ಈ ಕ್ಯಾಚ್ಗಳಲ್ಲಿ ಅಡಗಿತ್ತು ವಿಶ್ವ ಚಾಂಪಿಯನ್ ಕಿರೀಟ
ಭಾರತವನ್ನ ಚಾಂಪಿಯನ್ ಮಾಡಿದ್ದೇ ಕ್ಯಾಚ್ಗಳು..!
ಕ್ಯಾಚ್ ಹಿಡಿದು ವಿಶ್ವಕಪ್ ಗೆಲ್ಲಿಸಿದ ವೀರರು ಇವರು
ಕ್ಯಾಚಸ್ ವಿನ್ ದಿ ಮ್ಯಾಚಸ್.. ಬಹು ಕಾಲದಿಂದ ಕ್ರಿಕೆಟ್ ಅನ್ನೋ ಜಂಟಲ್ಮನ್ ಗೇಮ್ನಲ್ಲಿ ಚಾಲ್ತಿಯಲ್ಲಿರೋ ಮಾತಿದು. ಟೀಮ್ ಇಂಡಿಯಾ ವಿಚಾರದಲ್ಲಂತೂ ಈ ಮಾತು ಪದೇ ಪದೆ ಸತ್ಯ ಅನ್ನೋದು ಪ್ರೂವ್ ಆಗಿದೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ ಮೂರು ಬಾರಿ ಕ್ಯಾಚ್ಗಳು ಕೋಟ್ಯಂತರ ಅಭಿಮಾನಿಗಳ ಕನಸು ನನಸು ಮಾಡಿದೆ. ಅವು ಜಸ್ಟ್ ಕ್ಯಾಚ್ ಆಗಿರಲಿಲ್ಲ. ಐಸಿಸಿ ಟ್ರೋಫಿಗಳೇ ಆಗಿವೆ!
ಟೀಮ್ ಇಂಡಿಯಾ 2ನೇ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿದೆ. ರಣ ರೋಚಕ ಫೈನಲ್ನಲ್ಲಿ ಟೀಮ್ ಇಂಡಿಯಾ ಸೋಲಿನ ಹಾದಿ ತುಳಿದಿತ್ತು. ಕೊನೆ ಐದು ಓವರ್ಗಳಲ್ಲಿ ಕಮ್ಬ್ಯಾಕ್ ಮಾಡಿದ ಟೀಮ್ ಇಂಡಿಯಾ, ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಯ್ತು. ಟೀಮ್ ಇಂಡಿಯಾದ ಕಮ್ಬ್ಯಾಕ್ ರೋಲ್ ಪ್ಲೇ ಮಾಡಿದ್ದು ಆ ಒಂದು ಕ್ಯಾಚ್.
ಇದನ್ನೂ ಓದಿ:ವಿಶ್ವದ ಮೊಟ್ಟ ಮೊದಲ ಕೇಸ್.. ರೋಬೋಟ್ ಆತ್ಮಹತ್ಯೆಗೆ ಶರಣು..!
ಸೂರ್ಯ ಹಿಡಿದಿದ್ದು ಕ್ಯಾಚ್ ಅಲ್ಲ.. ವಿಶ್ವಕಪ್
ಕೊನೆ ಐದು ಓವರ್ಗಳಲ್ಲಿ ಟೀಮ್ ಇಂಡಿಯಾ ಕಮ್ಬ್ಯಾಕ್ ಮಾಡಿದ ರೀತಿ ಒಂದು ಅದ್ಭುತವಾದರೆ 20ನೇ ಓವರ್ನ ಮೊದಲ ಎಸೆತದಲ್ಲಿ ಸಿಕ್ಸ್ ಹೋಗಬೇಕಿದ್ದ ಚೆಂಡನ್ನು ಸೂರ್ಯ ಕ್ಯಾಚ್ ಹಿಡಿದಿದ್ದು ಮತ್ತೊಂದು ಅದ್ಭುತ. ಕ್ರೀಸ್ನಲ್ಲಿ ಇದಿದ್ದು ಡೇಂಜರಸ್ ಕಿಲ್ಲರ್ ಮಿಲ್ಲರ್. ಸೂರ್ಯ ಸ್ವಲ್ಪ ಯಾಮಾರಿ ಮಿಲ್ಲರ್ ಕ್ಯಾಚ್ ಡ್ರಾಪ್ ಮಾಡಿದ್ರೆ ಟಿ20 ವಿಶ್ವಕಪ್ ಮಿಸ್ ಆಗೋ ಸಾಧ್ಯತೆ ದಟ್ಟವಾಗಿತ್ತು.
2024 ಚುಟುಕು ವಿಶ್ವಕಪ್ ಮಾತ್ರವಲ್ಲ. ಈ ಹಿಂದಿನ 1983 ಏಕದಿನ ವಿಶ್ವಕಪ್ ಹಾಗೂ 2007 ಟಿ20 ವಿಶ್ವಕಪ್ನಲ್ಲೂ ಟೀಮ್ ಇಂಡಿಯಾನ ಚಾಂಪಿಯನ್ ಮಾಡಿದ್ದು ಆ ಎರಡು ಕ್ರೂಶಿಯಲ್ ಕ್ಯಾಚ್ಗಳೇ.
2007ರ ಟಿ20 ವಿಶ್ವಕಪ್ ಕ್ಯಾಚ್ ಹಿಡಿದ ಶ್ರೀಶಾಂತ್
2007ರ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿ ಅದು. ಈ ಟಿ20 ವಿಶ್ವಕಪ್ನಲ್ಲಿ ಧೋನಿ ನೇತೃತ್ವದ ಟೀಮ್ ಇಂಡಿಯಾ, ವಿಶ್ವ ಕಿರೀಟಕ್ಕೆ ಮುತ್ತಿಟ್ಟಿತ್ತು. ಅಂದಿನ ಪಾಕಿಸ್ತಾನ ಎದುರಿನ ಫೈನಲ್ ಪಂದ್ಯ ರಣರೋಚಕತೆಯಿಂದ ಕೂಡಿತ್ತು. ಏಕಾಂಗಿ ಹೋರಾಟ ನಡೆಸಿದ್ದ ಮಿಸ್ಬಾ ಉಲ್ ಹಕ್, ಪಾಕ್ಗೆ ವಿಶ್ವ ಕಿರೀಟ ತೊಡಿಸುವ ಉತ್ಸಾಹದಲ್ಲಿದ್ದರು.
ಇದನ್ನೂ ಓದಿ:ವಿಶ್ವಕಪ್ ಗೆಲುವಿನ ಹಿಂದೆ ಕೆಲಸ ಮಾಡಿದ್ದು ಜೋಡೆತ್ತುಗಳ ಬಾಂಡಿಂಗ್.. ಹೃದಯ ಗೆದ್ದ ಸ್ನೇಹಿತರು ಇವರು..!
ಕೊನೆಯ ಓವರ್ನಲ್ಲಿ ಸ್ಟ್ರೈಕ್ನಲ್ಲಿದ್ದ ಮಿಸ್ಬಾ ಮೊದಲ ಎರಡು ಎಸೆತಗಳಿಂದ 6 ರನ್ ಕಲೆ ಹಾಕಿದ್ರು. ಇನ್ನುಳಿದ 4 ಎಸೆತಗಳಲ್ಲಿ 6 ರನ್ ಗಳಿಸಬೇಕಿದ್ದ ಸವಾಲು ಮಿಸ್ಟಾ ಮುಂದಿತ್ತು. ಆಗ, ಸ್ಕೂಪ್ ಶಾಟ್ ಹೊಡೆಯಲು ಯತ್ನಿಸಿದ್ರು. ಶಾರ್ಟ್ ಫೈನ್ ಲೆಗ್ನಲ್ಲಿ ಫೀಲ್ಡಿಂಗ್ ಮಾಡ್ತಿದ್ದ ಶ್ರೀಶಾಂತ್, ಕ್ಯಾಚ್ ಹಿಡಿದು ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದರು.
ಕಪಿಲ್ ದೇವ್ ಹಿಡಿದ ಕ್ಯಾಚ್ಗೆ ಸಿಕ್ಕಿತ್ತು ಚೊಚ್ಚಲ ವಿಶ್ವಕಪ್
ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಏಕದಿನ ವಿಶ್ವಕಪ್ ಗೆದ್ದಿದ್ದು. ಅಂದು ದೈತ್ಯ ವೆಸ್ಟ್ ಇಂಡೀಸ್ ಸವಾಲು ಎದುರಿಸಿದ್ದ ಟೀಮ್ ಇಂಡಿಯಾ ಗೆಲ್ಲುತ್ತೆ ಅನ್ನೋ ನಿರೀಕ್ಷೆಯೇ ಇರಲಿಲ್ಲ. ಭಾರತ ನೀಡಿದ್ದ 184 ರನ್ಗಳ ಗುರಿ ಅಂದಿನ ಬಲಾಢ್ಯ ವೆಸ್ಟ್ ಇಂಡೀಸ್ಗೆ ಬಿಗ್ ಟಾಸ್ಕ್ ಆಗಿರಲಿಲ್ಲ.
ಆ ಪಂದ್ಯದಲ್ಲಿ ಕ್ರೀಸ್ನಲ್ಲಿದ್ದ ವಿವಿಯನ್ ರಿಚರ್ಡ್ಸ್ 27 ಎಸೆತಗಳಲ್ಲೇ 33 ರನ್ ಸಿಡಿಸಿ ಗೇಮ್ ಫೀನಿಷ್ ಮಾಡೋ ಉತ್ಸಾಹದಲ್ಲಿದ್ರು. ಮದನ್ ಲಾಲ್ ಬೌಲಿಂಗ್ನಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿ ಕೆಟ್ರು. ರಿಚರ್ಡ್ಸ್ ಹೊಡೆದ ಬಿಗ್ ಶಾಟ್ ಅನ್ನ ಹಿಂಬದಿಯಾಗಿ ಓಡಿದ್ದ ಕಪಿಲ್ ದೇವ್ ಕ್ಯಾಚ್ ಆಗಿ ಪರಿವರ್ತಿಸಿದ್ರು. ಈ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತ್ತು. ಭಾರತಕ್ಕೆ ವಿಶ್ವ ಕಿರೀಟ ಒಲಿದಿತ್ತು.
ಇದನ್ನೂ ಓದಿ:ಫ್ರಿಡ್ಜ್ ಮುಟ್ಟುವ ಮುನ್ನ ಹುಷಾರ್.. ವಿದ್ಯುತ್ ಶಾಕ್ ಹೊಡೆದು ತಾಯಿ-ಮಗಳು ದಾರುಣ ಸಾವು
ಮೂರು ಅದ್ಭುತ ಕ್ಯಾಚ್ಗಳು, ಮೂರು ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾದ ಗೆಲುವಿಗೆ ಕಾರಣವಾಗಿದೆ. ಮೂರೂ ಪಂದ್ಯಗಳಲ್ಲಿ ಸೋಲಿನ ಹಂತ ತಲುಪಿದ್ದ ಟೀಮ್ ಇಂಡಿಯಾ, ವಿಶ್ವಕಪ್ ಗೆದ್ದು ಬೀಗಿದೆ. ಈ ಉದಾಹರಣೆಯನ್ನ ನೋಡಿದ ಮೇಲೆ ಕ್ಯಾಚಸ್ ವಿನ್ ಮ್ಯಾಚಸ್ ಅನ್ನೋ ಮಾತನ್ನ ಒಪ್ಪದೆ ಇರೋಕಾಗುತ್ತಾ?
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್