/newsfirstlive-kannada/media/post_attachments/wp-content/uploads/2024/06/darshan10.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಅವರಿಗೆ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ನಿನ್ನೆ ಕೋರ್ಟ್ ಕಸ್ಟಡಿಗೆ ನೀಡಿದ ಬಳಿಕ ಪೊಲೀಸ್ ಸ್ಟೇಷನ್‌ನಲ್ಲಿ ದರ್ಶನ್ ಅವರನ್ನು ವಿಚಾರಣೆ ನಡೆಸಲಾಯಿತು. ಇದಾದ ಮೇಲೆ ರೇಣುಕಾಸ್ವಾಮಿ ಅವರ ಕೊಲೆ ನಡೆದಿದೆ ಎನ್ನಲಾದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.
ಆರ್.ಆರ್ ನಗರದ ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿ ಅವರನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಕೊಲೆ ಕೇಸ್‌ನಲ್ಲಿ ಸಾಕ್ಷಿ ಕಲೆಹಾಕುತ್ತಿರುವ ಪೊಲೀಸರು ಇದೀಗ ನಟ ದರ್ಶನ್ ಹಾಗೂ ಮತ್ತವರ ಗ್ಯಾಂಗ್ ಅನ್ನು ಪಟ್ಟಣಗೆರೆಯ ಶೆಡ್‌ಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ಕೊಲೆ ನಂತ್ರ ಪೆಡಿಕ್ಯೂರ್, ಮೆಡಿಕ್ಯೂರ್ ಮಾಡಿಸಿಕೊಂಡ ಪವಿತ್ರಾ; ಪಶ್ಚಾತ್ತಾಪವೇ ಇರಲಿಲ್ವಾ?
ಪಟ್ಟಣಗೆರೆಯ ಶೆಡ್‌ನಲ್ಲಿ ನಟ ದರ್ಶನ್, ಎ1 ಪವಿತ್ರಾ ಗೌಡ ಅವರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿದೆ. ಸ್ಥಳ ಮಹಜರು ಮಾಡುವ ವೇಳೆ ನಟ ದರ್ಶನ್ ಅವರು ಕೈ ಕಟ್ಟಿಕೊಂಡು ನಿಂತಿದ್ದರು. ದರ್ಶನ್ ಅವರ ಪಕ್ಕದಲ್ಲೇ ಪವಿತ್ರಾ ಗೌಡ ಅವರು ನಿಂತಿದ್ದು, ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ದರ್ಶನ್, ಪವಿತ್ರಗೌಡ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಆರ್.ಆರ್.ನಗರದ ಶೆಡ್‌ಗೆ ಕರೆದುಕೊಂಡು ಹೋಗಿದ್ದಾರೆ. ನಟ ದರ್ಶನ್ ಹಾಗೂ ಇತರೆ ಆರೋಪಿಗಳು ಶೆಡ್‌ನಲ್ಲಿ ಕೊಲೆಯಾದ ದಿನ ಅಸಲಿಗೆ ಏನಾಯ್ತು. ರೇಣುಕಾಸ್ವಾಮಿ ಅವರನ್ನು ಕರೆದುಕೊಂಡು ಬಂದವರು ಯಾರು? ರೇಣುಕಾಸ್ವಾಮಿ ಬಂದ ಮೇಲೆ ಏನೆಲ್ಲಾ ನಡೀತು ಅನ್ನೋ ಇಂಚಿಂಚು ಮಾಹಿತಿಯನ್ನು ಆರೋಪಿಗಳಿಂದ ಕಲೆ ಹಾಕುತ್ತಿದ್ದಾರೆ. ಕೊಲೆಯಾದ ಶೆಡ್‌ನಲ್ಲಿ ಆರೋಪಿಗಳನ್ನು ಒಟ್ಟಿಗೆ ಮಹಜರು ಮಾಡಲು ಕರೆದುಕೊಂಡು ಬಂದಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಮೃತದೇಹ ಬಿಸಾಡುವಾಗ ನಡೆಯಿತು ಯಡವಟ್ಟು.. ಪ್ಲಾನ್ ಉಲ್ಟಾ ಹೊಡೆದಿದ್ದೇ ಇಲ್ಲಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ