/newsfirstlive-kannada/media/post_attachments/wp-content/uploads/2024/08/DARSHAN_CHIKKANNA.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ಗೆ ಮತ್ತೆ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಿದೆ. ಕೇಸ್ ಕುರಿತು ನಟ ದರ್ಶನ್ ಪೊಲೀಸ್ರ ಮುಂದೆ ಬಾಯ್ಬಿಟ್ಟ ಅಸಲಿ ಸತ್ಯವನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಹಿಂದೆ ಕೇಸ್ ಸಂಬಂಧ ಮತ್ತೊಂದು ಬೆಳವಣಿಗೆ ಕಂಡು ಬಂದಿತ್ತು. ನಟ ದರ್ಶನ್ ಅವರು ಶೆಡ್ಗೆ ಹೋಗೋ ಮೊದಲು ಪಾರ್ಟಿ ಮಾಡಿದ್ದು ರಿವೀಲ್ ಆಗಿತ್ತು. ಪಾರ್ಟಿ ವೇಳೆ ದರ್ಶನ್ ಜೊತೆ ನಟ ಚಿಕ್ಕಣ್ಣ ಇದ್ದರು ಎಂದು ತಿಳಿದು ಬಂದಿತ್ತು. ಹಾಗಾಗಿ ಪೊಲೀಸ್ರ ಚಿಕ್ಕಣ್ಣ ಅವರನ್ನು ಕರೆದು ವಿಚಾರಣೆ ಕೂಡ ಮಾಡಿದ್ರು. ಕೇಸ್ಗೂ ಚಿಕ್ಕಣ್ಣಗೂ ಸಂಬಂಧವೇನು? ಅನ್ನೋದರ ಬಗ್ಗೆ ನಟ ದರ್ಶನ್ ಹೇಳಿದ್ದಾರೆ.
ನಟ ಚಿಕ್ಕಣ್ಣ ಬಗ್ಗೆ ದರ್ಶನ್ ಹೇಳಿದ್ದೇನು?
- ಚಿತ್ರ ನಟರಾಗಿರುವ ಚಿಕ್ಕಣ್ಣ, ಬುಲ್ಬುಲ್ ಚಿತ್ರದ ಸಮಯದಲ್ಲಿ ಪರಿಚಯ
- ಚಿತ್ರ ನಟ ಯಶಸ್ ಸೂರ್ಯ ಸಹ ನಮ್ಮ ಜೊತೆಯಲ್ಲಿ ಸಂಪರ್ಕದಲ್ಲಿರ್ತಾರೆ
- ಶನಿವಾರ 8ನೇ ತಾರೀಕು ವರ್ಕೌಟ್ ಮುಗಿಸಿ ಮನೆಯಲ್ಲಿದ್ದೆ
- ಮಧ್ಯಾಹ್ನ ಪ್ರದೂಷ್ ಹಾಗೂ ನಾಗರಾಜ್ ಜೊತೆ ಹೋಗಿದ್ದೆ
- ಇಬ್ಬರ ಜೊತೆಗೆ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್ಗೆ ಹೋಗಿದ್ದೆ
- ರೆಸ್ಟೋರೆಂಟ್ನಲ್ಲಿ ವಿನಯ್, ಯಶಸ್ ಸೂರ್ಯ ಇದ್ದರು
- ನಾನು ಹೋದ ನಂತರ ರೆಸ್ಟೋರೆಂಟ್ಗೆ ಚಿಕ್ಕಣ್ಣ ಸಹ ಬಂದರು
- ಅಲ್ಲೇ ಮಧ್ಯಾಹ್ನ ಊಟ ಮಾಡಿ, ಟೇಬಲ್ ಬಳಿ ಕುಳಿತು ಮಾತುಕತೆ
- ಮಧ್ಯಾಹ್ನ 3 ಗಂಟೆಗೆ ಪವನ್ ನನ್ನ ಬಳಿ ಬಂದು ಮೊಬೈಲ್ ತೋರಿಸಿದ್ದ
- ಪವಿತ್ರಾ ಅಕ್ಕನಿಗೆ ಗೌತಮ್ .ಎಸ್ ಎನ್ನುವವನಿಂದ ಫೋಟೋಗಳು
- ಹಲವು ದಿನದಿಂದ ಖಾಸಗಿ ಅಂಗಾಂಗದ ಫೋಟಗಳು ಕಳುಹಿಸುತ್ತಿದ್ದ
- ನಿನ್ನ ರೇಟ್ ಎಷ್ಟು, ರೂಮ್ ಮಾಡ್ತೇನೆ, ನೀ ಬಾ, ನಾನು ಚೆನ್ನಾಗಿದ್ದೇನೆ
- ಪವಿತ್ರಾಗೆ ಮೆಸೇಜ್ ಮಾಡುತ್ತಿದ್ದ ಅಂತ ಮೊಬೈಲ್ ತೋರಿಸಿದ್ದ
- ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ವ್ಯಕ್ತಿ ಮೆಸೇಜ್ಗಳನ್ನ ಮಾಡ್ತಿದ್ದ
- ರಘು ಮತ್ತವನ ಸ್ನೇಹಿತರು ಕಿಡ್ನಾಪ್ ಮಾಡಿ ಕರೆದುಕೊಂಡು ಬಂದಿದ್ದಾರೆ
- ಪಾರ್ಕಿಂಗ್ ಶೆಡ್ನಲ್ಲಿ ಇಟ್ಟಿದ್ದಾರೆ ಅಂತ ಪವನ್ ಮಾಹಿತಿ ಕೊಟ್ಟಿದ್ದ
- ಪವಿತ್ರಾಗೆ ಕಾಲ್ ಮಾಡಿ, ಮಾತಾಡಿ, ಸ್ಟೋನಿ ಬ್ರೂಕ್ಸ್ನಿಂದ ಊಟ ಕಳಿಸಿದೆ
- ಪವಿತ್ರಾ ಊಟ ಮಾಡುವ ಸಮಯದಲ್ಲಿ ವಿಡಿಯೋ ಕಾಲ್ ಮಾಡಿ ಮಾತಾಡಿದೆ
- ಯಾರ್ಡ್ಗೆ ಹೋಗಿ ಅವನನ್ನ ಸರಿಯಾಗಿ ವಿಚಾರಿಸಿಕೊಂಡು ಬರೋಣ ಎಂದಿದ್ದೆ
- ತಮ್ಮ ಸ್ವ ಇಚ್ಛಾ ಹೇಳಿಕೆಯಲ್ಲಿ ಎಲ್ಲವನ್ನೂ ವಿವರವಾಗಿ ತಿಳಿಸಿರುವ ದರ್ಶನ್
- ಚಿಕ್ಕಣ್ಣ, ಯಶಸ್ ಸೂರ್ಯಗೆ ಮನೆಗೆ ಹೋಗಿ ಅಂತ ತಿಳಿಸಿದೆ
- ನಾನು, ವಿನಯ್, ಪ್ರದೂಷ್, ಸ್ಕಾರ್ಪಿಯೋದಲ್ಲಿ ಪವಿತ್ರಾ ಮನೆಗೆ ಹೋದ್ವಿ
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ದಿನ ನಡೆದಿದ್ದೇನು? ನಟ ದರ್ಶನ್ ಬಿಚ್ಚಿಟ್ಟ ಇಂಚಿಂಚೂ ಶಾಕಿಂಗ್ ಮಾಹಿತಿ ಇಲ್ಲಿದೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ