newsfirstkannada.com

ವಿಶ್ವಕಪ್ ಗೆಲುವಿನ ಹಿಂದೆ ಕೆಲಸ ಮಾಡಿದ್ದು ಜೋಡೆತ್ತುಗಳ ಬಾಂಡಿಂಗ್.. ಹೃದಯ ಗೆದ್ದ ಸ್ನೇಹಿತರು ಇವರು..!

Share :

Published July 4, 2024 at 10:04am

  ಭಲೇ ಜೋಡೆತ್ತುಗಳ ಬಾಂಧವ್ಯಕ್ಕೆ ಕ್ರಿಕೆಟ್ ಲೋಕ ಫಿದಾ..!

  ಇಂತಹ ಬಾಂಡಿಂಗ್​​​​ ಮತ್ತೆಂದೂ ನೋಡಲು ಸಾಧ್ಯವಿಲ್ಲ

  ಕ್ರೆಡಿಟ್​​ ಬಯಸಲ್ಲ, ತಂಡದ ಹಿತವೇ ಇಬ್ಬರಿಗೂ ಮುಖ್ಯ

ಬಾಂಡಿಂಗ್ ಅಂದ್ರೆ ಇದಪ್ಪಾ..! ಇದ್ದರೆ ಇವರ ಥರಾ ಬಾಂಡಿಂಗ್ ಇರಬೇಕು ಕಣ್ರಿ. ಸ್ಟಾರ್​ಡಮ್​​ ತಲೆಗೇರಿಲ್ಲ. ಕಷ್ಟದ ಟೈಮ್​ ಅಲ್ಲು ಒಬ್ಬರನ್ನ ಒಬ್ಬರು ಬಿಟ್ಟು ಕೊಡಲ್ಲ. ಒಂದೇ ಮಾತಲ್ಲ ಹೇಳಬೇಕಂದರೆ, ಈ ಸ್ಟಾರ್​ ಜೋಡಿ ಬಾಂಡಿಂಗ್​​​ ಮುಂದೆ ಮತ್ಯಾವ ಬಾಂಡಿಂಗ್ ಕೂಡ ಅಮುಖ್ಯ ಅನ್ನಿಸುತ್ತೆ. ಅಂತಹ ಬಾಂಡಿಂಗ್​ ಟೀಮ್ ಇಂಡಿಯಾದ ಆ ಇಬ್ಬರು ಆಟಗಾರರಲ್ಲಿ ಇರೋದು ಇನ್ನೂ ಜಾಸ್ತಿ ಖುಷಿಯಾಗುತ್ತೆ.

ಹೌದು.. ವಿಶ್ವಕಪ್ ಗೆಲುವಿನ ಜೊತೆಗೆ ಕಿಂಗ್ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಬಾಂಡಿಂಗ್​ ಬಗ್ಗೆ ಹೆಚ್ಚು ಪ್ರಶಂಸೆ ವ್ಯಕ್ತವಾಗ್ತಿದೆ. ವಿಶ್ವಕಪ್​ ಗೆದ್ದ ವೇಳೆ ಈ ಜೋಡಿಯ ಬಾಂಡಿಂಗ್​​​​​​​​​ ಎಲ್ಲರ ಹೃದಯ ಸ್ಪರ್ಶಿಸಿದೆ.

ಇದನ್ನೂ ಓದಿ:ದ್ರಾವಿಡ್ ನಿವೃತ್ತಿ, ಗಂಭೀರ್ ಬಗ್ಗೆ ಮಾಹಿತಿ ಇಲ್ಲ.. ಜಿಂಬಾಬ್ವೆ ಪ್ರವಾಸದಲ್ಲಿರುವ ಕೋಚ್ ಯಾರು?

ತಬ್ಬಿಕೊಂಡು ಕಣ್ಣೀರು ಹಾಕಿದ ರೋಹಿತ್​​​-ಕೊಹ್ಲಿ
ಫೈನಲ್​​​​​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುತ್ತಿದ್ದಂತೆ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಭಾವುಕರಾಗಿದ್ರು. ಖುಷಿ ತಡೆಯಲಾರದೇ ಆನಂದಭಾಷ್ಪ ಹರಿಸಿದರು. ಕ್ಯಾಪ್ಟನ್ ರೋಹಿತ್​​​ ಕಣ್ಣಲ್ಲೂ ನೀರು ಜಿನಿಗಿತ್ತು. ಡ್ರೆಸ್ಸಿಂಗ್ ರೂಮ್ ಬಳಿ ಭಾವುಕರಾಗಿ ನಿಂತಿದ್ದ, ರೋಹಿತ್​ರನ್ನ ತಬ್ಬಿಕೊಂಡು ಕಿಂಗ್ ಕೊಹ್ಲಿ ಕೂಡ ಕಣ್ಣೀರು ಹಾಕಿದರು.

ಭಾರತದ ಬಾವುಟ ಹಿಡಿದು ಒಟ್ಟಿಗೆ ಪೋಸ್
ಟಿ20 ವಿಶ್ವಕಪ್​​ನಲ್ಲಿ ಭಾರತಕ್ಕೆ ಗೆಲುವು ಖಚಿತವಾಗ್ತಿದ್ದಂತೆ ಆಟಗಾರರೆಲ್ಲರೂ ಭಾರತದ ಬಾವುಟ ಹಿಡಿದು ಮೈದಾನಪೂರ್ತಿ ಓಡಾಡಿದ್ರು. ಇದೇ ವೇಳೆ ವಿರಾಟ್​ ಕೊಹ್ಲಿ, ಕ್ಯಾಪ್ಟನ್ ರೋಹಿತ್​ ಜೊತೆಗೆ ಫೋಟೋ ಕೇಳಿದ್ರು. ಬಳಿಕ ಭುಜದ ಮೇಲೆ ಭಾರತದ ಭಾವುಟ ಹಾಕಿಕೊಂಡು ರೋಹಿತ್​​, ಕೊಹ್ಲಿ ಜೊತೆಗೂಡಿ ವಿಶ್ವಕಪ್ ಟ್ರೋಫಿ ಹಿಡಿದು ಫೋಟೋಗೆ ಪೋಸ್​ ನೀಡಿದರು. ಈ ವಿಶ್ವಕಪ್​ನ ಹಲ ಪಂದ್ಯಗಳಿಗೂ ಮುನ್ನ ನಾಯಕ ರೋಹಿತ್​ ಬದಲಾಗಿ ವಿರಾಟ್​ ಕೊಹ್ಲಿ ಪೆಪ್​ ಟಾಕ್ ಮಾಡಿದ್ರು. ಆಟಗಾರರನ್ನ ಹುರಿದುಂಬಿಸಿದ್ದರು. ನಿಜ ಹೇಳಬೇಂಕದ್ರೆ ಬಹುತೇಕ ನಾಯಕರೇ ಈ ಕೆಲಸವನ್ನ ನಿಭಾಯಿಸ್ತಾರೆ. ರೋಹಿತ್​ ಕೊಹ್ಲಿಗೆ ಈ ಅವಕಾಶ ನೀಡಿದರು. ಕೊಹ್ಲಿ ಹುರಿದುಂಬಿಸಿದ ರೀತಿ ಭಾರತದ ವಿಶ್ವಕಪ್ ಗೆಲುವಿಗೆ ಕಾರಣವಾಗಿದೆ ಅಂದ್ರು ತಪ್ಪಲ್ಲ.

ಇದನ್ನೂ ಓದಿ:ಕೊಹ್ಲಿ, ರೋಹಿತ್​, ಜಡೇಜಾ ಆಯ್ತು.. ಮತ್ತೆ ನಾಲ್ವರು ಆಟಗಾರರು ಗುಡ್​ಬೈ ಹೇಳಲು ತಯಾರಿ..!

ಒಬ್ಬರನ್ನೊಬ್ಬರು ಬಿಟ್ಟುಕೊಡದ ‘RO-KO’ ಜೋಡಿ..!
ಕೊಹ್ಲಿ ಹಾಗೂ ರೋಹಿತ್​​​​ ಬಾಂಡಿಂಗ್ ಅದ್ಯಾವ ಮಟ್ಟಿಗೆ ಗಟ್ಟಿ ಆಗಿತ್ತಂದ್ರೆ, ಒಬ್ಬರನ್ನೊಬ್ಬರು ಬಿಟ್ಟು ಕೊಡ್ತಿರ್ಲಿಲ್ಲ. ಕೊಹ್ಲಿ ಫೇಲ್ಯೂರ್​ ಕಂಡಾಗಲೆಲ್ಲಾ ರೋಹಿತ್​​​​​​​ ಸೆಂಚುರಿ ಸಾಮ್ರಾಟನ ಪರ ಬ್ಯಾಟ್ ಬೀಸಿದ್ರು. ಫೈನಲ್​ಗಾಗಿ ರನ್​ ಇಟ್ಟುಕೊಂಡಿದ್ದಾರೆ. ರೋಹಿತ್​ರ ನಂಬಿಕೆಯನ್ನು ಕೊಹ್ಲಿ ಸುಳ್ಳಾಗಿಸಲಿಲ್ಲ.

ಯಂಗ್​​ಸ್ಟರ್ಸ್​ಗೆ ಇವರೇ ದೊಡ್ಡಣ್ಣ..!
ವಿಶ್ವಕಪ್​​ ತಂಡದಲ್ಲಿದ್ದ ಯುವ ಆಟಗಾರರಿಗೆ ರೋಹಿತ್ ಶರ್ಮಾ ಹಾಗೂ ಕಿಂಗ್ ಕೊಹ್ಲಿಯೇ ದೊಡ್ಡಣ್ಣ. ಈ ವಿಶ್ವಕಪ್​ ಟೂರ್ನಿಯಲ್ಲಿ ಇವರಿಬ್ಬರು ಮೇಜರ್ ರೋಲ್​ ಪ್ಲೇ ಮಾಡಿದರು. ಸಲಹೆ-ಸೂಚನೆಗಳನ್ನ ಕೊಡ್ತಾ ತಂಡವನ್ನ ಗೆಲುವಿನ ದಡ ಸೇರಿಸಿದ್ರು.

ಇದನ್ನೂ ಓದಿ:ಟಿ20 ವಿಶ್ವಕಪ್​​ ಗೆದ್ದ ಬಳಿಕ ಕೊಹ್ಲಿ ಫುಲ್ ಚೇಂಜ್.. ರನ್ ಮಷಿನ್ ಹಿಂಗ್ಯಾಕೆ ಆದ್ರು ಅಂತಿದ್ದಾರೆ ಫ್ಯಾನ್ಸ್..!

ಕ್ರೆಡಿಟ್ ವಾರ್​ ಬಯಸಲ್ಲ..!
ರೋಹಿತ್​ ಹಾಗೂ ಕಿಂಗ್ ಕೊಹ್ಲಿ ಎಂದೂ ಕ್ರೆಡಿಟ್ ವಾರ್​ಗೆ ಪ್ರಾಮುಖ್ಯತೆ ಕೊಟ್ಟವರಲ್ಲ. ಇಬ್ಬರ ಗುರಿ ಒಂದೇ ತಂಡದ ಹಿತ. ಅದಕ್ಕಾಗಿ ಒಗ್ಗಟ್ಟಾಗಿ ಹೋರಾಟ ನಡೆಸ್ತಿದ್ರು. ಈ ಭಲೇ ಜೋಡಿಗಳ ಗುರಿ ಒಂದೇ ಆಗಿತ್ತು. ಟಿ20 ವಿಶ್ವಕಪ್ ಗೆಲ್ಲಿಸಿ ಕೊಡೋದು. ಕೊನೆಗೆ ಅದನ್ನು ಸಾಧಿಸಿ ತೋರಿಸಿದ್ದಾರೆ. ಕೊಹ್ಲಿ-ರೋಹಿತ್​​ರ ಈ ಗಟ್ಟಿ ಬಾಂಧವ್ಯಕ್ಕೆ ಯಾರ ಕಣ್ಣು ಬೀಳದಿರಲಿ. ಮುಂದೆಯೂ ಇವರಿಬ್ಬರ ಬಾಂಡಿಂಗ್ ಹೀಗೆ ಮುಂದುವರಿಯಲಿ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್ ಗೆಲುವಿನ ಹಿಂದೆ ಕೆಲಸ ಮಾಡಿದ್ದು ಜೋಡೆತ್ತುಗಳ ಬಾಂಡಿಂಗ್.. ಹೃದಯ ಗೆದ್ದ ಸ್ನೇಹಿತರು ಇವರು..!

https://newsfirstlive.com/wp-content/uploads/2024/07/ROHIT-22.jpg

Load More