ಅವನ ಪಾಪಕರ್ಮ ಅವನ ಸುಡುತ್ತದೆ -ಜಗ್ಗೇಶ್ ಇನ್ನೂ ಏನೇನು ಹೇಳಿದ್ರು..?

author-image
Ganesh
Updated On
ಹುಲಿ ಉಗುರು ಕೇಸ್​ಗೆ ಬಿಗ್​ ಟ್ವಿಸ್ಟ್​​​​.. ಹೈಕೋರ್ಟ್​​ ಮೆಟ್ಟಿಲೇರಿದ ನಟ ಜಗ್ಗೇಶ್​​; ಕಾರಣ?
Advertisment
  • ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ
  • ದರ್ಶನ್ ಮೇಲೆ ಕೊಲೆ ಆರೋಪ ಬೆನ್ನಲ್ಲೇ ಜಗ್ಗೇಶ್ ಟ್ವೀಟ್
  • ಭಾರೀ ಚರ್ಚೆ ಆಗ್ತಿದೆ ಜಗ್ಗೇಶ್ ಮಾಡಿದ ಈ ಸ್ಟೇಟ್​ಮೆಂಟ್

ಕೊಲೆ ಆರೋಪ ಪ್ರಕರಣ ಬೆನ್ನಲ್ಲೇ ನಟ ಜಗ್ಗೇಶ್ ಟ್ವೀಟ್ ಒಂದನ್ನು ಮಾಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾರನ್ನೂ ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಕರ್ಮ ಜೀವನದ ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪ ಕರ್ಮ ಅವನ ಸುಡುತ್ತದೆ. ಕಲಿಯುಗದಲ್ಲಿ ದೇವರು ಕಲ್ಲಲ್ಲ, ಕರ್ಮಕ್ಕೆ ತತ್​ಕ್ಷಣ ಫಲಿತಾಂಶ ಉಂಟು. ರಾಮನಾಗು ರಾವಣನಾದರೆ ಅಂತ್ಯ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಚಾಲೆಂಜಿಂಗ್ ಸ್ಟಾರ್ ದರ್ಶನ್​​ ತನಿಖೆ ಹೆಂಗಿರುತ್ತೆ..? ಆ ಆರು ದಿನಗಳಲ್ಲಿ ರೋಚಕ ಟ್ವಿಸ್ಟ್​..!

ಆದರೆ ಜಗ್ಗೇಶ್ ಅವರು ತಮ್ಮ ಟ್ವೀಟ್​ನಲ್ಲಿ ಎಲ್ಲಿಯೂ ಕೂಡ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿಲ್ಲ. ಜೊತೆಗೆ ದರ್ಶನ್ ಅವರ ಹೆಸರನ್ನೂ ಪ್ರಸ್ತಾಪಿಸಿಲ್ಲ. ನಿನ್ನೆಯ ಬೆಳವಣಿಗಳ ಬೆನ್ನಲ್ಲೇ ಜಗ್ಗೇಶ್ ಈ ರೀತಿ ಟ್ವೀಟ್ ಮಾಡಿರೋದು ಚರ್ಚೆ ಆಗ್ತಿದೆ. ದರ್ಶನ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಜಗ್ಗೇಶ್ ಟ್ವೀಟ್​ನಲ್ಲಿ ಏನಿದೆ..?

ಸರ್ವಆತ್ಮಾನೇನಬ್ರಹ್ಮ
ಸರ್ವ ಜೀವಿಯಲ್ಲಿ ದೇವರಿದ್ದಾನೆ
ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ!
ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ
ಅವನ ಪಾಪಕರ್ಮ ಅವನ ಸುಡುತ್ತದೆ!
ಕಲಿಯುಗದಲ್ಲಿ ದೇವರು ಕಲ್ಲಲ್ಲಾ
ಎಲ್ಲಾ ಕರ್ಮಕ್ಕು ತತಕ್ಷಣ ಪಲಿತಾಂಶ
ಉಂಟು!
ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ!
ಮದಕ್ಕೆ ಕಾರುಣ್ಯದ ಅರಿವಿಲ್ಲಾ!

ಇದನ್ನೂ ಓದಿ:ಲಾಕಪ್​​ನಲ್ಲಿ ಚಾಲೆಂಜಿಂಗ್ ಸ್ಟಾರ್.. ನಿನ್ನೆ ರಾತ್ರಿ ಕಳಂಕಿತ ಡಿ ಗ್ಯಾಂಗ್​​ಗೆ ಪೊಲೀಸರ ಆತಿಥ್ಯ ಹೇಗಿತ್ತು..?​​

ಇದನ್ನೂ ಓದಿ:ರೇಣುಕಾಸ್ವಾಮಿ ಅಪಹರಣ ಮಾಡಿದ್ದ ಆರೋಪಿಯೂ ಅರೆಸ್ಟ್.. ಯಾರು ಈತ ಭಯಂಕರ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment