newsfirstkannada.com

ಆಪ್ತಮಿತ್ರ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಸೌಂದರ್ಯ ಹೇಗಿದ್ದರು? ರಮೇಶ್ ಅರವಿಂದ್ ಬಿಚ್ಚಿಟ್ರು ನಾಗವಲ್ಲಿ ರಹಸ್ಯ!

Share :

Published April 15, 2024 at 9:26pm

Update April 15, 2024 at 9:30pm

    ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿ ಅಭಿನಯ

    ನಟ ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್ ಜೊತೆ ಸೌಂದರ್ಯ ನಟನೆ

    ಆ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ರಾ ಬಹುಭಾಷಾ ನಟಿ ಸೌಂದರ್ಯ?

ಬಹುಭಾಷಾ ನಟಿ ಸೌಂದರ್ಯಾ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಆಪ್ತಮಿತ್ರ ಸಿನಿಮಾದ ನೆನಪಿಸಿಕೊಂಡರೇ ಸಾಕು. ಆ ನಾಗವಲ್ಲಿ ಪಾತ್ರದ ನೆನಪಾಗುತ್ತೆ. ಅಷ್ಟರ ಮಟ್ಟಿಗೆ ನಾಗವಲ್ಲಿ ಪಾತ್ರದ ಮೂಲಕ ನಟಿ ಸೌಂದರ್ಯ ಹೆಸರುವಾಸಿಯಾಗಿದ್ದರು. ದಕ್ಷಿಣ ಭಾರತದ ಜನಪ್ರಿಯ ನಟಿ ಸೌಂದರ್ಯ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಸ್ಟಾರ್​ ನಟರ ಜೊತೆ ನಟನೆ ಮಾಡುವ ಮೂಲಕ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿ ಸೌಂದರ್ಯ ನಾಯಕಿಯಾಗಿ ಅಭಿನಯಿಸಿದ್ದರು. ಅದರಲ್ಲೂ ನಟ ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್, ನಟಿ ಪ್ರೇಮಾ ಅವರ ಸಿನಿಮಾವಾದ ಆಪ್ತಮಿತ್ರದಲ್ಲಿ ಸೌಂದರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿತ್ತು.

ಇದನ್ನೂ ಓದಿ: ಬರೋಬ್ಬರಿ 200 ಕೋಟಿ ಆಸ್ತಿ ದಾನ ಮಾಡಿದ ಖ್ಯಾತ ಉದ್ಯಮಿ ದಂಪತಿ; ಕಾರಣವೇನು?

View this post on Instagram

A post shared by Zee Kannada (@zeekannada)

ಆಪ್ತಮಿತ್ರ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್​ ವೇಳೆ ನಡೆದ ಘಟನೆಯ ಬಗ್ಗೆ ಖ್ಯಾತ ನಟ ರಮೇಶ್ ಅರವಿಂದ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಮಹಾನಟಿ ರಿಯಾಲಿಟಿ ಶೋನಲ್ಲಿ ನಟಿ ಸೌಂದರ್ಯ ಅವರು ಶೂಟಿಂಗ್​ ಸಂದರ್ಭದಲ್ಲಿ ಹೇಗೆ ಅಭಿನಯಿಸುತ್ತಿದ್ದರು ಎಂಬುವುದರ ಬಗ್ಗೆ ಮಾತಾಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಆ ಪಾತ್ರಗಳಲ್ಲಿ ಆಳವಾಗಿ ತೆಗೆದುಕೊಂಡು ನಟನೆ ಮಾಡಿದ್ದರು. ನಾಗವಲ್ಲಿಯೇ ಅವರ ಮೈಮೇಲೆ ಬಂದು ಬಿಟ್ರಾ ಅನ್ನುವಷ್ಟು ಇನ್ವಾಲ್ ಆಗಿ ಮಾಡುತ್ತಿದ್ದರು. ಅವರಿಗೆ ಕ್ಲಾಸ್ಟೋಪೋಬಿಯಾ ಸಮಸ್ಯೆಯಿತ್ತು. ಅವರಿಗೆ ಸಣ್ಣ ರೂಮ್​​, ಲಿಫ್ಟ್​ನಲ್ಲಿ ಇರೋದಕ್ಕೆ ಆಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್ನು ನಟನ ಈ ಮಾತನ್ನು ಕೇಳಿದ ಅಭಿಮಾನಿಗಳು ಫುಲ್​ ಶಾಕ್​ ಆಗಿದ್ದಾರೆ.

ಕ್ಲಾಸ್ಟ್ರೋಫೋಬಿಯಾ ಎಂದರೇನು..? ಈ ಸಮಸ್ಯೆಯಿಂದ ಜನ ಹೇಗೆ ಬಳಲುತ್ತಾರೆ?

ಕ್ಲಾಸ್ಟ್ರೋಫೋಬಿಯಾ ಹೊಂದಿರುವ ಜನರು ಸಾಮಾನ್ಯವಾಗಿ ಉಸಿರುಗಟ್ಟುವಿಕೆ ಅಥವಾ ನಿರ್ಬಂಧದ ತೀವ್ರ ಭಯವನ್ನು ಅನುಭವಿಸುತ್ತಾರೆ. ಜೊತೆಗೆ ಅದರಿಂದ ತಪ್ಪಿಸಿಕೊಳ್ಳಲು ಬಯಸುತ್ತಾರೆ. ಈ ಪರಿಸ್ಥಿತಿಯು ಯಾವಾಗಲೂ ಭಯ ಅಥವಾ ಆತಂಕವನ್ನು ಉಂಟುಮಾಡುತ್ತದೆ. ಈ ಪರಿಸ್ಥಿತಿಯನ್ನು ತಪ್ಪಿಸುವುದು, ಅಥವಾ ತೀವ್ರ ಭಯ ಅಥವಾ ಆತಂಕದಿಂದ ಸಹಿಸಿಕೊಳ್ಳುವುದು. ಭಯ ಅಥವಾ ಆತಂಕವು ಯಾವುದೇ ನಿಜವಾದ ಅಪಾಯಕ್ಕೆ ಅನುಗುಣವಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಪ್ತಮಿತ್ರ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಸೌಂದರ್ಯ ಹೇಗಿದ್ದರು? ರಮೇಶ್ ಅರವಿಂದ್ ಬಿಚ್ಚಿಟ್ರು ನಾಗವಲ್ಲಿ ರಹಸ್ಯ!

https://newsfirstlive.com/wp-content/uploads/2024/04/soundarya3.jpg

Load More