ಶೂಟಿಂಗ್​ ಸ್ಥಳದಲ್ಲಿ ಮೌನವಿದ್ದ ನಟ ದರ್ಶನ್​! ಕೊಲೆ ಮಾಡಿದ ಪಶ್ಚಾತ್ತಾಪ ಕಾಡುತ್ತಿತ್ತೇ?

author-image
AS Harshith
Updated On
ಶೂಟಿಂಗ್​ ಸ್ಥಳದಲ್ಲಿ ಮೌನವಿದ್ದ ನಟ ದರ್ಶನ್​! ಕೊಲೆ ಮಾಡಿದ ಪಶ್ಚಾತ್ತಾಪ ಕಾಡುತ್ತಿತ್ತೇ?
Advertisment
  • ಶೂಟಿಂಗ್​ನಲ್ಲೂ ಮೌನ.. ಹೋಟೆಲ್​ನಲ್ಲೂ ಮೌನ
  • ಡೆವಿಲ್ ಸಿನಿಮಾ ಶೂಟಿಂಗ್​ನಲ್ಲಿ ಸಪ್ಪೆ ಇದ್ದ ದರ್ಶನ್​
  • ಗಂಟೆಗಟ್ಟಲೆ ಮೊಬೈಲ್ ನೋಡುತ್ತಾ ಸುಮ್ಮನಿದ್ದ ದಾಸ

ಮೈಸೂರು: ರೇಣುಕಾಸ್ವಾಮಿ ಕೊಲೆಯ ಬಳಿಕ ನಟ ದರ್ಶನ್​ಗೆ ಪಶ್ಚಾತ್ತಾಪ ಕಾಡಿದ್ಯಾ?. ಯಾಕಂದ್ರೆ ಕೊಲೆ ನಡೆದ ಬಳಿಕ ಜೂನ್ 9 ರಂದು ದರ್ಶನ್ ಮಂಕಾಗಿ ಕೂತಿದ್ದರಂತೆ. ಡೆವಿಲ್ ಚಿತ್ರೀಕರಣ ಸ್ಥಳದಲ್ಲಿ ದಾಸ ಮೌನಕ್ಕೆ ಜಾರಿದ್ದರಂತೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.

ಡೆವಿಲ್​ ದರ್ಶನ್​​ ಮುಂಬರುವ ಸಿನಿಮಾವಾಗಿದ್ದು, ಲಲಿತಮಹಲ್ ಹೋಟೆಲ್ ಬಳಿ ಈ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ದಾಸ ಯಾರೊಂದಿಗೂ ಮಾತನಾಡದೆ ಸುಮ್ಮನೆ ಕುಳಿತಿದ್ದರಂತೆ. ಗಂಟೆಗಟ್ಟಲೆ ಮೊಬೈಲ್ ನೋಡುತ್ತಾ ಸುಮ್ಮನಿದ್ದರಂತೆ.

publive-image

ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ದರ್ಶನ್ ಪ್ರಕರಣ ಕಪ್ಪು ಚುಕ್ಕೆ; ಮಾಜಿ ಶಾಸಕ ಕುಮಾರ ಬಂಗಾರಪ್ಪ

ದರ್ಶನ್​ ಹೋಟೆಲ್ ಬಳಿಯೂ ಕೂಡ ಯಾರನ್ನೂ ಭೇಟಿ ಮಾಡಿದೆ ಸುಮ್ಮನಿದ್ದರು. ಪ್ರತಿ‌ ಬಾರಿ ಅತ್ಯಾಪ್ತರ ಜೊತೆ ಬರ್ತಿದ್ದ ದರ್ಶನ್ ಒಬ್ಬಂಟಿಯಾಗಿಯೇ ಓಡಾಡುತ್ತಿದ್ದರು. ಮ್ಯಾನೇಜರ್ ನಾಗರಾಜ್ ಕೂಡ ಹತ್ತಿರಕ್ಕೆ ಕರೆದುಕೊಳ್ಳದೆ ಒಂಟಿಯಾಗಿದ್ದರು. ಚಿತ್ರೀಕರಣಕ್ಕೆ ಬರುವಂತೆ ದರ್ಶನ್ ಕರೆಯಲು ಹೋದಾಗಲೂ ಮೌನವಿದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕಟ್ಟಿಗೆ, ಹಗ್ಗ, ಸಿಸಿಟಿವಿ, ಬಟ್ಟೆ, ಎಣ್ಣೆ ಬಾಟಲಿ.. ಒಂದಾ, ಎರಡಾ.. ರೇಣುಕಾಸ್ವಾಮಿ ಪ್ರಕರಣದಲ್ಲಿ ಸಿಕ್ಕ ಸಾಕ್ಷ್ಯಗಳು!

ಇದೀಗ ನಟ ದರ್ಶನ್​ ಕೇಸ್‌ನಲ್ಲಿ ತನ್ನ ಹೆಸರು ತಳಕು ಹಾಕಬಾರದೆಂದು ಒಬ್ಬಂಟಿಯಾಗಿ ಓಡಾಡಿದ್ರಾ ಅನ್ನೋ ಅನುಮಾನ ಕಾಡತೊಡಗಿದೆ. ಗಂಟೆಗಟ್ಟಲೆ ಮೊಬೈಲ್ ವೀಕ್ಷಿಸುತ್ತಿದ್ದ ದರ್ಶನ್ ಮೊಬೈಲ್ ನಲ್ಲಿ ಏನಿತ್ತು ಎಂಬ ಕುತೂಹಲ ಹುಟ್ಟಿದೆ.

publive-image

ಇದನ್ನೂ ಓದಿ: ನಟ ದರ್ಶನ್​ ಮೀಟ್​ ಮಾಡಿಸ್ತೀನಿ.. ಆರೋಪಿ ರಾಘವೇಂದ್ರನ ಪ್ಲಾನ್​ಗೆ ರೇಣುಕಾಸ್ವಾಮಿ ಬಲಿಯಾದ್ರಾ?

ಒಟ್ಟಿನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆಸಿದ ಗ್ಯಾಂಗ್​ ಪೊಲೀಸರ ವಶದಲ್ಲಿದೆ. ಸಾರಥಿ ದರ್ಶನ್ ಮತ್ತು ಟೀಂ ಪೊಲೀಸರ ತನಿಖೆಗೆ ಉತ್ತರಿಸುತ್ತಿದೆ. ಈಗಾಗಲೇ ಕೊಲೆಗೆ ಸಂಬಂಧಿಸಿ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಆದರೆ ಈ ತನಿಖೆ ಎಲ್ಲಿಯವರೆಗೆ ಬಂದು ನಿಲ್ಲಲಿದೆ ಎಂದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment