ಬಹುಭಾಷಾ ನಟ ಸಯ್ಯಾಜಿ ಶಿಂಧೆ ದಿಢೀರ್​​ ಆಸ್ಪತ್ರೆಗೆ ದಾಖಲು; ಆರೋಗ್ಯಕ್ಕೆ ಏನಾಯ್ತು?

author-image
Veena Gangani
Updated On
ಬಹುಭಾಷಾ ನಟ ಸಯ್ಯಾಜಿ ಶಿಂಧೆ ದಿಢೀರ್​​ ಆಸ್ಪತ್ರೆಗೆ ದಾಖಲು; ಆರೋಗ್ಯಕ್ಕೆ ಏನಾಯ್ತು?
Advertisment
  • ಸತಾರಾದಲ್ಲಿರುವ ಪ್ರತಿಭಾ ಆಸ್ಪತ್ರೆಯಲ್ಲಿ ಸಯ್ಯಾಜಿ ಶಿಂಧೆ ಚಿಕಿತ್ಸೆ
  • ನಟ ಸಯ್ಯಾಜಿ ಶಿಂಧೆ ಅವರ ಆರೋಗ್ಯದಲ್ಲಿ ದಿಢೀರ್​ ಏರುಪೇರು
  • ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟನೆ

ಖ್ಯಾತ ಬಹುಭಾಷಾ ನಟ ಸಯ್ಯಾಜಿ ಶಿಂಧೆ ಅವರಿಗೆ ದಿಢೀರ್​ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅದ್ಭುತವಾಗಿ ಸೈ ಎನಿಸಿಕೊಂಡಿದ್ದ ನಟ ಆಸ್ಪತ್ರೆಗೆ ದಾಖಲಾಗಿದ್ದಾರೆ.

publive-image

ನಟ ಸಯ್ಯಾಜಿ ಶಿಂಧೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ವೈದ್ಯರು ನಟನ ಹೃದಯದಲ್ಲಿ ರಕ್ತನಾಳ ಬ್ಲಾಕ್ ಆಗಿರುವುದನ್ನು ಕಂಡು ಬಂದಿದೆ. ಇದಾದ ಬಳಿಕ ನಿನ್ನೆ ಮತ್ತೆ ನಟ ಸಯ್ಯಾಜಿ ಶಿಂಧೆ ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:VIDEO: ಗ್ರಾಹಕರೇ ಫುಡ್​ ಆರ್ಡರ್​​ ಮಾಡೋ ಮುನ್ನ ಎಚ್ಚರದಿಂದಿರಿ! ವೆಜ್​ ಚೀಸ್​​ನಲ್ಲಿ ನೊಣ ಪತ್ತೆ!

ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ನಟ ಸಯ್ಯಾಜಿ ಶಿಂಧೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೀಘ್ರ ಗುಣಮುಖರಾಗಲಿ ಎಂದು ಕಾಮೆಂಟ್​ ಮಾಡುವ ಮೂಲಕ ಪ್ರಾರ್ಥಿಸುತ್ತಿದ್ದಾರೆ. ಸದ್ಯ ಇನ್ನೆರಡು ದಿನಗಳಲ್ಲಿ ನಟ ಸಯ್ಯಾಜಿ ಶಿಂಧೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಈಗ ​ಸತಾರಾದಲ್ಲಿರುವ ಪ್ರತಿಭಾ ಆಸ್ಪತ್ರೆಯಲ್ಲಿ ಸಯ್ಯಾಜಿ ಶಿಂಧೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment