Advertisment

ಜೈಲಲ್ಲಿ ಓದೋಕೆ ಶುರು ಮಾಡಿದ ನಟ ದರ್ಶನ್​​.. ಡಿ ಬಾಸ್​ ಪಡೆದ 5 ಪುಸ್ತಕಗಳು ಯಾವುವು?

author-image
Veena Gangani
Updated On
ಜೈಲಲ್ಲಿ ಓದೋಕೆ ಶುರು ಮಾಡಿದ ನಟ ದರ್ಶನ್​​.. ಡಿ ಬಾಸ್​ ಪಡೆದ 5 ಪುಸ್ತಕಗಳು ಯಾವುವು?
Advertisment
  • ಹೊರಗಡೆ ಇದ್ದಾಗ ಊಟ ಇಲ್ಲದಿದ್ರೂ ವರ್ಕೌಟ್​ ಮಸ್ಟ್​ ಅಂತಿದ್ದ ಖ್ಯಾತ ನಟ
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಸೇರಿ 17 ಆರೋಪಿಗಳು ಜೈಲಿಗೆ
  • ದಿನ ಕಳೆದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿಂತೆಗೀಡಾಗ್ತಿರೋ ನಟ ದರ್ಶನ್

ನಟ ದರ್ಶನ್ ಪರಪ್ಪನ ಅಗ್ರಹಾರದ ಗೂಡು ಸೇರಿ ಒಂದು ವಾರವಾಯ್ತು. ಹೊರಗೆ ವರ್ಕ್​ಔಟ್​, ಜಿಮ್ ಅಂತೆಲ್ಲಾ ಐಷಾರಾಮಿ ಜೀವನ ನಡೆಸ್ತಿದ್ದ ದರ್ಶನ್​ ಇದೀಗ ಸೆಲ್​ನಲ್ಲಿ ಏಕಾಂಗಿಯಾಗಿ ಬಿಟ್ಟಿದ್ದಾರೆ. ಜೈಲಿನ ಸೆಲ್​ನಲ್ಲಿ ದರ್ಶನ್​ನ ದಿನಚರಿ ಬದಲಾಗಿ ಬಿಟ್ಟಿದೆ.

Advertisment

publive-image

ಇದನ್ನೂ ಓದಿ: ದರ್ಶನ್​ ಖೈದಿ 6106 ನಂಬರ್​​ಗೆ ಫುಲ್​ ಡಿಮ್ಯಾಂಡ್​.. ಮೊಬೈಲ್​ ಕವರ್​, ವಾಹನದ ಮೇಲೂ ಇದೇ ಸ್ಟಿಕ್ಕರ್​!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೂನ್​ 11ಕ್ಕೆ ಅರೆಸ್ಟ್​ ಆದ ನಟ ದರ್ಶನ್ 22ಕ್ಕೆ ಜೈಲು ಪಾಲಾಗ್ತಾರೆ. ಒಂದು ವಾರದಿಂದ ಜೈಲು ಹಕ್ಕಿಯಾಗಿ ಸೆಲ್​ನಲ್ಲಿ ಕಾಲ ಕಳೆಯುತ್ತಿರುವ ದಾಸ ಮೌನವಾಗಿದ್ದಾರೆ. ಸೆಲ್​ನ ಗೋಡೆಗೆ ವರಗಿ ಕೂತು ಏಕಾಂಗಿಯಾಗಿ ಬಿಟ್ಟಿದ್ದಾರೆ. ಮೌನ ಧ್ಯಾನದಲ್ಲಿ ನಿರತರಾಗಿದ್ದಾರೆ. ಹೊರಗಡೆ ಇದ್ದಾಗ ಊಟ ಇಲ್ಲದಿದ್ರೂ ವರ್ಕೌಟ್​ ಮಸ್ಟ್​ ಅಂತಿದ್ದ ದಾಸ ಇದೀಗ ಜೈಲಿನ ಸೆಲ್​ನಲ್ಲಿ ವರ್ಕ್​ಔಟ್​ ಇಲ್ಲದೇ, ಮಾತೂ ಇಲ್ಲದೇ ಯಾರ ಸಹವಾಸವೂ ಬೇಡ ಅಂತಾ ಫುಲ್ ಸೈಲೆಂಟ್ ಆಗಿದ್ದಾರೆ. ಬೆಳಗ್ಗೆ ಸಂಜೆ ವ್ಯಾಯಾಮ ಇಲ್ಲದೇ, ಕೇವಲ ತಮ್ಮ ಬಱಕ್​ನಲ್ಲಿ ಸ್ವಲ್ಪ ವಾಕ್​ ಮಾಡ್ತಿದ್ದಾರಂತೆ. ಪ್ರತಿನಿತ್ಯ ಊಟ ಇಲ್ಲದಿದ್ರೂ ವರ್ಕೌಟ್​ ಮಸ್ಟ್ ಅಂತಿದ್ದ ದಾಸ.

publive-image

ಜೈಲಿನ ಸೆಲ್​ನಲ್ಲಿ ಬೆಳಗ್ಗೆ ಸಂಜೆ ವ್ಯಾಯಾಮವೂ ಇಲ್ಲದೇ. ಮಾತು ಕತೆಯೂ ಇಲ್ಲದೇ ಸೈಲೆಂಟ್ ಆಗಿದ್ದಾರೆ. ರಾತ್ರಿ ಕಾರ್ಪೆಟ್ ಮೇಲೆ ಮಲಗಿ ನಿದ್ದೆ ಮಾಡ್ತಿರೋ ದರ್ಶನ್, ಬೆಳಗ್ಗೆಯಾದ್ರೆ ಗೋಡೆ ಪಿಲ್ಲರ್​ಗೆ ಒರಗಿ ಮೌನವಾರ್ಗಿತಾರಂತೆ. ತನ್ನ ಜೊತೆಗಿರೋ ಆರೋಪಿಗಳ ಜೊತೆಯೇ ಸರಿಯಾಗಿ ಮಾತಾಡ್ತಾ ಇಲ್ವಂತೆ. ಮಾನಸಿಕವಾಗಿ ಮತ್ತಷ್ಟು ಕುಗ್ಗಿರುವ ದರ್ಶನ್, ಓದಲು ಐದು ಕಥೆ ಪುಸ್ತಕಗಳನ್ನ ಪಡೆದಿದ್ದಾರಂತೆ. ಮಧ್ಯಾಹ್ನ ಮತ್ತು ಸಂಜೆ ಕಥೆ ಪುಸ್ತಕಗಳನ್ನ ಓದಿ ಸುಮ್ಮನ್ನಿರ್ತಾರೆ ಅನ್ನೋ ಮಾಹಿತಿ ಇದೆ. ಅದಲ್ಲದೇ, ದಿನಕಳೆದಂತೆ ದರ್ಶನ್ ಜೈಲಲ್ಲಿ ಚಿಂತೆಗೀಡಾಗ್ತಿರೋ ಮಾಹಿತಿ ಇದೆ.

Advertisment

ಇದನ್ನೂ ಓದಿ:ದರ್ಶನ್ ಗ್ಯಾಂಗ್‌ಗೆ ₹40 ಲಕ್ಷ ಕೊಟ್ಟ ರಹಸ್ಯ.. ಪೊಲೀಸರಿಗೆ ಮಹತ್ವದ ಸುಳಿವು; ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್!

publive-image

ಅತ್ತ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಗ ವಿನೀಶ್ ಜೊತೆ ಕೊಡಗಿಗೆ ಹೋಗಿದ್ದಾರೆ ಎನ್ನಲಾಗ್ತಿದೆ. ಕಳೆದ ಹಲವು ದಿನಗಳಿಂದ ಜಂಜಾಟದಿಂದ ಬೇಸತ್ತಿದ್ದ ವಿಜಯಲಕ್ಷ್ಮಿ ಕೊಡಗಿನ ಖಾಸಗಿ ರೆಸಾರ್ಟ್​ಗೆ ಶಿಫ್ಟ್​ ಆಗಿದ್ದಾರೆ ಎನ್ನಲಾಗ್ತಿದೆ. ಇತ್ತೀಚಿಗಷ್ಟೇ ದರ್ಶನ್ ಫ್ಯಾನ್ಸ್​ಗೆ ಮನವಿ ಪತ್ರ ಬರೆದಿದ್ದ ವಿಜಯಲಕ್ಷ್ಮಿ ನನಗೆ ನ್ಯಾಯಾಲಯದಲ್ಲಿ ನಂಬಿಕೆ ಇದೆ ಎಂದಿದ್ರು. ಇದೀಗ ಪ್ರೈವಸಿ ಬಯಸಿ ಮಗನ ಜೊತೆ ಕೊಡಗಿಗೆ ತೆರಳಿದ್ದಾರೆ ಎನ್ನಲಾಗ್ತಿದೆ. ಒಟ್ಟಾರೆ, ಹೊರಗೆ ಫಿಟ್​ನೆಸ್, ವರ್ಕೌಟ್​, ತರ ತರ ಊಟ ಅಂತೆಲ್ಲಾ ಫುಲ್​ ಬಿಂದಾಸ್ ಆಗಿದ್ದ ದರ್ಶನ್​ ದಿನಚರಿ ಕಂಪ್ಲೀಟ್ ಬದಲಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರುವ ಎ2 ಆರೋಪಿ ಚಿಂತೆಗೀಡಾಗುವಂತೆ ಮಾಡಿದೆ. ಜೈಲಿನ ಸೆಲ್​ನಲ್ಲಿ ಏಕಾಂಗಿಯಾಗಿ ಕೂತು ಕಾಲ ಕಳೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment