Advertisment

‘ದರ್ಶನ್​​ಗೆ ಯಾವುದೇ ತೊಂದರೆ ಆಗಲ್ಲ, ಯಾಕೆಂದರೆ..’ ಪ್ರಕರಣದ ಬಗ್ಗೆ ವಕೀಲರು ಹೇಳಿದ್ದೇನು?

author-image
Ganesh
Updated On
‘ದರ್ಶನ್​​ಗೆ ಯಾವುದೇ ತೊಂದರೆ ಆಗಲ್ಲ, ಯಾಕೆಂದರೆ..’ ಪ್ರಕರಣದ ಬಗ್ಗೆ ವಕೀಲರು ಹೇಳಿದ್ದೇನು?
Advertisment
  • ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ
  • ಕಾನೂನು ಹೋರಾಟಕ್ಕೆ ಸಜ್ಜಾದ ದರ್ಶನ್ ಪರ ವಕೀಲರು
  • ನ್ಯೂಸ್​ಫಸ್ಟ್​ಗೆ ವಕೀಲ ನಾರಾಯಣಸ್ವಾಮಿ ನೀಡಿದ ಮಾಹಿತಿ ಏನು?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕಿಡ್ನ್ಯಾಪ್ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿದ್ದಾರೆ. ಕಾಮಾಕ್ಷಿಪಾಳ್ಯ ಸ್ಟೇಷನ್‌ನಲ್ಲಿ ದರ್ಶನ್ ವಿರುದ್ಧ ಐಪಿಸಿ ಸೆಕ್ಷನ್ ಅಪಹರಣ, ಕೊಲೆ ಹಾಗೂ ಸಾಕ್ಷ್ಯನಾಶ ಕೇಸ್ ದಾಖಲಾಗಿದೆ.

Advertisment

ಸದ್ಯ ಬಂಧನಕ್ಕೆ ಒಳಗಾಗಿರುವ ದರ್ಶನ್ ಅವರನ್ನು ವಕೀಲ ನಾರಾಯಣಸ್ವಾಮಿ ಭೇಟಿಯಾಗಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ದರ್ಶನ್ ಜೊತೆ ವಕೀಲರು ಚರ್ಚಿಸಿದ್ದಾರೆ. ದರ್ಶನ್ ಭೇಟಿ ಬಳಿಕ ನ್ಯೂಸ್​ಫಸ್ಟ್ ಜೊತೆ ಮಾತನಾಡಿರುವ ದರ್ಶನ್ ಪರ ವಕೀಲ ನಾರಾಯಣಸ್ವಾಮಿ.. ಈಗಷ್ಟೇ ತನಿಖೆ ಆರಂಭವಾಗಿದೆ. ಅವರನ್ನು ಇನ್ನೂ ಅರೆಸ್ಟ್ ಕೂಡ ಮಾಡಿಲ್ಲ.

ಇದನ್ನೂ ಓದಿ:ಕೊಲೆ ಆರೋಪ ಪ್ರಕರಣ.. ದರ್ಶನ್​​ಗೆ ಈ ಮೂರು ಕೇಸ್​ಗಳಲ್ಲಿ ಕಂಟಕ ಪಕ್ಕಾ..?

publive-image

ಕೇವಲ ತನಿಖೆಗೆ ಕರೆದಿದ್ದಾರೆ ಅಷ್ಟೇ. ಅವರು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರಿಗೆ ಗುಮಾನಿ ಬಂದಾಗ ಎಲ್ಲರನ್ನೂ ವಿಚಾರಣೆಗೆ ಕರೆಯುತ್ತಾರೆ. ಅದೇ ರೀತಿ ದರ್ಶನ್ ಅವರನ್ನು ಪೊಲೀಸರು ತನಿಖೆಗೆ ಕರೆದಿದ್ದಾರೆ. ಅವರಿಗೆ ಸೆಲೆಬ್ರಿಟಿ ಸ್ಟೇಟಸ್ ಇದೆ ಅನ್ನೋದು ಬಿಟ್ಟರೆ ಅವರು ಕೂಡ ಸಾಮಾನ್ಯ ವ್ಯಕ್ತಿ.

Advertisment

ಪೊಲೀಸರು ಎಲ್ಲಾ ಪ್ರಕರಣದಲ್ಲೂ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು ಅನ್ನೋದು ಇಲ್ಲ. ಈ ಪ್ರಕರಣದಲ್ಲಿ ಏನಾಗಿದೆ ಅನ್ನೋದು ಸದ್ಯಕ್ಕೆ ಮಾಹಿತಿ ಇಲ್ಲ. ಪೊಲೀಸ್ ಅಧಿಕಾರಿಗಳು ನಮಗೆ ಯಾವುದೇ ಪೇಪರ್ ವರ್ಕ್​ ನೀಡಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ, ಮುಂದೆ ಏನಾಗುತ್ತೆ ನೋಡ್ತೀವಿ. ಖಂಡಿತವಾಗಿಯೂ ದರ್ಶನ್​ ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಎಷ್ಟೇ ತೊಂದರೆಯಾದರೂ ಅವರು ಫೈಟ್ ಮಾಡಿ ಹೊರ ಬರುತ್ತಾರೆ. ಯಾರಿಂದ ಏನೇ ತೊಂದರೆಯಾದರೂ ಖಂಡಿತವಾಗಿಯೂ ನಾವೆಲ್ಲ ಅವರ ಜೊತೆ ಇದ್ದೇ ಇರುತ್ತೀವಿ. ಫ್ಯಾನ್ಸ್ ಇದ್ದಾರೆ, ನಾವು ಇದ್ದೀವಿ, ಕಾನೂನು ಇದೆ. ಬಹಳ ಮುಖ್ಯವಾಗಿ ಕಾನೂನಿನ ಮೇಲೆ ನಂಬಿಕೆ ಇದೆ. ದರ್ಶನ್​ಗೆ ಏನೂ ಆಗೋದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ದರ್ಶನ್​ ಅಭಿಮಾನಿ ಆಗಿದ್ದ ರೇಣುಕಾಸ್ವಾಮಿ -ವಿಜಯಲಕ್ಷ್ಮೀ ಸಂಸಾರ ಚೆನ್ನಾಗಿರಲಿ ಅಂತಾ ಬಯಸಿದ್ನಂತೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment