newsfirstkannada.com

ರಾತ್ರಿ ನಿದ್ರೆ ಮಾಡಲಿಲ್ಲ, ಇಕ್ಕಟ್ಟಿನ ಕೋಣೆಯಲ್ಲಿ ದರ್ಶನ್ ಚಡಪಡಿಕೆ..!

Share :

Published August 30, 2024 at 1:51pm

    ಬಳ್ಳಾರಿ ಜೈಲ್​ನಲ್ಲಿ ದರ್ಶನ್ ಮೊದಲ ರಾತ್ರಿ ಹೇಗಿತ್ತು?

    ಇಂದು ಬೆಳಗ್ಗೆ ದರ್ಶನ್ ಯಾವ ಫುಡ್ ಸೇವಿಸಿದರು?

    ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ದರ್ಶನ್ ಶಿಫ್ಟ್

ಸೆಂಟ್ರಲ್ ಜೈಲಿನಲ್ಲಿ ರಾಜಾತಿಥ್ಯ ಸಿಕ್ಕಿ ಫುಲ್ ಬಿಂದಾಸ್‌ನಲ್ಲಿದ್ದ ಆರೋಪಿ ದರ್ಶನ್‌ಗೆ ಈಗ ಬಳ್ಳಾರಿ ಜೈಲಿನ ದರ್ಶನವಾಗಿದೆ. ನಿನ್ನೆ ದರ್ಶನ್‌ನ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದ್ದು, ದರ್ಶನ್‌ನ ಒಂದು ದಿನ ಬಳ್ಳಾರಿ ಜೈಲಿನ ಅನುಭವ ಪಡೆದಿದ್ದಾರೆ.

ನಿನ್ನೆ ಮಧ್ಯಾಹ್ನದವರೆಗೆ ಏನನ್ನು ತಿನ್ನದ ದರ್ಶನ್ ರಾತ್ರಿಯ ಜೈಲೂಟವನ್ನ ಮಾಡಿದ್ದಾರೆ. ಸಂಜೆ 5 ಗಂಟೆಯಿಂದ 6 ಗಂಟೆವರೆಗೂ ಜೈಲಿನಲ್ಲಿ ಊಟ ವಿತರಣೆ ಮಾಡಲಾಗುತ್ತೆ. ದರ್ಶನ್‌ ಇರೋ ಹೈ ಸೆಕ್ಯೂರಿಟಿ ಸೇಲ್‌ನ 15ರ ಬ್ಯಾರಕ್ ಮುಂದೆಯೇ ಸಿಬ್ಬಂದಿ ಊಟ ತಂದಿಟ್ಟಿದ್ದು, ರಾತ್ರಿಯ ಮುದ್ದೆ, ಅನ್ನ ಹಾಗೂ ಕಾಳುಸಾರನ್ನ ಊಟ ಮಾಡಿದ್ದಾರೆ. ಎಸ್​ಪಿ ಶೋಭಾರಾಣಿ ಕೂಡ ದರ್ಶನ್​ ಸೆಲ್​ ಬಳಿಯೇ ಸುಮಾರು 20 ನಿಮಿಷಗಳ ಕಾಲ ನಿಂತು ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ:ದರ್ಶನ್ ಕಲರ್​ ಫುಲ್​ ಎಂಟ್ರಿಗೆ ಟ್ವಿಸ್ಟ್; ಎಸ್​ಪಿ ಶೋಭಾರಾಣಿ ಮಹತ್ವದ ಮಾಹಿತಿ

ಇನ್ನು ರಾತ್ರಿ ಊಟ ಮಾಡಿ ಮಲಗಿದ್ದ ದರ್ಶನ್​ ನಿದ್ದೆ ಬರದೆ ಒದ್ದಾಡಿದ್ದಾರೆ. ರಾತ್ರಿ ಒಂದು ಗಂಟೆವರೆಗೆ ನಿದ್ದೆ ಮಾಡದೆ ಒದ್ದಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಜೈಲು ಇಕ್ಕಟ್ಟು ಇರುವ ಹಿನ್ನೆಲೆಯಲ್ಲಿ ನಿದ್ದೆ ಮಾಡಲು ಪರದಾಡಿದ್ದಾರೆ. ದರ್ಶನ್ ಇರುವ ಸೆಲ್ 12*6 ಉದ್ದ ಇದೆ. ಪ್ಯಾನ್ ವ್ಯವಸ್ಥೆ ಇದ್ದರೂ ನಿದ್ದೆ ಮಾಡಲಾಗದೇ ಕಷ್ಟಪಟ್ಟಿದ್ದಾರೆ ಎನ್ನಲಾಗಿದೆ.

ಇಂದು ಬೆಳಗ್ಗೆ ಬಿಸಿಬಿಸಿ ಉಪ್ಪಿಟ್ಟು ಸವಿದಿದ್ದಾರೆ. ಜೈಲ್‌ನಲ್ಲಿ ಬೆಳಗಿನ ಉಪಹಾರವಾಗಿ ಉಪ್ಪಿಟ್ಟು ನೀಡಲಾಗಿತ್ತು. ಎಲ್ಲಾ ಕೈದಿಗಳು ಜೈಲ್ ಉಪಹಾರದ ನಿಯಮದ ಪ್ರಕಾರ ಇಂದು ಉಪ್ಪಿಟ್ಟು ಮಾಡಲಾಗಿತ್ತು. ಅಂತೆಯೇ ದರ್ಶನ್ ಅವರಿಗೆ 355 ಗ್ರಾಂ ಉಪ್ಪಿಟ್ಟು ನೀಡಲಾಗಿತ್ತು.

ಇದನ್ನೂ ಓದಿ:ಮಧ್ಯಾಹ್ನದವರೆಗೆ ಏನನ್ನೂ ತಿನ್ನಲಿಲ್ಲ; ಬಳ್ಳಾರಿ ಜೈಲಿನಲ್ಲಿ ನರಕ ದರ್ಶನ.. ಮೊದಲ ರಾತ್ರಿ ಕಳೆದ ಆರೋಪಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾತ್ರಿ ನಿದ್ರೆ ಮಾಡಲಿಲ್ಲ, ಇಕ್ಕಟ್ಟಿನ ಕೋಣೆಯಲ್ಲಿ ದರ್ಶನ್ ಚಡಪಡಿಕೆ..!

https://newsfirstlive.com/wp-content/uploads/2024/06/DARSHAN-JAIL-2.jpg

Load More