newsfirstkannada.com

ಬಿಗ್​ಬಾಸ್​ ಬೆಡಗಿ ಅನುಪಮಾ ಗೌಡ ಆತ್ಮಹತ್ಯೆಗೆ ಯತ್ನಿಸಿದ್ರಾ? ಆ ಘಟನೆ ಬಗ್ಗೆ ಹೇಳಿದ್ದೇನು?

Share :

Published April 30, 2024 at 5:06pm

    ತನ್ನ ಜೀವನದಲ್ಲಾದ ಏರುಪೇರುಗಳ ಬಗ್ಗೆ ಹೇಳಿದ ನಿರೂಪಕಿ ಅನುಪಮಾ

    ನಗುತ್ತಾ ಎಲ್ಲರನ್ನೂ ನಗಿಸುತ್ತಾ ಇರೋ ನಟಿ ಅನುಪಮಾ ಗೌಡಗೇ ಆಗಿದ್ದೇನು?

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಅನುಪಮಾ ಗೌಡ ವಿಡಿಯೋ

ಸದಾ ಹಸನ್ಮುಖಿ, ನಗು ಮುಖದ ಚೆಲುವೆ ನಟಿ ಅನುಪಮಾ ಗೌಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರೋ ನಟಿ ಅನುಪಮಾ ಗೌಡ ಅವುರು ಅಭಿಮಾನಿಗಳಿಗೆ ಶಾಕಿಂಗ್​​ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಹೌದು, ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​​ಬಾಸ್​​ ಖ್ಯಾತಿಯ ನಟಿ ಅನುಪಮಾ ಗೌಡ ಅವರು ಸೋಷಿಯಲ್​ ಮೀಡಿಯಾದಲ್ಲಿ ತುಂಬಾನೇ ಌಕ್ಟಿವ್ ಆಗಿರೋ ಬೆಡಗಿ. ಎಲ್ಲರ ಕಣ್ಣು ಕುಕ್ಕುವಂತೆ ಫೋಟೋಶೂಟ್​​​ ಮಾಡಿಸಿಕೊಳ್ಳುತ್ತಾ ಇರುತ್ತಾರೆ.

ಇದನ್ನೂ ಓದಿ: Video: ‘ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ರೆ ಹ್ಯಾಂಗ್ ಮಾಡಿ‘- ಕುಮಾರಸ್ವಾಮಿ ಆಕ್ರೋಶ

ಆದರೆ ಸಾಕಷ್ಟು ಜನರು ನಟ ಹಾಗೂ ನಟಿಯರ ಬಗ್ಗೆ ಬೇರೆ ರೀತಿಯಲ್ಲೇ ಆಲೋಚನೆ ಮಾಡಿರುತ್ತಾರೆ. ಸ್ಟಾರ್​ ನಟ ನಟಿಯರ ಬಳಿ ಸಾಕಷ್ಟು ದುಡ್ಡು ಇರುತ್ತದೆ. ಯಾವಾಗಲೂ ಸುಖ ಶಾಂತಿಯಿಂದ ಜೀವನ ನಡೆಸುತ್ತಾರೆ. ಅವರಿಗೆಲ್ಲ ಯಾವುದೇ ಕಷ್ಟ ಇರುವುದಿಲ್ಲ ಅಂತಾ. ಆದರೆ ಅನೇಕ ಜನರಿಗೆ ಗೊತ್ತೇ ಇಲ್ಲ. ಅವರು ತೆರೆ ಮೇಲೆ ಕಲರ್​​ಫುಲ್​ ಆಗಿದ್ದರು, ನಿಜ ಜೀವನದಲ್ಲಿ ಅವರಿಗೆ ಆದಂತಹ ಕಷ್ಟಗಳು ಇರುತ್ತವೆ ಅಂತಾ. ಆದರೆ ಯಾವಾಗಲೂ ನಗುತ್ತಾ ನಗಿಸುತ್ತಾ ಇರುವಂತಹ ನಟಿಯ ಜೀವನದಲ್ಲಿಯೂ ಅದೆಷ್ಟೋ ಕಹಿ ಘಟನೆಗಳು ಸಂಭವಿಸಿದೆ.

View this post on Instagram

A post shared by Rj Rapid Rashmi (@rapidrashmi)

ಹೌದು, ಱಪಿಡ್​​ ರಶ್ಮಿ ಅವರ ಸಂದರ್ಶನದಲ್ಲಿ ಈ ಬಗ್ಗೆ ನಟಿ ಅನುಪಮಾ ಗೌಡ ಅವರು ಅವರ ಜೀವನದಲ್ಲಾದ ಕಹಿ ಘಟನೆಗಳ ಬಗ್ಗೆ ಮಾತಾಡಿದ್ದಾರೆ. ಸುಮಾರು 7-8 ವರ್ಷಗಳ ಹಿಂದೆ ನಾನು ಖಿನ್ನತೆಗೆ ಒಳಗಾಗಿದ್ದೆ. ಆಗ ನಾನು ಆತ್ಮಹತ್ಯೆ ಯೋಚಿಸಿದ್ದೆ. ಆದರೆ ನನಗೆ ಇಂಡಸ್ಟ್ರಿ, ಫ್ಯಾಮಿಲಿ ವೈಯಕ್ತಿಕ ಜೀವನ್ನು ಹೇಗೆ ಸಾಗಿಸಬೇಕು ಅಂತ ಗೊತ್ತಿರಲಿಲ್ಲ. ಅಂತಹ ಸಂದರ್ಭ ಬಂದಿದ್ದಕ್ಕೆ, ಅದೇ ವೇಳೆ ನನ್ನ ಸ್ನೇಹಿತರು ನನ್ನ ಜೊತೆ ನಿಂತಿದ್ದಕ್ಕೆ, ಕೆಲವೊಂದು ಶೋಗಳು ನನಗೆ ಸಿಕ್ಕಿದ್ದಕ್ಕೆ ನಾನು ಸ್ಟ್ರಾಂಗ್ ಆಗಿಬಿಟ್ಟೆ. ಮುಂದೆ ಹೋಗುತ್ತಾ ಹೋಗುತ್ತಾ.. ಒಂದೊಂದು ಹಂತದಲ್ಲಿ ಒಬ್ಬರು ಸಿಗುತ್ತಾ ಹೋದರು. ನಾನು ಒಂದೊಂದೇ ವಿಚಾರವನ್ನು ಅವರಿಂದ ಕಲಿಯುತ್ತೇವೆ. ಅವರ ಪಾಠನೇ ನಮ್ಮನ್ನು ಇನ್ನಷ್ಟು ಸ್ಟ್ರಾಂಗ್ ಆಗಿ ಮಾಡಿಬಿಡುತ್ತೆ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು, ಅಕ್ಕ ನೀವೆಷ್ಟು ಸ್ಟ್ರಾಂಗ್ ಆಗಿದ್ದೀರಿ. ನಿಮ್ಮಂತೆ ನಾವು ಇರಬೇಕು. ನೀವು ಬೆಳೆದು ಬಂದ ಹಾದಿ ನನಗೆ ತುಂಬಾ ಇಷ್ಟ ಆಯ್ತು ಎಂದು ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​ ಬೆಡಗಿ ಅನುಪಮಾ ಗೌಡ ಆತ್ಮಹತ್ಯೆಗೆ ಯತ್ನಿಸಿದ್ರಾ? ಆ ಘಟನೆ ಬಗ್ಗೆ ಹೇಳಿದ್ದೇನು?

https://newsfirstlive.com/wp-content/uploads/2024/04/anupama-gowda1.jpg

Load More