ಆಡುಜೀವಿತಂ ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದ ನಟ ಪೃಥ್ವಿರಾಜ್
ಈ ಸಿನಿಮಾ ನಡುವೆಯೇ ಹೆಚ್ಚು ನೀರು ಕುಡಿಯಬೇಕು ಅಂತ ಅನಿಸುತ್ತದೆ
ಸಿನಿಮಾ ರಿಲೀಸ್ಗೂ ಮುನ್ನವೇ ಕಮಾಲ್ ಮಾಡಿದ ನಟ ಪೃಥ್ವಿರಾಜ್ ಸಿನಿಮಾ
ಬಹುಭಾಷಾ ನಟ ಪೃಥ್ವಿರಾಜ್ ಸುಕುಮಾರನ್ ಅವರ ಬಹುನಿರೀಕ್ಷಿತ ಸಿನಿಮಾ ‘ಆಡುಜೀವಿತಂ’ ನಾಳೆ ಎಂದರೆ ಮಾರ್ಚ್ 28ರಂದು ಅದ್ಧೂರಿಯಾಗಿ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಈ ಚಿತ್ರ ಟ್ರೇಲರ್ ನೋಡಿದ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡಿತ್ತು.
ನಟ ಪೃಥ್ವಿರಾಜ್ ಸುಕುಮಾರ್ ಅವರು ನ್ಯೂಸ್ ಫಸ್ಟ್ ಪ್ರೈಮ್ ಜೊತೆ ಆಡುಜೀವಿತಂ ಸಿನಿಮಾದ ಬಗ್ಗೆ ಕುತೂಹಲಕಾರಿ ಅಂಶದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದರು. ಸಂದರ್ಶನದ ವೇಳೆ ‘ಆಡುಜೀವಿತಂ’ ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದೇನೆ. ಇದು ಕಾದಂಬರಿ ಮಾತ್ರವಲ್ಲ, ನೈಜ್ಯ ಘಟನೆಯಾದರಿತ ಸಿನಿಮಾ. ನಜೀಬ್ ಮೊಹಮ್ಮದ್ ಅವರು ಈ ನಿಜ ಘಟನೆ ಕರ್ತೃ ಎಂದು ಹೇಳಿದ್ದರು.
ಇದನ್ನೂ ಓದಿ: The Goat Life ಸಿನಿಮಾಗಾಗಿ 16 ವರ್ಷಗಳನ್ನು ಮೀಸಲಿಟ್ಟಿದ್ದೇನೆ; ನಟ ಪೃಥ್ವಿರಾಜ್ ಸುಕುಮಾರನ್
ಇದೀಗ ಈ ಸಿನಿಮಾವನ್ನು ನೋಡಿದ ಖ್ಯಾತ ನಟ ಕಮಲ್ ಹಾಸನ್ ಅವರು ನಟ ಪೃಥ್ವಿರಾಜ್ ಅವರ ಅಭಿನಯಕ್ಕೆ ಫುಲ್ ಫಿದಾ ಆಗಿದ್ದಾರೆ. ಆಡುಜೀವಿತಂ ಸಿನಿಮಾ ರಿಲೀಸ್ಗೂ ಮುನ್ನ ಸೆಲೆಬ್ರಿಟಿ ಶೋ ಏರ್ಪಡಿಸಲಾಗಿತ್ತು. ಈ ಸಿನಿಮಾವನ್ನು ಕಣ್ತುಂಬಿಕೊಂಡ ಹಿರಿಯ ನಟ ಕಮಲ್ ಹಾಸನ್ ಅವರಿಂದ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾವನ್ನು ನೋಡಿದ ಅವರು ಆಡುಜೀವಿತಂ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ನಿದೇರ್ಶಕ ಬ್ಲೆಸ್ಸಿ ಮತ್ತು ಪೃಥ್ವಿರಾಜ್ ಅವರ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
View this post on Instagram
ಆಡುಜೀವಿತಂ ಸಿನಿಮಾ ವೀಕ್ಷಣೆ ಬಳಿಕ ಈ ಬಗ್ಗೆ ಮಾತಾಡಿದ ಕಮಲ್ ಹಾಸನ್ ಅವರು, ನಾನು ಮೊದಲು ಬ್ಲೆಸ್ಸಿಗೆ ಧನ್ಯವಾದ ತಿಳಿಸುತ್ತೇನೆ. ಇದು ನಿಜಕ್ಕೂ ಕಷ್ಟದ ಕೆಲಸ. ಈ ಸಿನಿಮಾ ವೀಕ್ಷಣೆಯ ನಡುವೆ ನಿಮ್ಮೆಲ್ಲರಿಗೂ ಹೆಚ್ಚು ನೀರು ಕುಡಿಯಬೇಕು ಅಂತ ಅನಿಸುತ್ತದೆ. ವಿಭಿನ್ನ ರೀತಿಯಲ್ಲಿ ಸಿನಿಮಾ ಮಾಡುವ ನಿಮ್ಮ ಬಾಯಾರಿಕೆಯೂ ಇಲ್ಲಿ ಎದ್ದು ಕಾಣುತ್ತಿದೆ ಎಂದಿದ್ದಾರೆ.
ಪೃಥ್ವಿರಾಜ್ ಈ ಸಿನಿಮಾಕ್ಕಾಗಿ ತುಂಬಾ ಕಷ್ಟಪಟ್ಟಿದ್ದಾರೆ. ವಿಶೇಷವಾಗಿ ಅವರು ಸ್ನಾನ ಮಾಡುವ ಕ್ಲಿಪ್. ಅವನು ಇಷ್ಟು ದೂರ ಹೋಗುತ್ತಾನೆ ಎಂದು ನಾನು ಭಾವಿಸಿರಲಿಲ್ಲ. ಕ್ಯಾಮರಾಮನ್ ಕೆಲಸ ಕೂಡ ಅದ್ಭುತವಾಗಿ. ಇದನ್ನು ಸೆರೆ ಹಿಡಿಯುವುದು ತುಂಬಾ ಕಷ್ಟದ ವಿಚಾರ. ಸಿನಿಮಾ ನಿರ್ಮಾಪಕರಾಗಿ ನಾವು ಇದನ್ನು ಅರ್ಥ ಮಾಡಿಕೊಳ್ಳುತ್ತೇವೆ. ಈ ಸಿನಿಮಾಗಾಗಿ ಅವರು ಎಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಪ್ರೇಕ್ಷಕರು ಸಹ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅತ್ಯುತ್ತಮ ಚಿತ್ರ. ಜನರು ಈ ಚಿತ್ರಕ್ಕೆ ಬೆಂಬಲ ನೀಡಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ. ಈ ಸಿನಿಮಾ ನೋಡಿದ ಮಣಿರತ್ನಂ ಅವರು ಕೂಡ ತೆರೆ ಹಿಂದೆ ಪಟ್ಟ ಕಷ್ಟದ ಬಗ್ಗೆ ಆಶ್ಚರ್ಯಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ