newsfirstkannada.com

‘ಯಾವ ದೊಣ್ಣೆ ನಾಯಕ ನೀನು.. ಪ್ರಧಾನ ಮಂತ್ರಿಯೋ, ಸ್ಟೇಷನ್ ಮಾಸ್ಟರೋ’- ನಟ ಪ್ರಕಾಶ್ ರಾಜ್

Share :

Published April 27, 2024 at 8:43pm

    ರಾಮ ಮಂದಿರ ಕಟ್ಟು ಆದ್ರೆ ನಾನ್ ಕೇಳ್ತಿರೋ ರಾಮ ರಾಜ್ಯ ಎಲ್ಲಿ?

    ’ಮಹಾಪ್ರಭುಗಳು ಬರೀ ಹೆಣ, ಧರ್ಮದ ರಾಜಕೀಯ ಮಾಡೋದು’

    ನನ್ನ ಸಿನಿಮಾದಲ್ಲಿ ಅವಾ (ಮೋದಿ) ವಿಲನ್ ಎಂದ ಪ್ರಕಾಶ್ ರಾಜ್

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್‌ ಅವರು ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಇಂದು ಬರ ಪರಿಹಾರ ಘೋಷಿಸಿದೆ‌. ಡಿಸೆಂಬರ್‌ನಲ್ಲಿ ಬರ ಪರಿಹಾರ ಕೊಡಿ ಅಂದ್ರು ಯಾಕೆ ಕೊಡಲಿಲ್ಲ. ನಮ್ಮ 28 ಸಂಸದರು ಯಾಕೆ ಮಾತಾಡಲಿಲ್ಲ, ಹಲ್ಲು ಕಿಸಿದುಕೊಂಡು ನಿಂತಿದ್ರು ಎಂದು ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪ್ರಕಾಶ್ ರಾಜ್ ಅವರು ಮಹಾಪ್ರಭುಗಳು 2015ರಲ್ಲಿ ನೂರು ಸ್ಮಾರ್ಟ್ ಸಿಟಿ ಕೊಡ್ತೀನಿ ಅಂದ್ರಲ್ಲ. ಈಗ ಹತ್ತಾದ್ರು ಸ್ಮಾರ್ಟ್ ಸಿಟಿಯನ್ನ ತೋರಿಸಿ. ಯಾಕೆ ಸುಳ್ಳು ಹೇಳಿಕೊಂಡು ಓಡಾಡುತ್ತೀರಿ. ಈಗ ಮತ್ತೊಂದು ಗ್ಯಾರಂಟಿ ಹೇಳ್ತಿದ್ದೀರಿ. ಮೊದಲು ಕೊಟ್ಟ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ. ಈಗ ಮತ್ತೆ ಗ್ಯಾರಂಟಿ ಅಂತಿದ್ದೀರಲ್ಲ ಮಾತ್ ಮಾತಿಗೆ ದರ್ಶನ ಕೊಡೋದು, ರಾಜನ ಹಂಗೆ ಬರೋದು, ದಿನಕ್ಕೆ ಐದು ಡ್ರೆಸ್ ಹಾಕೋದೇ ಆಗಿದೆ ಎಂದರು.

ಯಾವ ದೊಣ್ಣೆ ನಾಯಕ ನೀನು. ನಿನ್ನ ಮನೆಯಿಂದ ದುಡ್ಡು ತಂದಿಯೇನಪ್ಪಾ. ಯಾವ ದೇಶದ ಮಹಾರಾಜ ನೀನು. ರಾಮ ಮಂದಿರ ಕಟ್ಟು ಆದ್ರೆ ನಾನ್ ಕೇಳ್ತಿರೋದು ರಾಮ ರಾಜ್ಯ ಎಲ್ಲಿ ಅಂತ. ನಮ್ಮ ಮಕ್ಕಳಿಗೆ ಉದ್ಯೋಗ, ನಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಯಾಕಿಲ್ಲ ಒಳ್ಳೆಯ ಶಿಕ್ಷಣ. ನೀನು ನಿಜವಾಗಲೂ ಕೆಲಸ ಮಾಡಿದ್ರೆ ಇಷ್ಟು ದುಡ್ಡು ಖರ್ಚು ಮಾಡುವ ಅವಶ್ಯಕತೆ ಏನಿದೆ. ನಿನ್ನ ಅಷ್ಟು ನಾಟಕ ಬಯಲಾಗಿದೆ. ಅಬ್ ಕೀ ಬಾರ್ ಚಾರ್ ಸೋ ಪಾರ್ ಅಂತಾ ಯಾಕ್ ಒದರಾಕತ್ತಿ. ಚಾರ್ ಸೋ ಆದ ಮೇಲೆ ಹೇಳು. ಯಾಕೆ ಕೆಲಸ ಮಾಡಿಲ್ಲ ಅಂತಾ ಮೊದಲು ಉತ್ತರ ಕೊಡಿ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ.. ಸಚಿವ ಜಮೀರ್ ಅಹ್ಮದ್ ಖಾನ್ ಮಾತಿನ ಅಬ್ಬರಕ್ಕೆ ಪೀಸ್‌, ಪೀಸ್‌; ವಿಡಿಯೋ ನೋಡಿ!

ಇನ್ನು, ನನ್ನ ಮುಖ ನೋಡಿ ವೋಟ್ ಕೊಡು ಅಂತಿಯಲ್ಲಪ್ಪಾ ಯಾಕೆ ಕೆಲಸ ಮಾಡಿಲ್ಲ ಹೇಳಿ. ಎರಡು ನಾಲಿಗೆ ರೀತಿ ಮಾತಾಡೋದು ಯಾಕೆ‌. ಅಭಿವೃದ್ಧಿ ಕೆಲಸ ಮಾಡಿರೋ ಬಗ್ಗೆ ಹೇಳೋದು ಬಿಟ್ಟು, ಕಾಗಕ್ಕ, ಗೂಬಕ್ಕ ಕಥೆ ಹೇಳೋರ ಬಗ್ಗೆ ಪಾಠ ಕಲಿಸಬೇಕು. ನಾನು ಹೆದರುವವನಲ್ಲ, ಹೇಳಿದ ಮಾತಿಗೇ ಬದ್ಧನಾಗಿದ್ದೇನೆ. ನಿಮಗೆ ವೋಟ್ ಕೊಟ್ಟಿದ್ದು ಆಡಳಿತ ಮಾಡೋದಕ್ಕೆ ಅದನ್ನ ಬಿಟ್ಟು ಹೆಚ್ಚಿಗೆ ಯಾಕೆ ಹೇಳಬೇಕು. ನೀನ್ ಏನ್ ಪ್ರಧಾನ ಮಂತ್ರಿಯೋ, ಸ್ಟೇಷನ್ ಮಾಸ್ಟರೋ. ಬರೀ ಹೆಣ, ಧರ್ಮದ ರಾಜಕೀಯ ಮಾಡೋದು. ನಾನು ಪ್ರಜೆ, ವಿರೋಧ ಪಕ್ಷದವನಲ್ಲ, ನಾನ್ ಏನೇ ಪ್ರಶ್ನೆ ಕೇಳಿದ್ರು ಉತ್ತರ ಕೊಡಬೇಕು. ಪ್ರಜೆ ಯಾವಾಗಲೂ ಆಳುತ್ತಿರುವ ಪಕ್ಷಕ್ಕೆ ಪ್ರಶ್ನೆ ಮಾಡೋದು. ನನ್ನ ಸಿನಿಮಾದಲ್ಲಿ ಅವಾ (ಮೋದಿ) ವಿಲನ್ ಎಂದು ಪ್ರಕಾಶ್ ರಾಜ್ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಯಾವ ದೊಣ್ಣೆ ನಾಯಕ ನೀನು.. ಪ್ರಧಾನ ಮಂತ್ರಿಯೋ, ಸ್ಟೇಷನ್ ಮಾಸ್ಟರೋ’- ನಟ ಪ್ರಕಾಶ್ ರಾಜ್

https://newsfirstlive.com/wp-content/uploads/2024/04/Prakash-Raj-1.jpg

Load More