ದರ್ಶನ್ ಆಪ್ತನ ಶೆಡ್‌ನಲ್ಲಿ ಕೊಲೆ ಮಾಡಿದ ಸುಳಿವು.. ಆಟೋದಲ್ಲಿ ಶವ ಶಿಫ್ಟ್‌? ಅಸಲಿಗೆ ಆಗಿದ್ದೇನು?

author-image
admin
Updated On
ದರ್ಶನ್ ಆಪ್ತನ ಶೆಡ್‌ನಲ್ಲಿ ಕೊಲೆ ಮಾಡಿದ ಸುಳಿವು.. ಆಟೋದಲ್ಲಿ ಶವ ಶಿಫ್ಟ್‌? ಅಸಲಿಗೆ ಆಗಿದ್ದೇನು?
Advertisment
  • ರಾಜರಾಜೇಶ್ವರಿ ನಗರದ ಶೆಡ್‌ನಲ್ಲಿ ಕ್ರೂರವಾಗಿ ಕೊಲೆ ಮಾಡಿದ ಆರೋಪ
  • ಜೂನ್ 8ರಂದು ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿಯನ್ನು ವಶಕ್ಕೆ ಪಡೆದ ಪೊಲೀಸ್!
  • ಶೆಡ್‌ನಲ್ಲಿ ಕೊಲೆ ನಂತರ ಡೆಡ್‌ ಬಾಡಿ ಸಾಗಿಸಿದ ಆಟೋ ಯಾರದ್ದು ಗೊತ್ತಾ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಆಪ್ತರ ಮೇಲೂ ಗಂಭೀರವಾದ ಆರೋಪಗಳು ಕೇಳಿ ಬಂದಿದೆ. ಪ್ರಮುಖವಾಗಿ ಕೊಲೆಯಾದ ರೇಣುಕಾಸ್ವಾಮಿ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಅದಾದ ನಂತರ ರಾಜರಾಜೇಶ್ವರಿ ನಗರದ ಶೆಡ್‌ ಒಂದರಲ್ಲಿ ಕ್ರೂರವಾಗಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ರೇಣುಕಾಸ್ವಾಮಿ ಅವರನ್ನು ಆರ್.ಆರ್ ನಗರದಲ್ಲಿ ವಿನಯ್ ಶೆಡ್‌ನಲ್ಲಿ ಕೊಲೆ ಮಾಡಿರುವ ಅನುಮಾನವಿದೆ. ಕೊಲೆ ನಂತರ ಆಟೋ ಹಾಗೂ ಒಂದು ಕಾರಿನಲ್ಲಿ ಮೃತದೇಹವನ್ನು ರವಾನೆೆ ಮಾಡಲಾಗಿದೆ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ಶಿಫ್ಟ್ ಮಾಡಲು ಮೆಗಾ ಪ್ಲಾನ್ ಮಾಡಲಾಗಿತ್ತು ಎನ್ನಲಾಗಿದೆ.

publive-image

ರೇಣುಕಾಸ್ವಾಮಿ ಅವರ ಮೃತದೇಹವನ್ನು ಶಿಫ್ಟ್ ಮಾಡಲು ವಿನಯ್ ಶೆಡ್‌ನಲ್ಲಿದ್ದ ಆಟೋ ಹಾಗೂ ಸ್ಕಾರ್ಪಿಯೋ ಕಾರನ್ನು ಬಳಸಿಕೊಳ್ಳಲಾಗಿದೆ. ಈಗಾಗಲೇ ಪೊಲೀಸರು ಶವ ರವಾನೆ ಮಾಡಿದ ಆಟೋವನ್ನು ವಶಕ್ಕೆ ಪಡೆದಿದ್ದಾರೆ. ಬಡ್ಡಿ ಕಟ್ಟೋಕೆ ಆಗದೆ ವಿನಯ್ ವಶಕ್ಕೆ ಪಡೆದುಕೊಂಡಿದ್ದ ಆಟೋ ಇದಾಗಿದೆ.

ಇದನ್ನೂ ಓದಿ: ಮರ್ಮಾಂಗಕ್ಕೆ ಹೊಡೆತ, ಮೂಗು ಓಪನ್, ಪಕ್ಕೆಲುಬು ಕಟ್‌; ಅತ್ಯಂತ ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ! 

ಸದ್ಯ ಆರ್‌ಆರ್‌ ನಗರದ ಶೇಡ್ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಎಸಿಪಿ ಭರತ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನು ಮಾಡಿದ್ದಾರೆ. ಕಳೆದ ಜೂನ್ 8ನೇ ತಾರೀಖಿನಂದು ಇಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:ದರ್ಶನ್​ ಹಲ್ಲೆ ಮಾಡಿದ ಯುವಕನ ಶವ ಮೋರಿಯಲ್ಲಿ ಸಿಕ್ತು.. ಸಿಸಿಟಿವಿ ದೃಶ್ಯದಲ್ಲಿ ಏನಿತ್ತು? 

ದರ್ಶನ್ ಹೆಸರು ಹೊರ ಬಂದಿದ್ದು ಹೇಗೆ? 

ನಟ ದರ್ಶನ್ ಅವರ ಆಪ್ತ ವಿನಯ್ ಎಂಬಾತನ ಶೆಡ್‌ನಲ್ಲೇ ಕೊಲೆ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಕೊಲೆಯಾದ ಮೇಲೆ ದರ್ಶನ್ ಅವರ ಹೆಸರು ಆಚೆ ಬರಬಾರದೆಂದು ಪ್ಲ್ಯಾನ್ ಮಾಡಿದ್ರಾ ಅನ್ನೋ ಅನುಮಾನೂ ಇದೆ. ದರ್ಶನ್ ಜೊತೆಗಿದ್ದವರು ತಾವಾಗೇ ಶರಣಾದ್ರೆ ದರ್ಶನ್ ಹೆಸರು ಆಚೆ ಬರಲ್ಲ ಅಂದು ಕೊಂಡಿದ್ದಾರೆ. ಆದರೆ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment