newsfirstkannada.com

ಪೂರ್ತಿ ಊಟ ಮಾಡಲ್ಲ.. ಸೆಲ್​ನಲ್ಲಿ ಏಕಾಂಗಿ.. 1 ಸೆಲ್​.. 1 ಚಾಪೆ.. 1 ಚೇರ್.. ದರ್ಶನ್ ಸ್ಟೇಷನ್ ಡೈರಿ..!

Share :

Published June 18, 2024 at 1:42pm

Update June 18, 2024 at 1:43pm

  ಸ್ಟೇಷನ್‌ನಲ್ಲಿ ದರ್ಶನ್‌ ಹೇಗಿದ್ದಾರೆ? ಏನ್‌ ಮಾಡ್ತಿದ್ದಾರೆ?

  ಪ್ರತ್ಯೇಕ ಸೆಲ್‌ನಲ್ಲಿ ವಾಸ, ಇತರೇ ಆರೋಪಿಗಳ ಭೇಟಿ ಇಲ್ಲ!

  ಪ್ರತ್ಯೇಕ ಸೆಲ್‌ನಲ್ಲಿ ವಾಸ.. ಬೇರೆ ಆರೋಪಿಗಳ ಟಚ್‌ ಇಲ್ಲ!

ಜಾಸ್ತಿ ಪ್ರಶ್ನೆ ಕೇಳಿದ್ದಕ್ಕೆ ಪೊಲೀಸರ ಕಾಲಿಗೇ ಬಿದ್ದ ದರ್ಶನ್​!? ಒಂದು ಸೆಲ್​.. ಒಂದು ಚಾಪೆ..ಒಂದು ಚೇರ್.. ಈಗ ಲೈಫ್​ ಇಷ್ಟೇ! ಅರೆಸ್ಟ್​ ಆದ ದಿನದಿಂದ ಇಲ್ಲಿತನಕ ಸರಿಯಾಗಿ ತಿಂದಿಲ್ಲವಂತೆ ನಟ ದರ್ಶನ್.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್, ಪೊಲಿಸ್ ಸ್ಟೇಷನ್​​ ಸೆಲ್​ನಲ್ಲಿ ಹೇಗಿದ್ದಾರೆ. ಇಷ್ಟು ದಿನಗಳ ಕಾಲ ದರ್ಶನ್‌ ಪೊಲೀಸ್‌ ಠಾಣೆಯಲ್ಲಿ ಹೇಗಿದ್ದಾರೆ? ಸರಿಯಾಗಿ ಊಟ ತಿಂಡಿ ಮಾಡ್ತಿದ್ದಾರೋ ಇಲ್ವೋ? ಕೊಲೆ ಆರೋಪಕ್ಕೆ ಪಶ್ಚಾತಾಪ ಪಡ್ತಿದ್ದಾರೋ ಇಲ್ವೋ? ತನಿಖಾಧಿಕಾರಿಗಳು ಕೇಳೋ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡ್ತಿದ್ದಾರೋ ಇಲ್ವೋ? ಅನ್ನೋ ಕುತೂಹಲ ಸಾಮಾನ್ಯ ಜನರಲ್ಲಿ ಇದ್ದೇ ಇರುತ್ತೆ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ.. ಗಂಭೀರ್ ಕೋಚ್​ ಆಗ್ತಿದ್ದಂತೆಯೇ ಮೂವರ ಕಿಕ್​ಔಟ್ ಪಕ್ಕಾ..!

ದರ್ಶನ್‌ ಅವರನ್ನು ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಪ್ರತ್ಯೇಕ ಸೆನ್‌ನಲ್ಲಿ ಇಡಲಾಗಿದೆ. ದರ್ಶನ್‌ಗೆ ಪ್ರತ್ಯೇಕ ಸೆಲ್‌. ಈ ಸೆಲ್‌ಗೆ ಬೇರೆ ಆರೋಪಿಗಳು ಬರಲು ಅವಕಾಶವಿಲ್ಲ. ಹಾಗೊಂದ್‌ ವೇಳೆ ಭೇಟಿಯಾದ್ರೆ ದರ್ಶನ್‌ ಏನಾದ್ರೂ ಕೋಪದಲ್ಲಿ ಬೆದರಿಸೋ ಸಾಧ್ಯತೆ ಇರುತ್ತೆ. ಹೀಗಾಗಿ ಪ್ರತ್ಯೇಕವಾಗಿ ಇಡಲಾಗಿದೆ. ಸ್ವತಃ ಪವಿತ್ರಾ ಗೌಡ ಕೂಡ ದರ್ಶನ್‌ ಮಾತಾಡಿಸಲು ಮುಂದಾಗುತ್ತಿಲ್ಲ ಅನ್ನೋದ್‌ ಮೂಲಗಳಿಂದ ತಿಳಿದು ಬರ್ತಿದೆ.

ಅನ್ನ ಸಾಂಬಾರ್‌.. ಪೂರ್ತಿ ಊಟ ಮಾಡ್ತಿಲ್ಲ!
ಆರಂಭದಲ್ಲಿ ದರ್ಶನ್‌ ಎರಡು ದಿನ ತನಗೆ ಊಟ ಬೇಡ ಜ್ಯೂಸ್‌ ಕೊಡಿ ಅಂತಾ ತರಿಸ್ಕೊಂಡ್‌ ಕುಡೀತಾ ಇದ್ರು. ಒಮ್ಮೆ ಇಡ್ಲಿ ಬೇಕು ಅಂತಾ ಹೇಳಿದ್ರು, ಪೊಲೀಸ್ರು ತರಿಸಿಕೊಟ್ಟಿದ್ರು. ಆನಂತರ ಮಧ್ಯಾಹ್ನ ಮತ್ತು ರಾತ್ರಿ ಊಟದ ವೇಳೆ ಅನ್ನ ಸಾಂಬಾರ್‌ ನೀಡಲಾಗ್ತಿದೆ. ಬಟ್‌, ದರ್ಶನ್‌ ಜೂನ್‌ 11 ರಂದು ಸ್ಟೇಷನ್‌ಗೆ ಹೋದಾಗಿಂದ ಇಲ್ಲಿಯವರೆಗೂ ಒಂದೇ ಒಂದು ಟೈಮ್‌ನಲ್ಲಿಯೂ ಪೂರ್ತಿ ಊಟ ಮಾಡಿದ್ದು ಇಲ್ಲವೇ ಇಲ್ಲವಂತೆ.

ಇದನ್ನೂ ಓದಿ:ಚಿಕ್ಕಣ್ಣ, ಯಶಸ್ ಸೂರ್ಯ ಮಾತ್ರವಲ್ಲ.. ದರ್ಶನ್ ಪಾರ್ಟಿಯಲ್ಲಿ ಸ್ಟಾರ್ ನಿರ್ಮಾಪಕ..?

1 ಸೆಲ್​.. 1 ಚಾಪೆ.. 1 ಚೇರ್..ಈಗ ಲೈಫ್​ ಇಷ್ಟೇ!
ಆ ಸೆಲ್‌ನಲ್ಲಿ ದರ್ಶನ್‌ಗೆ ಏನೇನ್‌ ಇವೆ ಅಂದ್ರೆ ಕೇಳಿಬರ್ತಿರೋ ಉತ್ತರ 1 ಚಾಪೆ, ಒಂದು ಚೇರ್‌ ಅನ್ನೋ ಆನ್ಸರ್‌ ಬರ್ತಿದೆ. ಹೊರಗಡೆ ಸ್ಥಳ ಮಹಜರು, ನ್ಯಾಯಾಧೀಶರ ಮುಂದೆ ಹಾಜರು ಪಡ್ಸೋದು, ವಿಚಾರಣೆ… ಟೈಮ್‌ ಅನ್ನು ಹೊರತು ಪಡ್ಸಿ ದರ್ಶನ್‌ ದಿನ ನಿಡೀ ಇದೇ ರೂಮ್‌ನಲ್ಲಿ ಇರ್ತಾರೆ. ಸಂದರ್ಭದಲ್ಲಿ ಚೇರ್‌ ಮೇಲೆ ಕುಳಿತುಕೊಳ್ಳುವುದಕ್ಕಿಂತ ಚಾಪೆ ಮೇಲೆ ಜಾಸ್ತಿ ಕುಳಿತು ಜಾಸ್ತಿ ಟೈಮ್‌ ಕಳಿತಿರೋದ್‌ ಕಾಣಿಸ್ತಿದೆ. ಚಾಪೆ ಮೇಲೆ ಕುಳಿತಾಗ ದರ್ಶನ್‌ ಮೌನಕ್ಕೆ ಶರಣಾಗಿರುತ್ತಾರೆ.

ತಡರಾತ್ರಿ ನಿದ್ರೆ, ಬೇಗ ಏಳ್ತಾರೆ..!
ಆರಂಭದಲ್ಲಿ ಒಂದೆರಡು ದಿನ ದರ್ಶನ್‌ ಸರಿಯಾಗಿ ನಿದ್ರೆ ಮಾಡ್ತಿರಲಿಲ್ಲ. ಭಾರೀ ತಡ ರಾತ್ರಿ ನಿದ್ರೆಗೆ ಜಾರುತ್ತಿದ್ರು. ಬಟ್‌ ಬರ್ತಾ ಬರ್ತಾರಾ ಬೇಗ ನಿದ್ರೆಗೆ ಜಾರ್ತಿದ್ದಾರೆ. ಬೆಳಗ್ಗೆ ಬೇಗ ಎದ್ದೇಳುತ್ತಿದ್ದಾರೆ. ಬೆಳಗ್ಗೆ 7 ಗಂಟೆಯ ನಂತರ ವಿಚಾರಣೆ ಅನ್ನೋದು ಶುರುವಾಗುತ್ತೆ.

ಇದನ್ನೂ ಓದಿ:ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?

ಸಿಗರೇಟ್‌ಗೆ ಬೇಡಿಕೆ, ಆರೋಗ್ಯದ ಬಗ್ಗೆ ಚರ್ಚೆ!
ಅದೆಷ್ಟೋ ದೊಡ್ಡ ವ್ಯಕ್ತಿಯಾಗಿದ್ರೂ ಸ್ಟೇಷನ್‌ನಲ್ಲಿ ಸಿಗರೇಟ್‌ ಸಿಗೋದಿಲ್ಲ. ಹೀಗಾಗಿ ಚೈನ್‌ ಸ್ಮೋಕ್‌ ಮಾಡೋರು, ಸಿಗರೇಟ್‌ ಹ್ಯಾಬಿಟ್‌ ಇದ್ದವ್ರು ಒಂದ್‌ ಕ್ಷಣ ಸ್ಟೇಷನ್‌ ಮೆಟ್ಟಿಲು ಏರ್ತಾ ಇದ್ದಂತೆ ಕಂಗಾಲಾಗೋದು ಪಕ್ಕಾ. ಪೊಲೀಸರ ಬಳಿ ಸಿಗರೇಟ್‌ ಬೇಕು ಅಂತಾ ಪರಿಪರಿಯಾಗಿ ಕೇಳ್ಕೊಂಡಿದ್ದಾರೆ. ಆದ್ರೆ ಪೊಲೀಸರು ಸಿಗರೇಟ್‌ ವ್ಯವಸ್ಥೆ ಮಾಡಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೂರ್ತಿ ಊಟ ಮಾಡಲ್ಲ.. ಸೆಲ್​ನಲ್ಲಿ ಏಕಾಂಗಿ.. 1 ಸೆಲ್​.. 1 ಚಾಪೆ.. 1 ಚೇರ್.. ದರ್ಶನ್ ಸ್ಟೇಷನ್ ಡೈರಿ..!

https://newsfirstlive.com/wp-content/uploads/2024/06/DARSHAN-34.jpg

Load More