/newsfirstlive-kannada/media/post_attachments/wp-content/uploads/2024/06/Darshan-RR-Nagar-house.jpg)
ಬೆಂಗಳೂರು: ಕೊಲೆ ಕೇಸ್‌ನಲ್ಲಿ ಅರೆಸ್ಟಾಗಿರೋ ನಟ ದರ್ಶನ್ ಅವರ ಮನೆಗೂ ಕಂಟಕ ಕಾದಿದ್ಯಾ? ದರ್ಶನ್ ಅರೆಸ್ಟಾಗಿರೋವಾಗ್ಲೇ ಅವ್ರ ಮನೆ ನೆಲಸಮ ಆಗ್ಬಿಡುತ್ತಾ? ಸರ್ಕಾರ ದರ್ಶನ್ ಆರ್.ಆರ್ ನಗರದ ಮನೆ ಮೇಲೆ ಬುಲ್ಡೋಜರ್ ಹರಿಸಿಬಿಡುತ್ತಾ? ಹೀಗೊಂದು ಪ್ರಶ್ನೆ ಮೂಡೋದಕ್ಕೆ ಕಾರಣವಾಗಿರೋದು ಡಿಸಿಎಂ ಡಿ.ಕೆ ಶಿವಕುಮಾರ್ ನೀಡಿರೋ ಹೇಳಿಕೆ.
ಇದನ್ನೂ ಓದಿ: BREAKING: ದರ್ಶನ್ ಗ್ಯಾಂಗ್ ಬಿಡಿಸಲು ಶಾಸಕ, ಸಚಿವರಿಂದ ಭಾರೀ ಯತ್ನ; ಖಡಕ್ SPP ಬದಲಾಗ್ತಾರಾ?
ತೂಗುದೀಪ ನಿವಾಸ.. ಇದೀಗ ಈ ನಿವಾಸಕ್ಕೆ ಸಂಚಕಾರ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಹೆಗಲ ಮೇಲೆ ಹೊತ್ತು ಜೈಲಲ್ಲಿರೋ ದರ್ಶನ್ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇದಕ್ಕೆ ಕಾರಣ, ರಾಜರಾಜೇಶ್ವರಿ ನಗರದ ರಾಜಕಾಲುವೆ ಮೇಲೆ ದರ್ಶನ್ ಮನೆ ತಲೆ ಎತ್ತಿ ನಿಂತಿರೋದು. ಹಾಗಂತ ಇದು, ಕೊಲೆ ಕೇಸ್ ಬೆಳಕಿಗೆ ಬಂದ ಮೇಲೆ ಮುನ್ನಲೆಗೆ ಬಂದ ವಿಚಾರ ಅಲ್ಲ. 2016 ಅಂದ್ರೆ ಕಳೆದ 8 ವರ್ಷಗಳ ಹಿಂದೆಯೇ ನಟ ದರ್ಶನ್ ಹೆಗಲೇರಿದ್ದ ಶನಿ.
‘ತೂಗುದೀಪ ನಿವಾಸ’ಕ್ಕೆ ಸಂಚಕಾರ
- 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ
- ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದವರ ವಿರುದ್ಧ ಸಮರ
- ಒತ್ತುವರಿ ಮಾಡಿದ್ದ ಜಾಗ ತೆರವು ಮಾಡುವಂತೆ ಬಿಬಿಎಂಪಿಗೆ ನಿರ್ದೇಶನ
- ಸರ್ಕಾರ ಭೂ ದಾಖಲೆಗಳ ಪ್ರಕಾರ ಆರ್ ಆರ್ ನಗರದ ದರ್ಶನ್ ನಿವಾಸ
- ಪ್ರಾಥಮಿಕ ಕಾಲುವೆಯ ಬಫರ್ ಝೋನ್ ಮೇಲೆ ನಿರ್ಮಿಸಿರುವುದು ಪತ್ತೆ
- ಶಾಸಕ ಶಾಮನೂರು ಒಡೆತನದ S.S ಆಸ್ಪತ್ರೆ ಸೇರಿ 67 ಕಟ್ಟಡಗಳ ಪಟ್ಟಿ ಸಿದ್ಧ
- ಈ ಕಟ್ಟಗಳನ್ನ ತೆರವುಗೊಳಿಸಲು ನೋಟಿಸ್ ನೀಡಿ 15 ದಿನಗಳ ಕಾಲಾವಕಾಶ
- ನೋಟಿಸ್ ನೀಡ್ತಿದ್ದಂತೆ ದರ್ಶನ್ ಮತ್ತಿತರಿಂದ ಸಿವಿಲ್ ಕೋರ್ಟ್‌ನಿಂದ ತಡೆ
- ನಂತರ 2016 ಅಕ್ಟೋಬರ್ನಲ್ಲಿ ಹೈಕೋರ್ಟ್ನಿಂದಲೂ ತಡೆಯಾಜ್ಞೆ
ರಾಜ್ಯ ಸರ್ಕಾರವೂ ಈ ವಿಷಯವನ್ನು ಮರೆತೇ ಬಿಟ್ಟಿತ್ತು. ಆದರೆ ಬೆಂಗಳೂರಿನ ವಿವಿಧೆಡೆ ಇದೇ ರೀತಿ ನಿರ್ಮಿಸಲಾಗಿದ್ದ ಬಡ, ಮಧ್ಯಮ ವರ್ಗದ ಮನೆಗಳನ್ನು ನಿರ್ದಾಕ್ಷಿಣ್ಯವಾಗಿ ಕೆಡವಿದ ಸರ್ಕಾರದ ಧೋರಣೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ, ಮತ್ತೆ ದರ್ಶನ್ ಮನೆ ಸರ್ಕಾರದ ಕಣ್ಣಿಗೆ ಬಿದ್ದಿದ್ದು, ಈ ಬಾರಿ ಯಾರೇ ಸ್ಟೇ ತಂದಿದ್ರು ಕಾನೂನಿನ ಪ್ರಕಾರ ತೆರವು ಮಾಡ್ತೇವೆ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕೊಲೆ ಕೇಸ್‌ನಲ್ಲಿ ದರ್ಶನ್ ಕಸ್ಟಡಿಯಲ್ಲಿರುವ ಹೊತ್ತಲ್ಲೇ 'ತೂಗುದೀಪ ನಿಲಯಕ್ಕೆ ಸಂಚಕಾರ ಎದುರಾಗಿದೆ. ಕೆಂಗೇರಿ ಹೋಬಳಿಯ ಹಲಗೇವಡೇರಹಳ್ಳಿ ಗ್ರಾಮದ ಸರ್ವೆ ನಂ. 53ರ ಹದ್ದಿಗಿಡದ ಹಳ್ಳದಲ್ಲಿ ದರ್ಶನ್ 2 ಗುಂಟೆಯನ್ನ ಒತ್ತುವರಿ ಮಾಡಿದ್ದು, ಶೀಘ್ರವೇ ಇದಕ್ಕೂ ಒಂದು ಗತಿ ಬರುವ ಲಕ್ಷಣ ಕಾಣಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ