ನಟಿ ಅಮೂಲ್ಯಗೆ ಚಾನ್ಸ್​ ಕೊಡಿಸ್ತೀನಿ ಅಂತ ಮಂಚಕ್ಕೆ ಕರೆದ ಯುವಕ.. ಆಮೇಲೇನಾಯ್ತು?

author-image
Bheemappa
Updated On
ನಟಿ ಅಮೂಲ್ಯಗೆ ಚಾನ್ಸ್​ ಕೊಡಿಸ್ತೀನಿ ಅಂತ ಮಂಚಕ್ಕೆ ಕರೆದ ಯುವಕ.. ಆಮೇಲೇನಾಯ್ತು?
Advertisment
  • ರಾತ್ರಿ ಇಡೀ ಮೆಸೇಜ್, ಕಾಲ್ ಮಾಡಿ ಕಿರುಕುಳ ನೀಡಿದ್ದ ಯುವಕ
  • ಬೆಂಗಳೂರಿನ ಆರ್.ಆರ್ ನಗರದ ಪೊಲೀಸ್​ ಠಾಣೆಯಲ್ಲಿ ದೂರು
  • ಸೂರ್ಯ ಅನ್ನೋ ಯುವಕನ ಅತಿರೇಕದ ವರ್ತನೆಗೆ ಬೇಸತ್ತ ನಟಿ

ಬೆಂಗಳೂರು: ಯುವಕನೊಬ್ಬ ಕಾಸ್ಟಿಂಗ್ ಡೈರೆಕ್ಟರ್​ ಅಂತ ಹೇಳಿ ನಟಿ ಅಮೂಲ್ಯ ಗೌಡಳನ್ನ ಮಂಚಕ್ಕೆ ಕರೆದಿರುವ ಆರೋಪ ಕೇಳಿ ಬಂದಿದೆ. ಸದ್ಯ ಈ ಸಂಬಂಧ ಆರ್​ಆರ್ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಸೂರ್ಯ ಎನ್ನುವ ಯುವಕ ತನ್ನನ್ನು ಕಾಸ್ಟಿಂಗ್ ಡೈರೆಕ್ಟರ್ ಎಂದು ನಟಿ ಅಮೂಲ್ಯ ಗೌಡ ಬಳಿ ಪರಿಚಯ ಮಾಡಿಕೊಂಡಿದ್ದನು. ಬಳಿಕ ಶೂಟಿಂಗ್​ನಲ್ಲಿ ಚಾನ್ಸ್​ ಕೊಡಿಸುತ್ತೇನೆ ಎಂದು ಆಡಿಷನ್​ಗೆ ಬಾ ಅಂತ ಕರೆದು ವಾಟ್ಸ್​ಆ್ಯಪ್​ ಮೂಲಕ ಅಶ್ಲೀಲ ಮೆಸೇಜ್ ಮಾಡಿದ್ದಾನೆ. ಇದು ಅಲ್ಲದೇ ಇಡೀ ರಾತ್ರಿಯೆಲ್ಲ ಫೋನ್ ಕಾಲ್, ಮೆಸೇಜ್ ಮಾಡಿದ್ದರಿಂದ ನಟಿ ಬೇಸತ್ತು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 30 ರಂದು ಆರ್​ಆರ್ ನಗರದ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲು ಮಾಡಿದ್ದರು.

ಇದನ್ನೂ ಓದಿ:ಬೆಂಗಳೂರಿಗರಿಗೆ ಗುಡ್‌ನ್ಯೂಸ್‌.. ವಾರವಿಡೀ ಮತ್ತೆ ಮಳೆರಾಯನ ಅಬ್ಬರ; ಎಲ್ಲಿ? ಯಾವಾಗ?

ಆದರೆ ಮೊದ ಮೊದಲು ಪೊಲೀಸರು ಈ ವಿಷಯವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಆ ಯುವಕನ ಅತಿರೇಕದ ವರ್ತನೆ, ವಾಟ್ಸ್​ಆ್ಯಪ್​ನಲ್ಲಿ ಕೆಟ್ಟದಾದ ಸಂದೇಶ ರವಾನೆಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಯಾವ ಪೋಲೀಸರಿಗೆ ಹೇಳ್ತಿಯಾ, ಹೇಳ್ಕೋ ಹೋಗೆ ಎಂದು ಅವಾಜ್ ಹಾಕಿದ್ದಾನೆ. ಇದರಿಂದ ಬೇಸತ್ತಿದ್ದ ನಟಿ ಪೊಲೀಸರಿಗೆ ದೂರು ಕೊಟ್ಟ ಬಳಿಕ ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ. ಸದ್ಯ ಪೊಲೀಸರು ಯುವಕನನ್ನ ಅರೆಸ್ಟ್ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment