newsfirstkannada.com

ಕಮಿಷನರ್‌ ಕಂಡ್ರೆ ಸಪ್ಪೆ ಮುಖ.. ದರ್ಶನ್‌ ನಡೆ ನುಡಿಯಲ್ಲಿ ಭಾರೀ ಬದಲಾವಣೆ.. ಕೊನೆಗೂ ಬಂತಾ ಬುದ್ಧಿ..?

Share :

Published June 18, 2024 at 1:59pm

Update June 19, 2024 at 7:10am

    1 ಸೆಲ್​.. 1 ಚಾಪೆ.. 1 ಚೇರ್.. ಈಗ ದರ್ಶನ್‌ ಲೈಫ್​ ಇಷ್ಟೇ!

    ಸ್ಟೇಷನ್‌ನಲ್ಲಿ ದರ್ಶನ್‌ ಹೇಗಿದ್ದಾರೆ? ಏನ್‌ ಮಾಡ್ತಿದ್ದಾರೆ?

    ಸೆಲ್‌ನಲ್ಲಿ ಏಕಾಂಗಿ.... ನಟನಿಗೆ ಪಾಪ ಪ್ರಜ್ಞೆ ಕಾಡುತ್ತಿದೆಯಾ?

ನಟ ದರ್ಶನ್‌ ಅದೆಷ್ಟೋ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರ ಮಾಡಿದ್ದಾರೆ. ಕ್ರಿಮಿನಲ್‌ಗಳನ್ನು ಮಟ್ಟ ಹಾಕಿದ್ದಾರೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡ್ಸಿದ್ದಾರೆ. ಅದು ರೀಲ್‌ ಲೈಫ್‌. ಈಗ ರಿಯಲ್‌ ಲೈಫ್‌ನಲ್ಲಿ ಅವರೇ ಪೊಲೀಸ್‌ ಕಸ್ಟಡಿ ಸೇರಿದ್ದಾರೆ. ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸ್ತಿದ್ದಾರೆ. ಸ್ಟೇಷನ್‌ನಲ್ಲಿ ದರ್ಶನ್‌ ನಡೆ ನುಡಿ ಹೇಗಿದೆ?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾ ಗೌಡ ಎ1 ಆಗಿದ್ರೆ, ದರ್ಶನ್‌ ಎ 2 ಆಗಿದ್ದಾರೆ. ದರ್ಶನ್‌ ಅಂಡ್‌ ಗ್ಯಾಂಗ್‌ ಪೊಲೀಸ್‌ ಸುಪರ್ದಿಯಲ್ಲಿದ್ದಾರೆ. ಪರಿಣಾಮ ಚಿತ್ರರಂಗದಲ್ಲಿ ಮಹಾರಾಜನಂತಿದ್ದ ದರ್ಶನ್‌ ಇಂದು ಸ್ಟೆಷನ್‌ಲ್ಲಿ ಏನಾಂಗಿಯಾಗಿ ಜೀವನ ಮಾಡ್ಬೇಕಾಗಿದೆ. ಒಂದೇ ರೂಮ್‌ನಲ್ಲಿ, ಒಂದೇ ಚಾಪೆಯಲ್ಲಿ, ಒಂದೇ ಚೇರ್‌ನಲ್ಲಿ ಜೀವನ ದೂಡ್ಬೇಕಾಗಿದೆ.

ಇದನ್ನೂ ಓದಿ:ಪೂರ್ತಿ ಊಟ ಮಾಡಲ್ಲ.. ಸೆಲ್​ನಲ್ಲಿ ಏಕಾಂಗಿ.. 1 ಸೆಲ್​.. 1 ಚಾಪೆ.. 1 ಚೇರ್.. ದರ್ಶನ್ ಸ್ಟೇಷನ್ ಡೈರಿ..!

ಜಾಸ್ತಿ ಪ್ರಶ್ನೆ ಕೇಳಿದ್ರೆ ಕಾಲಿಗೆ ಬೀಳಲು ಬರ್ತಾರೆ
ದರ್ಶನ್‌ ಬಂಧನ ಆದಾಗಿಂದ ಪ್ರತಿ ನಿತ್ಯ ದರ್ಶನ್‌ ವಿಚಾರಣೆ ನಡೀತಾನೇ ಇದೆ. ಹತ್ಯೆ ಕೇಸ್‌ಗೆ ಸಂಬಂಧ ಪಟ್ಟ ಸಾಲು ಸಾಲು ಪ್ರಶ್ನೆಗಳನ್ನು ದರ್ಶನ್‌ಗೆ ಕೇಳಲಾಗ್ತಿದೆ. ಬಹುಪಾಲು ಪ್ರಶ್ನೆಗಳಿಗೆ ದರ್ಶನ್‌ ನನ್ಗೆ ಗೊತ್ತಿಲ್ಲ ಅನ್ನೋ ಉತ್ತರ ನೀಡ್ತಿದ್ದಾರೆ. ಕೆಲವು ಆಯ್ದ ಪ್ರಶ್ನೆಗಳಿಗೆ ಮಾತ್ರ ಉತ್ತರ ಕೊಡ್ತಿದ್ದಾರೆ. ಇನ್ನು ತನಿಖಾಧಿಕಾರಿಗಳು ಜಾಸ್ತಿ ಪ್ರಶ್ನೆ ಕೇಳಿದ್ರು? ಟೆಕ್ನಿಕಲ್‌ ದಾಖಲೆಗಳನ್ನು ಇಟ್ಕೊಂಡ್‌ ಪ್ರಶ್ನೆ ಕೇಳಿದ್ರು ಅಂತಾದ್ರೆ, ಸಾರ್‌ ನನ್ನ ಬಿಡ್ಬಿಡಿ. ನನ್ಗೆ ಗೊತ್ತಿರೋದ್‌ ಇಷ್ಟೇ ಅಂತಾ ಹೇಳ್ತಾ ಕಾಲಿಗೆ ಬೀಳಲು ಮುಂದಾಗ್ತಿದ್ದಾರಂತೆ.

ವಿಚಾರಣೆ ವೇಳೆ ತಲೆ ತಗ್ಗಿಸ್ಕೊಂಡ್‌ ಸೈಲೆಂಟ್‌
ಸ್ಟೇಷನ್‌ ಮುಟ್ಟಿಲು ಹತ್ತಿದ್ಮೇಲೆ ಯಾರೇ ಆದ್ರೂ ತಗ್ಗಿ ಬಗ್ಗಿ ನಡೀಲೇಬೇಕು. ಹಾಗೊಂದು ವೇಳೆ ತಗ್ಗಿ ಬಗ್ಗಿ ನಡೀತಿಲ್ಲ ಅಂತಾದ್ರೆ ಪೊಲೀಸರು ಹೇಗೆ ಬೆವರಿಳಿಸ್ಬೇಕೋ ಹಾಗೇ ಬೆವರಿಳಿಸ್ತಾರೆ. ದರ್ಶನ್‌ ವಿಚಾರದಲ್ಲಿಯೂ ಅಷ್ಟೇ ಆರಂಭದಲ್ಲಿ ದರ್ಶನ್‌ ಸ್ಟೇಷನ್‌ ಮೆಟ್ಟಿಲು ಹತ್ತಿದ್ದಾಗ ಇದ್ದಿದ್ದೇ ಬೇರೆ. ಈಗ ಇರೋದೇ ಬೇರೆ. ಈಗ ಏನಿದ್ರೂ ಸೈಲೆಂಟ್‌ ಅನ್ನೋ ಉತ್ತರಗಳು ಕೇಳಿಬರ್ತಿವೆ.

ಇದನ್ನೂ ಓದಿ:ದರ್ಶನ್​​ಗೆ ಮತ್ತಷ್ಟು ಸಂಕಷ್ಟ.. ಪೊಲೀಸರಿಗೆ ಸಿಗ್ತಿದೆ ಬಲವಾದ ಸಾಕ್ಷಿಗಳು..!

ಕಮಿಷನರ್‌ ಕಂಡ್ರೆ ಸಪ್ಪೆ ಮುಖ
ದಕ್ಷ ಪೊಲೀಸರಾಗಿ ಗುರ್ತಿಸಿಕೊಂಡವ್ರದಲ್ಲಿ ಬೆಂಗಳೂರು ನಗರ ಕಮೀಷನರ್‌ ಬಿ.ದಯಾನಂದ ಮತ್ತು ಎಸಿಪಿ ಚೆಂದನ್‌ ಕುಮಾರ್‌ ಕೂಡ ಹೌದು. ಬಹುಶಃ ಇವರಿಬ್ಬರು ಗಟ್ಟಿಯಾಗಿ ನಿಲ್ಲದೇ ಇದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ ಯಾವಾಗ್ಲೂ ಮೋರಿಯಲ್ಲಿಯೇ ಮುಚ್ಚಿ ಹೋಗೋ ಸಾಧ್ಯತೆ ಇತ್ತು. ಅದ್ಕೆ ಕಮೀಷನರ್‌ ಮತ್ತು ಎಸಿಪಿ ಚಂದನ್‌ ಕುಮಾರ್‌ ಸೊಪ್ಪು ಹಾಕಿಲ್ಲ. ಮೊದಲು ಅಗತ್ಯ ದಾಖಲೆಗಳನ್ನು ಕಲೆ ಹಾಕಿ ಅನಂತರ ದರ್ಶನ್‌ ಅರೆಸ್ಟ್‌ ಮಾಡಿದ್ದಾರೆ. ಅನಂತರವೂ ಅಷ್ಟೇ ಇವರಿಬ್ಬರು ತುಂಬಾ ಶಿಸ್ತು ಬದ್ಧವಾಗಿ ತನಿಖೆ ಮಾಡ್ತಿದ್ದಾರೆ. ಕೇಸ್‌ನಲ್ಲಿ ಆರೋಪಿಗಳ ವಿರುದ್ಧ ಸಾಕ್ಷ್ಯಗಳ ಗುಡ್ಡೆಯನ್ನೇ ಸಂಗ್ರಹ ಮಾಡ್ತಿದ್ದಾರೆ. ಇವರಿಬ್ಬರನ್ನು ಕಂಡ್ರೆ ದರ್ಶನ್‌ ಸಪ್ಪೆ ಮುಖ ಮಾಡ್ತಿದ್ದಾರೆ ಅನ್ನೋದ್‌ ತಿಳಿದು ಬರ್ತಿದೆ.

ರಾಜಮರ್ಯಾದೆಗೆ ಬ್ರೇಕ್‌ ಹಾಕಿದ ಕಮೀಷನರ್‌!
ಮೊದಲು ದರ್ಶನ್‌ ಅರೆಸ್ಟ್‌ ಆಗಿ ಅಣ್ಣಪೊರ್ಣೇಶ್ವರಿ ನಗರ ಪೊಲೀಸ್‌ ಸ್ಟೇಷನ್‌ಗೆ ಕರ್ಕೊಂಡು ಬಂದಾಗ ಪೊಲೀಸರು ಕೂಡ ಸಾರ್‌ ಸಾರ್‌ ಅಂತಾ ದರ್ಶನ್‌ಗೆ ರಾಜಮರ್ಯಾದೆ ಕೊಟ್ಟು ಕರೆಯುತ್ತಿದ್ದರಂತೆ. ಎರಡ್ಮೂರು ದಿನಗಳ ಕಾಲ ಪೊಲೀಸರು ಸಾರ್‌ ಸಾರ್‌ ಅಂತಾ ಕರೆದಿದ್ದಾರೆ. ಬಟ್‌, ಈ ವಿಷ್ಯ ಗೊತ್ತಾಗಿ ಕಮೀಷನರ್‌ ಅದ್ಕೂ ಬ್ರೇಕ್‌ ಹಾಕಿದ್ದಾರಂತೆ. ದರ್ಶನ್‌ ಒಬ್ಬ ಆರೋಪಿಯಾಗಿದ್ದಾನೆ. ಕೊಲೆ ಆರೋಪದಲ್ಲಿ ಸ್ಟೇಷನ್‌ನಲ್ಲಿ ವಿಚಾರಣೆ ಎದುರಿಸ್ತಿದ್ದಾನೆ. ಹೀಗಿದ್ದಾಗ ಸಾರ್‌ ಸಾರ್‌ ಅಂತಾ ಕರೆಯೋದ್‌ ಏನಿದೆ ಅಂತಾ ಪೊಲೀಸರಿಗೆ ವಾರ್ನಿಂಗ್‌ ಮಾಡಿದ್ದಾರಂತೆ. ಅಷ್ಟರ ಮೇಲೆ ದರ್ಶನ್‌ಗೆ ಸ್ಟೇಷನ್‌ನಲ್ಲಿ ಸಿಕ್ತಿರೋ ರಾಜಮರ್ಯಾದೆಗೆ ಬ್ರೇಕ್‌ ಬಿದ್ದಿದೆ.

ಇದನ್ನೂ ಓದಿ:ಚಿಕ್ಕಣ್ಣ, ಯಶಸ್ ಸೂರ್ಯ ಮಾತ್ರವಲ್ಲ.. ದರ್ಶನ್ ಪಾರ್ಟಿಯಲ್ಲಿ ಸ್ಟಾರ್ ನಿರ್ಮಾಪಕ..?

ಠಾಣೆಯಲ್ಲಿ ತಗ್ಗಿ ಬಗ್ಗಿ ನಡೆಯುತ್ತಿದ್ದಾರೆ ದಾಸ
ದರ್ಶನ್‌ ಸ್ಟೇಷನ್‌ಗೆ ಹೋಗಿದ್ದ ಎರಡು ದಿನಗಳ ಕಾಲ ತುಂಬಾ ಆತ್ಮವಿಶ್ವಾಸದಲ್ಲಿ ಎದೆ ಉಬ್ಬಿಸ್ಕೊಂಡ್‌ ನಡೆದಾಡುತ್ತಿದ್ರು. ಬಹುಶಃ ಪ್ರಭಾವಿಗಳ ಒತ್ತಡ ಶುರುವಾಗುತ್ತೆ. ಒಂದೆರಡು ದಿನದಲ್ಲಿ ತಾನ್‌ ವಾಪಸ್‌ ಹೋಗ್ತೀನಿ ಅನ್ನೋ ಆತ್ಮವಿಶ್ವಾಸ ಅವ್ರಲ್ಲಿದ್ದಂತೆ ಕಾಣಿಸ್ತಿತ್ತು. ಅವ್ರು ಅನ್ಕೊಂಡಿದ್ದೇ ಒಂದು, ಆಗಿದ್ದೇ ಇನ್ನೊಂದು. ಹೌದು, ಎರಡು ದಿನ ಎದೆ ಉಬ್ಬಿಸಿ ನಡೀತಿದ್ದ ದರ್ಶನ್‌ ಈಗ ತಗ್ಗಿಬಗ್ಗಿ ನಡೀತಾ ಇದ್ದಾರೆ. ಯಾವಾಗ ನೋಡಿದ್ರೂ ಕೈಕಟ್ಟಿಕೊಂಡ್‌, ತಲೆ ತಗ್ಗಿಸ್ಕೊಂಡ್‌ ಇರ್ತಾರಂತೆ.

ಇದನ್ನೂ ಓದಿ:ಪಟ್ಟಣಗೆರೆ ಶೆಡ್​ನಲ್ಲಿ ರಕ್ತ ಚರಿತ್ರೆಗಳ ಕತೆ..? ಸಿಕ್ಕ ರಕ್ತದ ಕಲೆಗಳು ಹೇಳ್ತಿವೆಯಂತೆ ಪಾಪಿಗಳ ಲೋಕದ ಕತೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಮಿಷನರ್‌ ಕಂಡ್ರೆ ಸಪ್ಪೆ ಮುಖ.. ದರ್ಶನ್‌ ನಡೆ ನುಡಿಯಲ್ಲಿ ಭಾರೀ ಬದಲಾವಣೆ.. ಕೊನೆಗೂ ಬಂತಾ ಬುದ್ಧಿ..?

https://newsfirstlive.com/wp-content/uploads/2024/06/DARSHAN-33-1.jpg

Load More