Advertisment

ನನ್ನ ಸೆಲೆಬ್ರಿಟಿಗಳು ನನಗೆ ಮುಖ್ಯ.. ಜೈಲಲ್ಲೂ ಅಭಿಮಾನಿಗಳನ್ನು ಮರೆಯದ ದರ್ಶನ್; ಧನ್ವೀರ್ ಹೇಳಿದ್ದೇನು?

author-image
Veena Gangani
Updated On
ನನ್ನ ಸೆಲೆಬ್ರಿಟಿಗಳು ನನಗೆ ಮುಖ್ಯ.. ಜೈಲಲ್ಲೂ ಅಭಿಮಾನಿಗಳನ್ನು ಮರೆಯದ ದರ್ಶನ್; ಧನ್ವೀರ್ ಹೇಳಿದ್ದೇನು?
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅಂಡ್​ ಗ್ಯಾಂಗ್​ ಜೈಲುವಾಸ
  • ’ದರ್ಶನ್​ ಅಣ್ಣಗೆ ಅಭಿಮಾನಿಗಳ ಮೇಲಿರೋ ಕಾಳಜಿ ಕಿಂಚಿತ್ತೂ ಕಡಿಮೆ ಆಗಿಲ್ಲ’
  • ಪತ್ನಿ, ಮಗ, ನಟಿ ರಕ್ಷಿತಾ, ನಿರ್ದೇಶಕ ಪ್ರೇಮ್​ ಬಳಿಕ ಜೈಲಿಗೆ ಭೇಟಿ ಕೊಟ್ಟ ಧನ್ವೀರ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅಂಡ್​ ಗ್ಯಾಂಗ್​ ಅರೆಸ್ಟ್‌ ಆಗಿ ಇಂದಿಗೆ ಒಂದು ತಿಂಗಳು ಭರ್ತಿಯಾಗಿದೆ. ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ಮೇಲೆ ಪತ್ನಿ, ಮಗ, ಅಕ್ಕ, ಬಾವ, ಅಕ್ಕನ ಮಗ ಸೇರಿದಂತೆ ರಕ್ಷಿತಾ ಪ್ರೇಮ್​, ನಟ ನಿರ್ದೇಶಕ ಪ್ರೇಮ್ ಸೇರಿದಂತೆ ಹಲವರು ಭೇಟಿ ನೀಡುತ್ತಿದ್ದಾರೆ.

Advertisment

publive-image

ಇದನ್ನೂ ಓದಿ:ಕೊಚ್ಚೆ ಮೇಲೆ ಕಲ್ಲು ಹಾಕಬಾರದು ಎಂದ ದಿವ್ಯಾ ಸುರೇಶ್​.. ದರ್ಶನ್​ ಪ್ರಕರಣದ ಬಗ್ಗೆ ಹೀಗಂದ್ರಾ?

ದರ್ಶನ್​ನನ್ನು ನೋಡಲು ಇಂದು ನಟ ಧನ್ವೀರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ದರ್ಶನ್​ನನ್ನು ಭೇಟಿಯಾದ ಬಳಿಕ ಮಾತಾಡಿದ ಅವರು. ದರ್ಶನ್ ಅವರನ್ನು ಭೇಟಿ ಮಾಡಿದೆ. ಆರಾಮಾಗಿ ಇದ್ದಾರೆ. ಅವರ ಜೊತೆ ಕೆಲವೊಂದು ವಿಚಾರದ ಬಗ್ಗೆ ಮಾತನಾಡಿದ್ದೇನೆ. ಆದ್ರೆ ಕೆಲವೊಂದು ಇರುತ್ತೆ ಹೇಳಿಕೊಳ್ಳಲು ಆಗುವುದಿಲ್ಲ ಅಂತ ಹೇಳಿದ್ರು.

publive-image

ಇದನ್ನೂ ಓದಿ:ಇಂದು ವಿಶ್ವ ಜನಸಂಖ್ಯಾ ದಿನಾಚರಣೆ.. 35ನೇ ವರ್ಷಕ್ಕೆ  10ನೇ ಮಗುವಿಗೆ ಜನ್ಮ ನೀಡಿದ ತಾಯಿ!

Advertisment

ಇನ್ನು, ದರ್ಶನ್​ ಅವರಿಗೆ ಅಭಿಮಾನಿಗಳ ಮೇಲಿನ ಕಾಳಜಿ ಕಿಂಚಿತ್ತೂ ಕಡಿಮೆ ಆಗಿಲ್ಲ. ಅದೇ ಹಳೆಯ ದರ್ಶನ್ ನಾವು ನೋಡಿದ್ದೇವೆ. ಯಾರೂ ಕುಗ್ಗುವಂತಹ ಪ್ರಶ್ನೆ ಇಲ್ಲ ಅದೇ ಜೋಶ್​ನಲ್ಲಿ ಇದ್ದಾರೆ. ನಾನು ಹಲವಾರು ದಿನದಿಂದ ಹೇಳಬೇಕು ಎಂದುಕೊಂಡಿದ್ದೆ. ಸುಮಾರು ಕಡೆ ನಟ ಧನ್ವಿರ್ ಮಾತನಾಡುತ್ತಿಲ್ಲ ಎನ್ನುತ್ತಿದ್ದರು. ಇದು ಮಾತನಾಡುವ ಸನ್ನಿವೇಶ ಅಲ್ಲ. ನಾನು ವಿದ್ಯಾವಂತನಾಗಿ ನ್ಯಾಯಾಂಗ ಬಂಧನದಲ್ಲಿರುವಾಗ ಮಾತನಾಡಬಾರದು. ಕಾನೂನು ಇದೆ ಪೊಲೀಸ್ ಇದೆ ಅವರ ಕೆಲಸ ಮಾಡ್ತಾರೆ. ನಾನು ಮಾತನಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ತಪ್ಪಾಗಿರಲಿ ಆಗಿಲ್ಲದೆ ಇರಲಿ ಭಗವಂತನಿಗೆ ಗೊತ್ತು. ಇಂದು ಮುಂದು ಎಂದೆಂದಿಗೂ ದರ್ಶನ್ ನಮ್ಮ ಅಣ್ಣ ಅಂತಾ ಹೇಳುವುದಕ್ಕೆ ಹಿಂಜರಿಯುವುದಿಲ್ಲ. ಖಂಡಿತವಾಗಿ ತಪ್ಪು ಮಾಡಿದ್ದರೆ ದರ್ಶನ್​ ಅವರಿಗೆ ಶಿಕ್ಷೆಯಾಗಲಿ. ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆರಾಮವಾಗಿ ಇರಿ ಸಿನಿಮಾ ಶೂಟಿಂಗ್ ಆರಂಭ ಮಾಡಿ ಅಂದ್ರು. ಆದ್ರೆ ನಮಗೆ ಬೇಜಾರು ಇದೆ. ನಾವು ಜೈಲಿನಲ್ಲಿ ನೋಡ್ತಿವಿ ಅಂತಾ ನಿರೀಕ್ಷೆ ಮಾಡಿರಲಿಲ್ಲ. ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆ ಯಾವುದೇ ಮಾತುಕತೆ ‌ನಡೆದಿಲ್ಲ. ಎಲ್ಲಾ ಅಭಿಮಾನಿಗಳು ಆರಾಮವಾಗಿ ಇರಿ ಚಾಮುಂಡೇಶ್ವರಿ ತಾಯಿ ಒಳ್ಳೆಯದು ಮಾಡ್ತಾಳೆ ಅಂತ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment