Advertisment

ಮಂಕಾದ ದರ್ಶನ್, ಸಹೋದರ ದಿನಕರ ಎದುರು ಬೇಸರ.. ತೋಡಿಕೊಂಡ ಅಳಲು ಏನು?

author-image
Ganesh
Updated On
ಸಾವಿನ ನಂತರ ದೇಹ ವಿಲೇವಾರಿಯ ಫೋಟೋ ರಿವೀಲ್; ಫೋಟೋಗಳು ಏನ್​ ಹೇಳ್ತಿವೆ..?
Advertisment
  • ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲು ಸೇರಿರುವ ದರ್ಶನ್
  • ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿರುವ ಪೊಲೀಸರು
  • ಚಾರ್ಜ್​ಶೀಟ್, ವೈರಲ್ ಫೋಟೋ ಬಗ್ಗೆ ದರ್ಶನ್​ಗೆ ಮಾಹಿತಿ

ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್​​ನನ್ನು ನೋಡಲು ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ನಿನ್ನೆ ಬಳ್ಳಾರಿಗೆ ಬಂದಿದ್ದರು. ಈ ವೇಳೆ ಸಹೋದರನ ಜೊತೆ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisment

ಇಷ್ಟರ ಮಟ್ಟಿಗೆ ಬರ್ಬರ ಆಗುತ್ತೆ ಎಂದು ಸ್ವಲ್ಪನೂ ಅರ್ಥ ಆಗಲಿಲ್ಲ. ಏನೋ ಮಾಡೋಕೆ‌ ಹೋಗಿ ಏನೋ‌‌ ಆಯ್ತು. ಏನ್ ಸ್ಟಾರ್‍‍ಗಿರಿ ಇದ್ದರೆ ಏನಾಯ್ತು, ಇದೀಗ ನೋಡು ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಈ ವೇಳೆ ಚಾರ್ಜ್‌ಶೀಟ್, ಬೇಲ್ ಅರ್ಜಿ ಬಗ್ಗೆ ದರ್ಶನ್‌ಗೆ ದಿನಕರ್ ಮಾಹಿತಿ ನೀಡಿದ್ದಾರೆ.

ಕೃತ್ಯದ ಪೋಟೋ‌ಗಳು ವೈರಲ್ ಆಗಿರುವ ವಿಚಾರಗಳನ್ನೂ ದಿನಕರ್ ತಿಳಿಸಿದ್ದಾರೆ. ಬೇಲ್ ಸಿಗುತ್ತೆ ಧೈರ್ಯವಾಗಿರಿ ಎಂದು ವಿಜಯಲಕ್ಷ್ಮಿ ಹೇಳಿದ್ದಾಳೆ ಎನ್ನಲಾಗಿದೆ. ಇನ್ನು ಬಳ್ಳಾರಿ ಜೈಲಿನಲ್ಲಿ ದರ್ಶನ್ ಒಂದೇ ವಾರದಲ್ಲಿ ಸೊರಗಿದ್ದಾರೆ. ಮಂಕಾಗಿರುವ ದರ್ಶನ್ ಗಡ್ಡ ಬಿಟ್ಟು ಬಾಡಿದ ಮುಖದೊಂದಿಗೆ ಇದ್ದಾರೆ.

ಇದನ್ನೂ ಓದಿ: ಡಿ-ಗ್ಯಾಂಗ್​​ ಪಾರ್ಟಿ ಮರುಸೃಷ್ಟಿಯ ಫೋಟೋ ರಿವೀಲ್; ವಿನಯ್, ದರ್ಶನ್​, ಚಿಕ್ಕಣ್ಣ ಅಕ್ಕಪಕ್ಕ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment