/newsfirstlive-kannada/media/post_attachments/wp-content/uploads/2024/06/DARSHAN-35.jpg)
ನಟ ದರ್ಶನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿ.. 2021ರಲ್ಲಿ ಏಕಾಂಗಿಯಾಗಿ ನಾನು ದರ್ಶನ್ ಬಗ್ಗೆ ಧ್ವನಿ ಎತ್ತಿದ್ದೆ. ಅಂದೇ ಸುಧಾರಣೆ ಆಗಿದ್ರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ದರ್ಶನ್ ಜೊತೆ ಎರಡು ಸಿನಿಮಾ ಮಾಡಿದ್ದೇನೆ. ಲಂಕೇಶ್ ಪತ್ರಿಕೆ ಸಿನಿಮಾ ಅಡ್ವಾನ್ಸ್ ಹಣದಲ್ಲಿ ಹೊಸ ಸ್ಕೋಡಾ ಕಾರು ಖರೀದಿ ಮಾಡಿದ್ದರು. ಈ ಪರಿಸ್ಥಿತಿ ದರ್ಶನ್ಗೆ ಆಗಬಾರದಿತ್ತು. ಈ ಘಟನೆ ನಡೆಯೋದಕ್ಕೆ ಸಾಮಾಜಿಕ ಜಾಲತಾಣವೇ ಕಾರಣ ಎಂದರು.
ಇದನ್ನೂ ಓದಿ:ಪೂರ್ತಿ ಊಟ ಮಾಡಲ್ಲ.. ಸೆಲ್ನಲ್ಲಿ ಏಕಾಂಗಿ.. 1 ಸೆಲ್.. 1 ಚಾಪೆ.. 1 ಚೇರ್.. ದರ್ಶನ್ ಸ್ಟೇಷನ್ ಡೈರಿ..!
ಚಿತ್ರರಂಗದಿಂದ ದರ್ಶನ್ ಬ್ಯಾನ್ ಮಾಡಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿ.. ಬ್ಯಾನ್ ಅನ್ನೋ ಶಬ್ದವನ್ನ ಯಾರೂ ಉಪಯೋಗಿಸಿಕೊಳ್ಳಬಾರದು. ಯಾವುದೇ ಸಂದರ್ಭದಲ್ಲೂ ಯಾರನ್ನೂ ಬ್ಯಾನ್ ಮಾಡಬಾರದು. ಈ ಹಿಂದೆ ಮಹಿಳೆಯರನ್ನ ಬ್ಯಾನ್ ಮಾಡಿದ್ರು, ಆದ್ರೆ ಬ್ಯಾನ್ ಮಾಡಬಾರದಿತ್ತು. ಕೋರ್ಟ್ ಕೂಡ ಕೆಲಸ ಇಲ್ಲದೇ ಯಾರೂ ಇರಬಾರದು ಅಂತ ಹೇಳುತ್ತದೆ. ಪ್ರತಿಯೊಬ್ಬರೂ ಜೀವಿಸೋದಕ್ಕೆ ಕೆಲಸ ಮಾಡಲೇಬೇಕು ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.
ಇದನ್ನೂ ಓದಿ:ಕಮಿಷನರ್ ಕಂಡ್ರೆ ಸಪ್ಪೆ ಮುಖ.. ಸ್ಟೇಷನ್‌ನಲ್ಲಿ ದರ್ಶನ್ ನಡೆ ನುಡಿ ಹೇಗಿದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ