Advertisment

ವಾಶ್ ಮಾಡಿದ್ದ ದರ್ಶನ್‌ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ; ಏನಿದು ಲುಮಿನಲ್ ಟೆಸ್ಟ್‌?

author-image
Bheemappa
Updated On
ವಾಶ್ ಮಾಡಿದ್ದ ದರ್ಶನ್‌ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ; ಏನಿದು ಲುಮಿನಲ್ ಟೆಸ್ಟ್‌?
Advertisment
  • ದರ್ಶನ್ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆ ಆಯಿತಾ?
  • ರಕ್ತದ ಕಲೆಗಳನ್ನು ಗುರುತಿಸಿದ್ದರಿಂದ ದರ್ಶನ್​ಗೆ ಮತ್ತಷ್ಟು ಸಂಕಷ್ಟ
  • ಬಟ್ಟೆಗಳನ್ನ ವಾಶ್ ಮಾಡಿದರೂ ಆ ಕಲೆಗಳನ್ನು ಪತ್ತೆ ಮಾಡಿದ್ರಾ?

ಬಳ್ಳಾರಿ: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಅವರ ಬಟ್ಟೆ ಮೇಲಿರುವ ರಕ್ತದ ಕಲೆಗಳನ್ನು ಪತ್ತೆ ಹಚ್ಚಲಾಗಿದೆ. ರೇಣುಕಾಸ್ವಾಮಿಯ ರಕ್ತದ ಕಲೆ ದರ್ಶನ್ ಬಟ್ಟೆ ಮೇಲೆ ಪತ್ತೆಯಾಗಿದ್ದು ಹೇಗೆ? ಆಲ್​ ರೆಡಿ ವಾಶ್ ಮಾಡಲಾಗಿದ್ದ ಬಟ್ಟೆಗಳ ಮೇಲೆ ಬ್ಲಡ್​ ಹೇಗೆ ಸರ್ಚ್ ಮಾಡಲಾಯಿತು? ರಕ್ತದ ಕಲೆಗಳನ್ನು ಪತ್ತೆ ಮಾಡಲೆಂದು ಇರುವ ಟೆಸ್ಟ್​ ಯಾವುದು? ಅನ್ನೋ ಡಿಟೇಲ್ ಮಾಹಿತಿ ಇಲ್ಲಿದೆ.

Advertisment

ಇದನ್ನೂ ಓದಿ:ಬಳ್ಳಾರಿ ಜೈಲಲ್ಲಿ ದಾಸನಿಗೆ ಭಯ.. ಫೋನ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ 5 ನಿಮಿಷ ಮಾತಾಡಿದ ದರ್ಶನ್​!

ಪ್ರಕರಣದ ವೇಳೆ ದರ್ಶನ್ ಅವರು ಧರಿಸಿದ್ದ ಬ್ಲೂ ಜೀನ್ಸ್ ಹಾಗೂ ಕಪ್ಪು ಬಣ್ಣದ ರೌಂಡ್ ನೆಕ್ ಟೀಶರ್ಟ್ ಮೇಲೆ ರಕ್ತದ ಕಲೆಗಳು ಇರುವುದು ದೃಢವಾಗಿದೆ. ಎಫ್​ಎಸ್​​ಎಲ್​ ವರದಿ ಮೂಲಕ ನಟನ ಬಟ್ಟೆಗಳ ಮೇಲೆ ಇರುವುದು ರೇಣುಕಾಸ್ವಾಮಿಯ ರಕ್ತದ ಕಲೆಗಳು ಎಂದು ಗೊತ್ತಾಗಿದೆ. ಹೀಗಾಗಿ ಪ್ರಕರಣ ಇನ್ನಷ್ಟು ಜಟಿಲವಾಗಿದೆ. ದರ್ಶನ್ ಜೈಲಿನಿಂದ ಹೊರ ಬರುವುದು ಅಷ್ಟೊಂದು ಸುಲಭವಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮೂರು ದಿನದಿಂದ ಜೈಲಲ್ಲಿ ದರ್ಶನ್‌ಗೆ ಒಂದೇ ಟೀ ಶರ್ಟ್‌.. ಡಿಬಾಸ್​ ಅಭಿಮಾನಿಗಳಿಗೂ ಇದೇ ದೊಡ್ಡ ಕ್ರೇಜ್​! 

Advertisment

publive-image

ಏನಿದು ಲುಮಿನಲ್ ಟೆಸ್ಟ್..?

ಲುಮಿನಲ್ ಎಂಬುದು ಒಂದು ಕೆಮಿಕಲ್ ಆಗಿದೆ. ಯಾವ ಬಟ್ಟೆ ಮೇಲೆ ರಕ್ತದ ಕಲೆಗಳು ಇರುತ್ತವೆಯೋ ಅದನ್ನು ಖಚಿತಪಡಿಸಲಾಗಿರುತ್ತೆ. ಅದಕ್ಕೆ ಲುಮಿನಲ್ ಕೆಮಿಕಲ್ ಬಳಿಯಲಾಗುತ್ತದೆ. ಆಗ ಹಿಮೋಗ್ಲೋಬಿನ್ ಜೊತೆ ವರ್ತಿಸುವ ಲುಮಿನಲ್, ನೀಲಿ ಹಾಗೂ ಹಸಿರು ಬಣ್ಣದ ದ್ರಾವಣ ಉತ್ಪಾದಿಸುತ್ತದೆ. ಬಟ್ಟೆಗಳನ್ನ ವಾಶ್ ಮಾಡಿದರೂ ಹಿಮೋಗ್ಲೋಬಿನ್ ಅಂಶ ಹೋಗಿರುವುದಿಲ್ಲ. ನೀಲಿ ಹಾಗೂ ಹಸಿರು ಬಣ್ಣದ ದ್ರಾವಣವನ್ನ ಸಂಗ್ರಹಿಸಿ ಆದರಿಂದ ಡಿಎನ್​ಎ ಸಂಗ್ರಹಿಸಲಾಗುತ್ತದೆ. ಈ ರೀತಿಯಾಗಿ ರೇಣುಕಾಸ್ವಾಮಿಯ ರಕ್ತದ ಕಲೆಗಳನ್ನ ಪತ್ತೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment