newsfirstkannada.com

ದೇಹದ 15 ಕಡೆ ಕ್ರೂರ ಹಲ್ಲೆ.. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ರಹಸ್ಯಗಳು ಬಯಲು; ಏನದು?

Share :

Published June 11, 2024 at 4:09pm

Update June 11, 2024 at 4:07pm

  ನಟ ದರ್ಶನ್​​ ಮೇಲೆ ಅಭಿಮಾನಿಯ ಮೇಲೆ ಹಲ್ಲೆ, ಕೊಲೆ ಆರೋಪ

  ಕಬ್ಬಿಣದ ರಾಡು, ಕಟ್ಟಿಗೆಯಿಂದ ವ್ಯಕ್ತಿಗೆ ಹಲ್ಲೆ ಮಾಡಿರುವುದಾಗಿ ಶಂಕೆ

  ಮರಣೋತ್ತರ ಪರೀಕ್ಷೆಯಲ್ಲಿ ರೇಣುಕಾಸ್ವಾಮಿ ಕೊಲೆಯ ಬಗ್ಗೆ ಮಾಹಿತಿ

ಸ್ಯಾಂಡಲ್​ವುಡ್ ನಟ,​ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರೇಣುಕಾಸ್ವಾಮಿ ಎಂಬ ಯುವಕನ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಈಗಾಗಲೇ ನಟ ದರ್ಶನ್ ಸೇರಿ ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ರೇಣುಕಾಸ್ವಾಮಿ ಅವರ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.

ರಾಕ್ಷಸರಂತೆ ಕ್ರೂರ ಕೊಲೆ! 

ಕೊಲೆಯಾದ ಯುವಕ ರೇಣುಕಾಸ್ವಾಮಿ ಅವರ ಮುಖದ ಮೂಳೆ ಮುರಿಯಲಾಗಿದೆ. ಮೂಗು ಓಪನ್ ಆಗುವಂತೆ ಗುದ್ದಿದ್ದಾರೆ. ಕಾಲಿನಿಂದ ಮರ್ಮಾಂಗಕ್ಕೆ ಒದೆಯಲಾಗಿದೆ. ಎಡಭಾಗದ ಪಕ್ಕೆಲುಬು ಕಟ್ ಆಗುವಂತೆ ಹಲ್ಲೆ ಮಾಡಲಾಗಿದೆ. ರೇಣುಕಾಸ್ವಾಮಿ ಅವರ ಕಾಲು ಮತ್ತು ಕೈಗೆ ಬ್ಯಾಟ್, ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ. ಮೃತ ವ್ಯಕ್ತಿಯ ಕಿವಿಗೆ ಹಾಗೂ ತಲೆಗೆ ಗಂಭೀರ ಗಾಯ ಆಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಮರ್ಮಾಂಗಕ್ಕೆ ಹೊಡೆತ, ಮೂಗು ಓಪನ್, ಪಕ್ಕೆಲುಬು ಕಟ್‌; ಅತ್ಯಂತ ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ! 

ಅಚ್ಚರಿಯ ಸಂಗತಿ ಏನಂದ್ರೆ ಕೊಲೆಯಾದ ರೇಣುಕಾಸ್ವಾಮಿ ದೇಹದ ಮೇಲೆ ಬರೋಬ್ಬರಿ 15 ಕಡೆ ಹಲ್ಲೆ ಮಾಡಿರುವುದು ಪತ್ತೆಯಾಗಿದೆ. ಮೂಗು, ಕಾಲು, ತಲೆ, ಬೆನ್ನು, ದವಡೆ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಗಾಯಗಳು ಪತ್ತೆಯಾಗಿವೆ ಅಂತ ವೈದ್ಯರು ಮಾಹಿತಿ ನೀಡ್ದಾದರೆ. ಕಬ್ಬಿಣದ ರಾಡು ಮತ್ತು ಕಟ್ಟಿಗೆಯಿಂದ ಹಲ್ಲೆಯಾಗಿರೋ ಬಗ್ಗೆ ವೈದ್ಯರು ಶಂಕಿಸಿದ್ದಾರೆ.

ಏನಿದು ಘಟನೆ..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿಮಾನಿಯ ಮೇಲೆ ಹಲ್ಲೆ ಹಾಗೂ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಪೊಲೀಸರು FIR ದಾಖಲಿಸಿಕೊಂಡು ​ನಟ ದರ್ಶನ್​​, ನಟಿ ಪವಿತ್ರ ಗೌಡ ಸೇರಿ ಒಟ್ಟು 13 ಆರೋಪಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ ರೇಣುಕಾಸ್ವಾಮಿ ಚಿತ್ರದುರ್ಗ ಮೂಲದವನಾಗಿದ್ದು, ನಟ ದರ್ಶನ್​ನ ಪಕ್ಕಾ ಅಭಿಮಾನಿಯಾಗಿದ್ದನು ಎಂದು ಹೇಳಲಾಗುತ್ತಿದೆ. ನಟ ದರ್ಶನ್​ ಮತ್ತು ಪತ್ನಿ ವಿಜಯಲಕ್ಷ್ಮೀ ನಡುವೆ ಪವಿತ್ರಾ ಗೌಡ ಬಂದ ಸಂಬಂಧ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್​ ಮಾಡಿದ್ದನಂತೆ.

ಈ ವಿಚಾರವನ್ನು ಪವಿತ್ರಾ ಗೌಡ ದರ್ಶನ್​ ಬಳಿ ಹೇಳಿಕೊಂಡಿದ್ದು, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿಕೊಂಡು ಬಳಿಕ ಆತನಿಗೆ ದರ್ಶನ್​ ಮತ್ತು ಆತನ ಸ್ನೇಹಿತರು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಮಾನುಷವಾಗಿ ಥಳಿಸಿದ್ದಾರೆ. ಥಳಿಸಿದ ಏಟಿಗೆ ಯುವಕ ಸಾವನ್ನಪ್ಪಿದ್ದಾನೆ. ನಂತರ ಮೃತದೇಹವನ್ನು ಸುಮನಹಳ್ಳಿ ಮೋರಿ ಬಳಿ ತಂದು ಎಸೆದಿದ್ದಾರೆ. ಕೊಲೆಯಾದ ಅಭಿಮಾನಿ ರೇಣುಕಾಸ್ವಾಮಿ ಚಿತ್ರದುರ್ಗ ನಗರದ VRS ಬಡಾವಣೆಯ ನಿವಾಸಿ. ಕೆಇಬಿ ನಿವೃತ್ತ ನೌಕರ ಕಾಶಿನಾಥ್ ಶಿವಣ್ಣ ಗೌಡರ್, ರತ್ನಪ್ರಭಾ ಅವರ ಪುತ್ರ ರೇಣುಕಾಸ್ವಾಮಿ. 2023 ಜೂನ್ 28ರಂದು ರೇಣುಕಾಸ್ವಾಮಿ ವಿವಾಹ ಆಗಿದ್ದ. ಮದುವೆಯಾಗಿ ವರ್ಷ ತುಂಬುವ ಮುನ್ನವೇ ರೇಣುಕಾಸ್ವಾಮಿ ಕೊಲೆಯಾಗಿದ್ದಾನೆ. ಇನ್ನು, ಕೊಲೆಯಾದ ರೇಣುಕಾಸ್ವಾಮಿ ಮೃತದೇಹವು ಸತ್ವ ಅನುಗ್ರಹ ಅಪಾರ್ಟ್​ಮೆಂಟ್​ನ ಮುಂಭಾಗದಲ್ಲಿರುವ ಮೋರಿಯಲ್ಲಿ ಪತ್ತೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ದೇಹದ 15 ಕಡೆ ಕ್ರೂರ ಹಲ್ಲೆ.. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ರಹಸ್ಯಗಳು ಬಯಲು; ಏನದು?

https://newsfirstlive.com/wp-content/uploads/2024/06/darshan1.jpg

Load More