newsfirstkannada.com

ನಿಶ್ಚಿತಾರ್ಥ ದಿನವೇ ಕಾರು ಅಪಘಾತದಲ್ಲಿ ನಟ ಸಾವು; ಇಬ್ಬರು ಗಂಭೀರ

Share :

Published April 11, 2024 at 2:34pm

    ಶೂಟಿಂಗ್​ ಮುಗಿಸಿ ಹಿಂತಿರುಗುವಾಗ ಕಾರು ಅಪಘಾತ

    ಪಿಕಪ್​ ವಾಹನಕ್ಕೆ ಡಿಕ್ಕಿ ಹೊಡೆದ ನಟನ ಕಾರು.. ಸ್ಥಳದಲ್ಲೇ ಸಾವು

    ನಿಶ್ಚಿತಾರ್ಥ ಮಾಡಿಕೊಳ್ಳಬೇಕಾಗಿದ್ದ ನಟ ಅಪಘಾತದಲ್ಲಿ ಸಾವು

ನಿಶ್ಚಿತಾರ್ಥ ದಿನದಂದೇ ನಟ ಸೂರಜ್​ ಮೆಹರ್​ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಪಿಕಪ್​ಗೆ ನಟನ ಕಾರು ಡಿಕ್ಕಿ ಹೊಡೆದ ಪರಿಣಾಮ ಕೊನೆಯುಸಿರೆಳೆದಿದ್ದಾರೆ.

ನಟ ಸೂರಜ್​​ ಬುಧವಾರ ರಾತ್ರಿ ಚಿತ್ರೀಕರಣ ಮುಗಿಸಿ ಕಾರು ನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ರಾಯ್​ಪುರದಲ್ಲಿ ಪಿಕಪ್​ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದೆ.

ಮಾಹಿತಿ ಪ್ರಕಾರ, ನಟ ಸೂರಜ್​ ನಿಶ್ಚಿತಾರ್ಥ ದಿನದಂದೇ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಒಡಿಶಾದನಲ್ಲಿ ಇವರ ನಿಶ್ಚಿತಾರ್ಥ ನಡೆಯಬೇಕಾಗಿತ್ತು. ಆದರೆ ಪೈಪೆಡುಲಾ ಬಳಿಯ ಸಾರಸಿವಾ ಪ್ರದೇಶದಿಂದ ಬರುತ್ತಿದ್ದ ಪಿಕಪ್​ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಟ ಸಾವನ್ನಪ್ಪಿದ್ದಾರೆ.

ಇನ್ನು ಸೂರಜ್​ಗೆ 40 ವರ್ಷ ವಯಸ್ಸಾಗಿತ್ತು. ‘ಆಖ್ರಿ ಫೈಸ್ಲಾ’ ಶೂಟಿಂಗ್​ನಿಂದ ಹಿಂತಿರುವ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.

ಸೂರಜ್​ ಅವರು ನಾರದ್​ ಮೆಹರ್​ ಎಂದೇ ಖ್ಯಾತಿ ಗಳಿಸಿದ್ದರು. ಖಳನಾಯಕನ ಪಾತ್ರದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಆದರೆ ಶೂಟಿಂಗ್​ ಮುಗಿಸಿ ಹಿಂತಿರುತ್ತಿದ್ದ ವೇಳೆ ನಟ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಹಬ್ಬದ ದಿನ ಕಂದಕಕ್ಕೆ ಉರುಳಿ ಬಿದ್ದ ಟ್ರಕ್​; 17 ಜನರು ಸಾವು, 40 ಮಂದಿಗೆ ಗಾಯ

ಸೂರಜ್​ ಸಂಚರಿಸುತ್ತಿದ್ದ ಕಾರಿನಲ್ಲಿ ಮತ್ತೊಬ್ಬ ವ್ಯಕ್ತಿ ಮತ್ತು ಚಾಲಕನಿದ್ದನು. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಬಿಲಾಸ್​ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಶ್ಚಿತಾರ್ಥ ದಿನವೇ ಕಾರು ಅಪಘಾತದಲ್ಲಿ ನಟ ಸಾವು; ಇಬ್ಬರು ಗಂಭೀರ

https://newsfirstlive.com/wp-content/uploads/2024/04/Accident-2-1.jpg

Load More