/newsfirstlive-kannada/media/post_attachments/wp-content/uploads/2025/03/RANYA-RAO.jpg)
ಬಂಗಾರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದ್ರಲ್ಲೂ ಹೆಣ್ಮಕ್ಕಳಿಗೆ ಚಿನ್ನ ಅಂದ್ರೆ ಬಲು ಇಷ್ಟ. ಹಾಗಂತ ಸಿಕ್ಕ ಸಿಕ್ಕಲ್ಲಿ ಅನಧಿಕೃತವಾಗಿ ಗೋಲ್ಡ್‌ನ ತಗೊಂಡು ಬಂದ್ರೆ ಲಾಕ್ ಆಗೋದು ಪಕ್ಕಾ. ಇದೀಗ ಸ್ಯಾಂಡಲ್‌ವುಡ್‌ನ ಬ್ಯೂಟಿ.. ಸ್ಟಾರ್ ನಟರಿಗೆ ಜೋಡಿಯಾಗಿದ್ದ ನಟಿ ಚಿನ್ನ ಸಾಗಾಟ ಮಾಡಿ ಜೈಲು ಸೇರಿದ್ದಾರೆ. ಆ ನಟಿಯ ಹೆಸರು ರನ್ಯಾ ರಾವ್!
ಕಾಫಿನಾಡಿನಿಂದ ಬಂದು ಚಂದನವನದಲ್ಲಿ ಮಿಂಚಿ ಮರೆಯಾಗಿದ್ದ ನಟಿ ರನ್ಯಾ ರಾವ್​ಗೆ ಸಂಕಷ್ಟ ಹೆಚ್ಚಾಗಿದೆ. ದುಬೈನಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದ ವೇಳೆ ಕೆಂಪೇಗೌಡ ಏರ್​ಪೋರ್ಟ್​ನ ಡಿಆರ್​ಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ಬಳಿಕ ರನ್ಯಾರನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರು ಪಡಿಲಾಗಿತ್ತು. ವಿಚಾರಣೆ ಸಲುವಾಗಿ ರನ್ಯಾ ಅವರನ್ನು ವಶಕ್ಕೆ ನೀಡುವಂತೆ ಡಿಆರ್​ಐ ಅಧಿಕಾರಿಗಳು ಮನವಿ ಮಾಡಿದ್ರು. ಆದರೆ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಜಡ್ಜ್ ಆದೇಶಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಳಪಡಿಸುವುದಕ್ಕೂ ಮುನ್ನ ನಟಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯ್ತು.
ಇದನ್ನೂ ಓದಿ: ದೇಹದ ಒಳಗೆ 15 kg ಚಿನ್ನ.. ನಟಿ ರನ್ಯಾ ರಾವ್ ಲಾಕ್ ಆಗಿದ್ದು ಹೇಗೆ? ತಪ್ಪು ಸಾಬೀತಾದ್ರೆ ಜೈಲು ಶಿಕ್ಷೆ?
ಬಟ್ಟೆಯಲ್ಲೇ ಅಡಗಿತ್ತು ಮುಕ್ಕಾಲು ಭಾಗ ಗೋಲ್ಡ್​..?
ಕೆಜಿಗಟ್ಟಲೇ ಚಿನ್ನವನ್ನ ಸಾಗಿಸಲು ಹೋಗಿ ಸಿಕ್ಕಿ ಬಿದ್ದ ರನ್ಯಾ ರಾವ್​ ಐಡಿಯಾ ಕಂಡು ಡಿಐಆರ್​ ಅಧಿಕಾರಿಗಳೇ ಶಾಕ್​ ಆಗಿದ್ದಾರೆ ಎನ್ನಲಾಗಿದೆ. ರನ್ಯಾ ಅಕ್ರಮವಾಗಿ ತಂದಿದ್ದ 14.8 ಕೆ.ಜಿ ಚಿನ್ನದ ಪೈಕಿ ಆಕೆ ತೊಟ್ಟಿದ್ದ ಬಟ್ಟೆಯಲ್ಲೇ ಮುಕ್ಕಾಲು ಭಾಗ ಇತ್ತು ಎನ್ನಲಾಗಿದೆ. ಅಂದ್ರೆ 14 ಕೆ.ಜಿಯಷ್ಟು ಚಿನ್ನ ಇತ್ತಂತೆ.. ಉಳಿದದ್ದು ಬ್ಯಾಗ್​ನಲ್ಲಿ ಪತ್ತೆ ಆಗಿದೆ. ಎಲ್ಲವೂ ಗಟ್ಟಿ ಬಾರ್ ಅಂದ್ರೆ ಬಿಸ್ಕೆಟ್ ಗಿಂತ ಉದ್ದ ಹಾಗೂ ದಪ್ಪದ ರೂಪದಲ್ಲಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ರನ್ಯಾ ರಾವ್ ಸುತ್ತ ಅನುಮಾನಗಳು
ಕೆಜಿ ಕೆಜಿ ಅಕ್ರಮ ಚಿನ್ನ ತಂದು ಸಿಕ್ಕಿ ಬಿದ್ದ ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್​ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ನಟಿ ರನ್ಯಾ ರಾವ್ ಕಳೆದ 15 ದಿನದಲ್ಲಿ 4 ಬಾರಿ ದುಬೈಗೆ ಹೋಗಿ ಬಂದಿದ್ದಾರೆ. ಹೀಗಾಗಿ ಯಾವ ಕಾರಣಕ್ಕೆ ಪದೇ ಪದೇ ದುಬೈ ಹೋಗುತ್ತಿದ್ದರು ಎಂಬ ಅನುಮಾನ ಮೂಡಿದೆ. ಇನ್ನು ನಟಿ ರನ್ಯಾ ರಾವ್ ತಂದೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಡಿಜಿಪಿ ಆಗಿದ್ದಾರೆ. ಇನ್ನು ರನ್ಯಾ ಹೇಳಿದಂತೆ ಏರ್​ಪೋರ್ಟ್​ಗೆ ಕೂಡಲೇ ಪೊಲೀಸರು ಬಂದಿದ್ದಾರೆ. ಹೀಗಾಗಿ ಕೇಸ್​ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಸಂಬಂಧ ಇದ್ಯಾ ಎಂಬ ಸಂಶಯ ಮೂಡಿದೆ. ನಟಿ ರನ್ಯಾ ರಾವ್ ಒಂದಲ್ಲ ಎರಡಲ್ಲ 14.58 ಕೆ.ಜಿ ಚಿನ್ನವನ್ನು ತಂದಿದ್ದಾಳೆ. ಇದನ್ನು ನೋಡ್ತಿದ್ರೆ, ಒಬ್ಬರೇ ಈ ಕೃತ್ಯ ಎಸಗಿದ್ದಾರಾ, ಇಲ್ಲ ಈಕೆಯ ಜೊತೆ ಯಾವುದಾದರೂ ಸಿಂಡಿಕೇಟ್ ಇದೆಯಾ ಎಂಬ ಅನುಮಾನ ಡಿಐಆರ್​ ಅಧಿಕಾರಿಗಳಿಗೆ ಮೂಡಿದೆ. ಹೀಗಾಗಿ ಪೊಲೀಸರನ್ನು ಡಿಐಅರ್​ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಒಟ್ಟಾರೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ನಟಿ ರನ್ಯಾ ರಾವ್​ ಬಂಧನಕ್ಕೊಳಗಾಗಿ, ಜೈಲು ಸೇರಿದ್ದಾರೆ. ಇನ್ನು ಸೂಕ್ತ ವಿಚಾರಣೆಯ ಬಳಿಕ ನಟಿಯ ಹಿಂದಿರೋ ಗೋಲ್ಡ್ ಸ್ಮಗ್ಲಿಂಗ್ ಜಾಲದ ಬಗ್ಗೆ ಗೊತ್ತಾಗಬೇಕಿದೆ.
ಇದನ್ನೂ ಓದಿ: PHOTOS: ಕೊಡಗಿನ ಕುವರಿ ಅಲ್ಲ.. ಕಾಶ್ಮೀರದ ಬೆಡಗಿಯಾದ ಕನ್ನಡದ ಸ್ಟಾರ್ ನಟಿ ಶ್ವೇತಾ ಚೆಂಗಪ್ಪ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ