/newsfirstlive-kannada/media/post_attachments/wp-content/uploads/2024/05/Dhruva-Sarja.jpg)
ಬೆಂಗಳೂರು: ಜಿಮ್​ ಟ್ರೈನರ್​ ಪ್ರಶಾಂತ್​ ಮೇಲಿನ ಹಲ್ಲೆಗೆ ಸಂಬಂಧಿಸಿ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ನ್ಯೂಸ್​​ಫಸ್ಟ್​ ಕನ್ನಡಗೆ ಪ್ರತಿಕ್ರಿಯಿಸಿದ್ದಾರೆ. ದಾಳಿ ನಡೆಸೋಕು ಮುನ್ನ ನನ್ನ ಮನೆಯಿಂದನೇ ಹೋಗಿದ್ದ ಎಂದು ಹೇಳಿದ್ದಾರೆ.
‘ಕಳೆದ ರಾತ್ರಿ ಘಟನೆ ನಡೆದಿದೆ. ನನ್ನ ಮನೆಯಿಂದನೇ ಹೋಗಿದ್ದ. ಮೊನ್ನೆ ಮಂತ್ರಾಲಯಕ್ಕೂ ನಾನೇ ಕಳಹುಸಿದ್ದೆ. ನಿನ್ನೆ ಬೆಳಗ್ಗೆಯಿಂದ ರಾತ್ರಿವರೆಗೂ ಇಲ್ಲೇ ಇದ್ದ. ತುಂಬಾ ವರ್ಷದಿಂದ ಪ್ರಶಾಂತ್ ನನ್ನ ಜೊತೆಯಲ್ಲಿದ್ದಾನೆ. ಮಾರ್ಗಮಧ್ಯೆ ಯಾರೋ ಹೊಡೆದಿದ್ದಾರೆ. ಅದು ಅವರ ಪರ್ಸನಲ್ ವಿಚಾರ. ನನಗೆ ಮಾಹಿತಿ ಗೊತ್ತಿಲ್ಲ’ ಎಂದು ನಟ ಧ್ರುವ ಸರ್ಜಾ ಪ್ರತಿಕ್ರಿಯಿಸಿದ್ದಾರೆ.
[caption id="attachment_66294" align="alignnone" width="800"]
ಜಿಮ್​ ಟ್ರೈನರ್​ ಪ್ರಶಾಂತ್​[/caption]
ಇದನ್ನೂ ಓದಿ: ಇದ್ದಕ್ಕಿದ್ದಂತೆಯೇ ಕುಸಿದ ಬೆಟ್ಟ.. 2000ಕ್ಕೂ ಅಧಿಕ ಜನರು ನೆಲ ಸಮಾಧಿ.. ಮೃತದೇಹಗಳಿಗಾಗಿ ಹುಡುಕಾಟ
ಬಳಿಕ ಮಾತು ಮುಂದುವರೆಸಿದ ನಟ, ‘ಫ್ಯಾಮಿಲಿ ಕಡೆಯಿಂದ ಕಂಪ್ಲೆಂಟ್ ಕೊಟ್ಟಿದ್ದಾರೆ. ತನಿಖೆ ಮಾಡಲಾಗ್ತಿದೆ. ಸತ್ಯ ಗೊತ್ತಾಗುತ್ತೆ. ದಾಳಿ ಉದ್ದೇಶ ಗೊತ್ತಿಲ್ಲ. ಫ್ಯಾನ್ಸ್ ವಾರ್ ಕಾರಣ ಅನ್ನೋದು ಸುಳ್ಳು. ಈ ಮುಂಚೆ ಅಟ್ಯಾಕ್ ಅಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಈ ರೀತಿಯ ಘಟನೆ ನಡೆಯಬಾರದು ಎಂದು ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಹೇಳಿದ್ದಾರೆ.
ಏನಿದು ಘಟನೆ?
ನಿನ್ನೆ ರಾತ್ರಿ ನಟ ಧ್ರುವ ಸರ್ಜಾ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಧ್ರುವ ಸರ್ಜಾ ಮನೆ ಹತ್ತಿರದ ಅಕ್ಷಯ್ ಆಸ್ಪತ್ರೆಯಲ್ಲಿ ಪ್ರಶಾಂತ್ ದಾಖಲಾಗಿದ್ದಾರೆ. ಸದ್ಯ ಅವರಿಗೆ ಟ್ರೀಟ್​ಮೆಂಟ್ ನೀಡಲಾಗುತ್ತಿದೆ.
ಡಿಸಿಪಿ ಎನಂದ್ರು?
ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಬಿ.ಜಗಲಾಸರ್, ‘ಬನಶಂಕರಿ ಠಾಣಾ ವ್ಯಾಪ್ತಿಯ 32 ವರ್ಷದ ಯುವಕನ ಮೇಲೆ ಹಲ್ಲೆಯಾಗಿದೆ. 10;30ರ ಸುಮಾರಿಗೆ ಮನೆಗೆ ಹೋಗುವಾಗ ಕೆ.ಆರ್ ರಸ್ತೆಯಲ್ಲಿ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ. ಸದ್ಯ ಯಾರು ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಯಾಕಾಗಿ ಹಲ್ಲೆ ನಡೆದಿದೆ ಎನ್ನುವ ಬಗ್ಗೆಯೂ ಸ್ಪಷ್ಟವಾದ ಮಾಹಿತಿಯಿಲ್ಲ. ಜಿಮ್ ಟ್ರೈನರ್ ಹಾಗೆ ಇನ್ನೊಂದು ಕಡೆ ಇವರು ಕೆಲಸ ಮಾಡ್ತಿದ್ರು. ಅವರು ಬಂದು ಬನಶಂಕರಿ ಠಾಣೆಗೆ ದೂರು ಕೊಟ್ಟಿದ್ದಾರೆ. ತನಿಖೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us