Advertisment

ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!

author-image
Ganesh
Updated On
ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!
Advertisment
  • ಧ್ರುವ ಸರ್ಜಾ ಜೊತೆ ಹತ್ತಿರವಾಗಿರೋದಕ್ಕೆ ನಡೆಯಿತಾ ಅಟ್ಯಾಕ್?
  • ತನಿಖೆಗೆ ಇಳಿದ ಬನಶಂಕರಿ ಪೊಲೀಸರಿಗೆ ಅಸಲಿ ಸತ್ಯ ಗೊತ್ತಾಗಿದೆ
  • ಕನಕಪುರ ಮೂಲದ ಹರ್ಷ, ಸುಭಾಷ್ ವಿರುದ್ಧ ಹಲ್ಲೆ ಆರೋಪ

ಬೆಂಗಳೂರು: ನಟ ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

Advertisment

ಕಳೆದ ಮೇ 26 ರಂದು ರಾತ್ರಿ ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆಯಾಗಿತ್ತು. ಧ್ರುವಾ ಸರ್ಜಾ ಅವರ ಮನೆಯಿಂದ ತೆರಳುತ್ತಿದ್ದ ವೇಳೆ ಹಲ್ಲೆ ನಡೆದಿತ್ತು. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಸ್ವತಃ ಧ್ರುವ ಸರ್ಜಾ ಅವರೇ ದಕ್ಷಿಣ ವಿಭಾಗದ ಡಿಸಿಪಿಗೆ ಕರೆ ಮಾಡಿ, ತಪ್ಪಿತಸ್ಥರ ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ:ಮೂರು ಕ್ಯಾಚ್.. ಮೂರು ವಿಶ್ವಕಪ್.. ಇವರು ಹಿಡಿದಿದ್ದು ಬರೀ ಕ್ಯಾಚ್ ಅಲ್ಲ, ವಿಶ್ವ ಕಿರೀಟ..!

ತನಿಖೆಗೆ ಇಳಿದ ಬನಶಂಕರಿ ಪೊಲೀಸರಿಗೆ ಅಸಲಿ ಸತ್ಯ ಗೊತ್ತಾಗಿದೆ ಎನ್ನಲಾಗಿದೆ. ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿದ್ದು ಹರ್ಷ ಮತ್ತು ಸುಭಾಷ್ ಎಂಬ ಆರೋಪಿಗಳು. ಆದರೆ ಹಲ್ಲೆ ಮಾಡಿಸಿದ್ದು ಮಾತ್ರ ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿರುವ ನಾಗೇಂದ್ರ ಎಂಬ ಆರೋಪ ಕೇಳಿ ಬಂದಿದೆ. ಆರೋಪಿ ನಾಗೇಂದ್ರ ಧ್ರುವ ಸರ್ಜಾ ಅವರಿಗೆ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದಾನೆ ಎನ್ನಲಾಗಿದೆ.

Advertisment

ಇದನ್ನೂ ಓದಿ:ವಿಶ್ವಕಪ್ ಫೈನಲ್ ಕ್ಯಾಚ್ ವಿವಾದಕ್ಕೆ ಟ್ವಿಸ್ಟ್.. ದೊಡ್ಡ ಹೇಳಿಕೆ ಕೊಟ್ಟ ದಕ್ಷಿಣ ಆಫ್ರಿಕಾ ಆಟಗಾರ

ಪ್ರಶಾಂತ್ ಪೂಜಾರಿ ಇತ್ತೀಚೆಗೆ ಧ್ರುವ ಸರ್ಜಾಗೆ ತುಂಬಾ ಆಪ್ತರಾಗಿದ್ದರು. ಇದು ನಾಗೇಂದ್ರನಿಗೆ ಸಹಿಸಿಕೊಳ್ಳಲು ಆಗ್ತಿರಲಿಲ್ಲ. ತಾನು ಹಲ್ಲೆ ಮಾಡಿದರೆ ಗೊತ್ತಾಗುತ್ತದೆ ಎಂದು ಸ್ನೇಹಿತರ ಕೈಯಲ್ಲಿ ಹಲ್ಲೆ ಮಾಡಿಸಿದ್ದಾನೆ ಎಂಬ ಆರೋಪ ಇದೆ. ತಮ್ಮೂರಿನ ಹುಡುಗರನ್ನು ಬಿಟ್ಟು ಹಲ್ಲೆ ಮಾಡಿಸಿರುವ ಆರೋಪ ನಾಗೇಂದ್ರ ವಿರುದ್ಧ ಕೇಳಿಬಂದಿದೆ. ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಅವರು ಹಲ್ಲೆ ಮಾಡಿದ್ದಾರೆ. ಸದ್ಯ ಈ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ.

ಇದನ್ನೂ ಓದಿ:ಮೂರು ಕ್ಯಾಚ್.. ಮೂರು ವಿಶ್ವಕಪ್.. ಇವರು ಹಿಡಿದಿದ್ದು ಬರೀ ಕ್ಯಾಚ್ ಅಲ್ಲ, ವಿಶ್ವ ಕಿರೀಟ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment