭವಿಸೋ ಜಾಗ, ಅಲ್ಲಿನ ಮೌನ ದರ್ಶನ್​​ರನ್ನ ಪರಿವರ್ತನೆ ಮಾಡಿದ್ರೂ ಅಚ್ಚರಿ ಇಲ್ಲ.. ಆದರೇ, ಬಳ್ಳಾರಿ ಸೆಂಟ್ರಲ್​ ಜೈಲಿನಲ್ಲೂ ಭ್ರಷ್ಟ ಅಧಿಕಾರಿಗಳ ಕಾರಣಕ್ಕೆ ಕೆಟ್ರೆ ದೇವರೇ ಕಾಪಾಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳ್ಳಾರಿ ಹೆಸರು ಕೇಳಿ ಬೆಚ್ಚಿ ಬಿದ್ದಿದ್ದು ಇದಕ್ಕೆನಾ? ದರ್ಶನ್‌ಗೆ ಡಬಲ್ ಶಾಕ್‌; ದಾಸನ ಸೆರೆವಾಸ ಈಗ ಭಯಾನಕ!

https://newsfirstlive.com/wp-content/uploads/2024/08/darshan-6-2.jpg

Load More