/newsfirstlive-kannada/media/post_attachments/wp-content/uploads/2024/06/Renukaswamy-Mother.jpg)
ಚಿತ್ರದುರ್ಗ: ಬೆಂಗಳೂರಲ್ಲಿ ರೇಣುಕಾಸ್ವಾಮಿ ಕೊಲೆಯಾಗಿದ್ದು, ನಟ ದರ್ಶನ್ ಮತ್ತವರ ಗ್ಯಾಂಗ್ ವಿರುದ್ಧ ತನಿಖೆ ಮುಂದುವರಿದಿದೆ. ಅತ್ತ ಮೃತ ರೇಣುಕಾಸ್ವಾಮಿ ಮೂರನೇ ದಿನದ ಕಾರ್ಯವನ್ನು ಇಂದು ಅವರ ಕುಟುಂಬಸ್ಥರು ನೆರವೇರಿಸಿದ್ದಾರೆ. ರೇಣುಕಾಸ್ವಾಮಿ ಅವರ ತಾಯಿ ಸೇರಿದಂತೆ ಕುಟುಂಬ ಸದಸ್ಯರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ದರ್ಶನ್, ಪವಿತ್ರಾ ಜೈಲು ಸೇರಿದ ಬೆನ್ನಲ್ಲೇ ಮತ್ತೆ ಬಿಗ್ ಟ್ವಿಸ್ಟ್ ಕೊಟ್ಟ ಪತ್ನಿ ವಿಜಯಲಕ್ಷ್ಮಿ
ಜೋಗಿಮಟ್ಟಿ ರಸ್ತೆಯಲ್ಲಿರುವ ಸ್ಮಶಾನದಲ್ಲಿ ರೇಣುಕಾಸ್ವಾಮಿ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಅಂತ್ಯಕ್ರಿಯೆಯ ಮೂರು ದಿನದ ಬಳಿಕ ತಾಯಿ, ಸಹೋದರ, ಸಹೋದರಿಯರು ರೇಣುಕಾಸ್ವಾಮಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಅವರ ಸಮಾಧಿ ಬಳಿ ಪೂಜೆ ಸಲ್ಲಿಸುವಾಗ ತಾಯಿ ರತ್ನಪ್ರಭಾ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಬದುಕಿ ಬಾ ಮಗನೇ, ಅಮ್ಮಾ ಅನ್ನೋ.. ಎದ್ದೇಳೋ ಸ್ವಾಮಿ ಅಂತ ರೇಣುಕಾಸ್ವಾಮಿ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಕಿಡ್ನಾಪ್ಗೂ ಮುನ್ನ ದರ್ಶನ್ ಆ್ಯಕ್ಸಿಡೆಂಟ್ ಮಾಡಿಸಿದ್ರಾ? ರೇಣುಕಾಸ್ವಾಮಿ ಸ್ಕೂಟರ್ ಡ್ಯಾಮೇಜ್!
ಕುಟುಂಬಸ್ಥರು ದುಃಖ ತಪ್ತರಾಗಿ, ಭಾರವಾದ ಮನಸ್ಸಿನಿಂದ ರೇಣುಕಾಚಾರ್ಯ ಅವರ ಸಮಾಧಿಗೆ ಹಾಲೆರೆದಿದ್ದಾರೆ. ಬದುಕಿ ಬಾ ಮಗನೇ ಅಂತ ಮಗನ ಸಮಾಧಿ ಮುಂದೆ ತಾಯಿಯ ಗೋಳಾಡುತ್ತಾ ಇದ್ದರು. ತಾಯಿಯನ್ನು ಸಹೋದರ, ಮಗಳು ಸಮಾಧಾನಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ