ನಟ ದರ್ಶನ್ ಹೊಸ ಸಿಗ್ನಲ್‌.. ಅಭಿಮಾನಿಗಳು ಫುಲ್ ಖುಷ್; ಜೈಲಿಂದ ದಾಸ ಕೊಟ್ಟ ಸಂದೇಶ ಏನು?

author-image
admin
Updated On
ದರ್ಶನ್‌ ಜಾಮೀನಿಗೆ ಕುತ್ತು? ಮತ್ತೆ ಕಾನೂನು ಸಮರಕ್ಕೆ ಸಜ್ಜಾದ SPP ಪ್ರಸನ್ನ ಕುಮಾರ್‌! ಮುಂದೇನು?
Advertisment
  • ಜಾಮೀನು ಅರ್ಜಿ ವಿಚಾರಣೆ ನಡೆಯುವಾಗಲೇ ಪ್ರೀತಿಯ ಸಿಗ್ನಲ್‌!
  • ಬಾಸ್, ಬಾಸ್ ಡಿ ಬಾಸ್ ಅಂತಾ ಘೋಷಣೆ ಕೂಗಿದ ಅಭಿಮಾನಿಗಳು
  • ಬಹಳ ದಿನಗಳ ಬಳಿಕ ಅಭಿಮಾನಿಗಳ ಘೋಷಣೆ ಕೇಳಿ ದರ್ಶನ್ ಖುಷ್!

ಬಳ್ಳಾರಿ: ರೇಣುಕಾಸ್ವಾಮಿ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅವರು ಬಳ್ಳಾರಿ ಜೈಲಿನಿಂದಲೇ ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ ಸಂದೇಶ ಕೊಟ್ಟಿದ್ದಾರೆ. ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಅಂತಾನೇ ಕರೆಯುತ್ತಾರೆ. ಇಂದು ಬಳ್ಳಾರಿ ಜೈಲಿಗೆ ಸ್ನೇಹಿತರು ಭೇಟಿ ಕೊಡಲು ಬಂದಾಗ ಸೆಲೆಬ್ರಿಟಿಗಳನ್ನ ನೋಡಿ ಸಿಗ್ನಲ್ ಮಾಡಿದ್ದಾರೆ.

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ಮುಂದುವರಿದಿದೆ. ದರ್ಶನ್ ಪರ ವಕೀಲರು ಹೇಗಾದ್ರು ಮಾಡಿ ಜಾಮೀನು ಕೊಡಿಸಲು ನಿರಂತರ ಹೋರಾಟ ಮಾಡುತ್ತಿದ್ದಾರೆ. ದರ್ಶನ್ ಪರ ವಕೀಲರ ವಾದಕ್ಕೆ SPP ಪ್ರಸನ್ನ ಕುಮಾರ್ ಅವರು ಖಡಕ್ ಆದ ಪ್ರತಿವಾದ ಮಂಡಿಸುತ್ತಿದ್ದಾರೆ. ಈ ವಾದ, ಪ್ರತಿವಾದದಲ್ಲಿ ಜಾಮೀನು ಸಿಗುತ್ತಾ ಅನ್ನೋ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಜಾಮೀನು ಯಾಕೆ ಕೊಡಬೇಕು? ದರ್ಶನ್ ಪರ ವಕೀಲರಿಗೆ SPP ಪ್ರಸನ್ನ ಕುಮಾರ್ 5 ಕೌಂಟರ್‌; ಏನದು? 

ಜಾಮೀನು ಅರ್ಜಿಯ ವಿಚಾರಣೆ ಮಧ್ಯೆಯೇ ಇಂದು ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರನ್ನು ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಿರ್ಮಾಪಕರು, ಆತ್ಮೀಯರಾದ ಶೈಲಜಾ ನಾಗ್ ಹಾಗೂ ಸ್ನೇಹಿತರು ಭೇಟಿ ಮಾಡಲು ಬಂದಿದ್ದರು.

publive-image

ಜೈಲು ಸಿಬ್ಬಂದಿ ಭದ್ರತೆಯಲ್ಲಿ ಸೆಲ್‌ನಿಂದ ದರ್ಶನ್ ಅವರು ಹೊರಗೆ ಬಂದರು. ಎಂದಿನಂತೆ ಬ್ಯಾಗ್ ಹಿಡಿದು ಸೆಲ್‌ನಿಂದ ಬಂದ ದರ್ಶನ್ ಅವರು ಜೈಲಿನ ಹೊರಗೆ ನಿಂತಿದ್ದ ಅಭಿಮಾನಿಗಳನ್ನು ನೋಡಿದರು. ಅಭಿಮಾನಿಗಳ ಘೋಷಣೆಯನ್ನು ಗಮನಿಸಿದ ದರ್ಶನ್ ಅವರು ಕೈ ಸನ್ನೆಯಲ್ಲಿ ವಿಶೇಷ ಸಂದೇಶವನ್ನು ಕೊಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್ ಶೂಗೆ ಹತ್ತಿದ್ದ ಮಣ್ಣು ಪಂಚನಾಮೆ ವೇಳೆ ಸಂಗ್ರಹಿಸಿದ್ದಾ? ಸಿ.ವಿ.ನಾಗೇಶ್ ವಾದಕ್ಕೆ ಪ್ರಸನ್ನ ಕುಮಾರ್​ ಪ್ರತಿವಾದ ಏನಿತ್ತು? 

ಹೈ ಸೆಕ್ಯೂರಿಟಿ ಸೆಲ್‌ನಿಂದ ಬರುವ ದರ್ಶನ್ ನೋಡಲು ಜೈಲಿನ ಗೇಟ್ ಮುಂಭಾಗದಲ್ಲಿ ಅಭಿಮಾನಿಗಳು ಕಾಯುತ್ತಾ ನಿಂತಿದ್ದರು. ದರ್ಶನ್ ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಬಾಸ್, ಬಾಸ್ ಡಿ ಬಾಸ್ ಅಂತಾ ಘೋಷಣೆ ಕೂಗಿದರು. ಅಭಿಮಾನಿಗಳ ಘೋಷಣೆ ಕೇಳಿ ಖುಷ್ ಆದ ದರ್ಶನ್ ಅವರು ಅಭಿಮಾನಿಗಳ ಘೋಷಣೆಗೆ ಕೈ‌ಸನ್ನೆ ಮಾಡಿ ಡೋಂಟ್ ವರಿ ನಾನು ಚೆನ್ನಾಗಿದ್ದೇನೆ ಅನ್ನೋ ಸಂದೇಶ ನೀಡಿದ್ದಾರೆ.

publive-image

ಎದೆ ಮುಟ್ಟಿ ಅಭಿಮಾನಿಗಳತ್ತ ಕೈ ತೋರಿದ ದರ್ಶನ್ ಅವರು ನನ್ನ ಹೃದಯಲ್ಲಿ ನೀವು ಇದ್ದೀರಾ ಅಂತಾ ಕೈ ಸನ್ನೆ ಮಾಡಿ ತಿಳಿಸಿದ್ದಾರೆ. ಬಳಿಕ ಸಂದರ್ಶಕರ ಕೊಠಡಿಗೆ ತೆರಳಿದ ದರ್ಶನ್ ಅವರು ಜೈಲಿಗೆ ಆಗಮಿಸಿದ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಶೈಲಜಾ ನಾಗ್ ಇತರರನ್ನು ಭೇಟಿ ಮಾಡಿದರು.

publive-image

ಸಂಗೀತ ನಿರ್ದೇಶಖ ಹರಿಕೃಷ್ಣ, ಶೈಲಜಾನಾಗ್ ಅವರು ಎರಡು ಬ್ಯಾಗ್‌ನಲ್ಲಿ ದರ್ಶನ್‌ ಅವರಿಗೆ ಇಷ್ಟವಾದ ಡ್ರೈ ಫ್ರೂಟ್ಸ್, ಬೇಕರಿ ತಿನಿಸುಗಳನ್ನು ತಂದಿದ್ದರು. ತಿಂಡಿ ಜೊತೆಗೆ ಬಟ್ಟೆ ತಂದಿರುವ ಹರಿಕೃಷ್ಣ ಅವರ ಬ್ಯಾಗ್‌ಗಳನ್ನು ಜೈಲು ಸಿಬ್ಬಂದಿ ಚೆಕ್ ಮಾಡಿ ಒಳಗೆ ಬಿಟ್ಟಿದ್ದಾರೆ. ಹರಿಕೃಷ್ಣ , ಶೈಲಜಾ ನಾಗ್ ಅವರ ಜೊತೆಗೆ ದರ್ಶನ್ ಸ್ನೇಹಿತರಾದ ಅರವಿಂದ್, ಆಕಾಶ್ ಹಾಗೂ ಪ್ರಭು ಕೂಡ ಭೇಟಿ ಮಾಡಿ ದರ್ಶನ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment