newsfirstkannada.com

ನೇಹಾ ಬರ್ಬರ ಹತ್ಯೆ; ಶಿವಣ್ಣ ಬೆನ್ನಲ್ಲೇ ಆಕ್ರೋಶ ಹೊರಹಾಕಿದ ನಟ ದರ್ಶನ್​​​!

Share :

Published April 20, 2024 at 10:39pm

  ನೇಹಾಳನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿ ಫಯಾಜ್

  ನೇಹಾ ಹತ್ಯೆ ಖಂಡಿಸಿ ಟ್ವೀಟ್​ ಮೂಲಕ ಬೇಸರವನ್ನು ಹೊರ ಹಾಕಿದ ನಟ

  ‘ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ’

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಘಟನೆಯನ್ನು ಸ್ಯಾಂಡಲ್​ವುಡ್​ ನಟ ಹಾಗೂ ನಟಿಯರು ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ನೇಹಾ ಹಿರೇಮಠ್‌ಗೆ ನ್ಯಾಯ ಸಿಗಬೇಕು, ಅಪರಾಧಿಗೆ ತಕ್ಕ ಶಿಕ್ಷೆ ಸಿಗಲಿ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಗಳನ್ನು ನೆನೆದು ಬಿಕ್ಕಿಬಿಕ್ಕಿ ಅತ್ತ ತಾಯಿ; ನೇಹಾ ಬಗ್ಗೆ ಗೀತಾ ಹಿರೇಮಠ ಹೇಳಿದ್ದೇನು?

ಇದೇ ವಿಚಾರವಾಗಿ ನಟ ದರ್ಶನ್​ ಟ್ವೀಟ್​ ಮಾಡುವ ಮೂಲಕ ಬೇಸರವನ್ನು ಹೊರ ಹಾಕಿದ್ದಾರೆ. ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ 23 ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಬರೆದುಕೊಂಡಿದ್ದಾರೆ.

ಸದ್ಯ ನೇಹಾಳನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆರೋಪಿಗೆ ಯಾವ ಶಿಕ್ಷೆಯಾಗಲಿದೆ ಎಂದು ಕಾದು ನೋಡಬೇಕಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ದಿನದಿಂದ ದಿನಕ್ಕೆ ಆರೋಪಿ ವಿರುದ್ಧ ಕೂಗು ಕೇಳಿ ಬರುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಹಾ ಬರ್ಬರ ಹತ್ಯೆ; ಶಿವಣ್ಣ ಬೆನ್ನಲ್ಲೇ ಆಕ್ರೋಶ ಹೊರಹಾಕಿದ ನಟ ದರ್ಶನ್​​​!

https://newsfirstlive.com/wp-content/uploads/2024/04/darshan-3.jpg

Load More